Advertisement

ಕಲೆಗೆ ಈಶ್ವರಯ್ಯರ ಕೊಡುಗೆ ಅನನ್ಯ: ಡಾ|ವರದರಾಜ ಚಂದ್ರಗಿರಿ

01:00 AM Feb 08, 2019 | Harsha Rao |

ಮಂಜೇಶ್ವರ: ಕರಾವಳಿಯಲ್ಲಿ ಸಂಗೀತ, ಸಾಹಿತ್ಯ, ಯಕ್ಷಗಾನ, ಜಾನಪದ ಕಲೆಗಳಿಗೆ ಉತ್ತೇಜನ ನೀಡಿ ಅದರ ಬೆಳವಣಿಗೆಗೆ ಪೂರಕವಾಗುವ ರೀತಿಯಲ್ಲಿ ವಿಮರ್ಶಾತ್ಮಕ ಲೇಖನಗಳನ್ನು ಬರೆದು ಪ್ರೋತ್ಸಾಹಿಸುತ್ತಿದ್ದ ಈಶ್ವರಯ್ಯನವರ ನಿಧನ ನಿಜಾರ್ಥದಲ್ಲಿ ಪತ್ರಿಕಾರಂಗಕ್ಕೆ, ಸಾಹಿತ್ಯ, ಸಂಗೀತ ಕ್ಷೇತ್ರಗಳಿಗೆ ತುಂಬಲಾರದ ನಷ್ಟವೆಂದು ಖ್ಯಾತ ಸಾಹಿತಿ, ಚಿಂತಕ, ಪ್ರಾಧ್ಯಾಪಕ ಡಾ|ವರದರಾಜ ಚಂದ್ರಗಿರಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಮಂಜೇಶ್ವರದ ಗಿಳಿವಿಂಡು ಆವರಣದಲ್ಲಿ ಕ.ಸಾ.ಪ. ಮತ್ತು ಗೋವಿಂದ ಪೈ ಸ್ಮಾರಕ ಟ್ರಸ್ಟ್‌ ಆಯೋಜಿಸಿದ ಖ್ಯಾತ ಪತ್ರಕರ್ತ, ಸಾಹಿತ್ಯ, ಸಂಗೀತ, ಯಕ್ಷಗಾನ, ಜಾನಪದ ಕಲೆಗಳ ವಿಮರ್ಶಕ ದಿ| ಅನಂತಪುರ ಈಶ್ವರಯ್ಯ ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪತ್ರಕರ್ತ, ಸಂಘಟಕ ದಯಾಸಾಗರ ಚೌಟ ಮುಂಬೈ ಅವರು ಈಶ್ವರಯ್ಯ ಅವರ ಜೊತೆಗಿನ ಒಡನಾಟದ ಸವಿನೆನಪನ್ನು ಹಂಚಿಕೊಂಡರು. ಶಾಸ್ತ್ರೀಯವಾಗಿ ಸಂಗೀತವನ್ನು ಅಭ್ಯಸಿಸಿಲ್ಲವಾದರೂ ಈಶ್ವರಯ್ಯನವರು ಸಂಗೀತ ಕಲೆಗಳ ಕುರಿತು ಆಳವಾದ ಅಧ್ಯಯನ ಮಾಡಿದ್ದರು. ಅವರು ವಿಮರ್ಶಾತ್ಮಕ ಲೇಖನಗಳು ಈ ಕಲಾ ಪ್ರಕಾರಗಳ ಬೆಳವಣಿಗೆಗೆ ಪೂರಕವಾಗುತ್ತಿತ್ತು ಎಂದು ಅವರು ಹೇಳಿದರು.

ಖ್ಯಾತ ಪಿಟೀಲು ವಾದಕ, ಕಾಸರ ಗೋಡು ಸರಕಾರಿ ಕಾಲೇಜಿನ ಸಹ ಪ್ರಾಧ್ಯಾಪಕ ಅನಂತಪದ್ಮನಾಭ ಅವರು ಈಶ್ವರಯ್ಯ ಅವರಿಗೆ ಕಲೆಗಳ ಬಗೆಗಿದ್ದ ಕಾಳಜಿಅಸಾಮಾನ್ಯ. ಕಲಾ-ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲೇ ನಡೆಯಲಿ ಅಲ್ಲಿಗೆ ತೆರಳಿ ಸಂಪೂರ್ಣ ವೀಕ್ಷಿಸಿದ ಬಳಿಕವೇ ವಿಮರ್ಶೆಗಳನ್ನು ಬರೆಯುತ್ತಿದ್ದರು ಎಂದು ಹೇಳಿ ಅವರೊಂದಿಗಿನ ಒಡನಾಟಗಳ ಬಗ್ಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next