Advertisement

ಮುಖ್ಯಮಂತ್ರಿಯಾಗುತ್ತಾರೆ: ಈಶ್ವರಪ್ಪ ಹೇಳಿಕೆಗೆ ನಾನು ಋಣಿ ಎಂದ ನಿರಾಣಿ

04:29 PM Nov 29, 2021 | Team Udayavani |

ಬಾಗಲಕೋಟೆ: ಈಶ್ವರಪ್ಪ ನವರು ಅಭಿಮಾನ ಪೂರ್ವಕವಾಗಿ ‘ಮುರುಗೇಶ ನಿರಾಣಿ‌ ಮುಖ್ಯಮಂತ್ರಿಯಾಗುತ್ತಾರೆ’ ಎಂಬ ಮಾತನ್ನು ಹೇಳಿರಬಹುದು.ಅವರು ಹೇಳಿದ್ದಕ್ಕೆ ನಾನು ಋಣಿಯಾಗಿರುತ್ತೇನೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು.

Advertisement

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ರಾಜ್ಯದಲ್ಲಿ ಇವತ್ತು ನಮ್ಮ ಹಿರಿಯ ಸಹೋದರರಂತಿರುವ ಬಸವರಾಜ ಬೊಮ್ಮಾಯಿ ಸಿಎಂ ಆಗಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಕೋವಿಡ್ ನಿರ್ವಹಣೆಯಲ್ಲಿ ಶ್ರಮವಹಿಸಿದ್ದಾರೆ. ಬಸವರಾಜ ಬೊಮ್ಮಾಯಿ ಅವರಿಗೆ ಸಾಥ್ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

ನಮ್ಮ ಗುರಿ 2023 ಕ್ಕೆ 150 ಸೀಟ್ ಗೆದ್ದು ಬಿಜೆಪಿ ಸರ್ಕಾರ ಬರಬೇನ್ನುವುದು ನಮ್ಮ ಆಸೆ.2024ರಲ್ಲಿ28ರ ಪೈಕಿ ಹೆಚ್ಚಿನ ಲೋಕಸಭಾ ಸ್ಥಾನ ಗೆಲ್ಲುವ ಗಮನ ಹರಿಸುವುದು ನಮ್ಮ ಕರ್ತವ್ಯವಾಗಿದೆ. ಸಿಎಂ ಅವ್ರು ನಮಗೆ ಸಹಾಯ, ಸಹಕಾರ ಕೊಡ್ತಿದಾರೆ ಯಾವುದೇ ರೀತಿಯ ಬದಲಾವಣೆ ಆಗುವ ಪ್ರಶ್ನೆಯೇ ಇಲ್ಲ ನಾವು ಒಟ್ಟಾಗಿದೇವೆ, ಬಿಜೆಪಿ ಒಟ್ಟಾಗಿದೆ ಎಂದು ಸ್ಪಷ್ಟಪಡಿಸಿದರು.

2023ರಲ್ಲಾದ್ರೂ ಸಿಎಂ ಆಗಬಹುದಾ ನಿರಾಣಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮುಂದೆ ಏನೇ ಮಾಡಿದರೂ ಸಹ 2023-28ರ ನಂತರವೇ,ರಾಜ್ಯ, ರಾಷ್ಟ್ರದ ನಮ್ಮ ಪಕ್ಷದ ಹಿರಿಯರು,ನಮ್ಮ ಪರಿವಾರದ ನಾಯಕರು ಯಾವ ಜವಾಬ್ದಾರಿ ಕೊಡುತ್ತಾರೋ ಅದನ್ನು ನಾನು ಮಾಡಲಿಕ್ಕೆ ತಯಾರಿದ್ದೇನೆ. .ಹಿಂದೆ ನನಗೆ ಯಾವುದೇ ಮಂತ್ರಿ ಖಾತೆ ಇರಲಿಲ್ಲ.ಅಸಮಾಧಾನ ವ್ಯಕ್ತಪಡಿಸಿದೆ ಕೆಲಸ ಮಾಡಿದೆ.ನಂತರ ಭೂ ವಿಜ್ಞಾನ ಇಲಾಖೆ ಕೊಟ್ಟರು, ಆಗಲು ಚೆನ್ನಾಗಿ ಕೆಲಸ ಮಾಡಿದೆ.ನನ್ನ ಕೆಲಸ ಗುರುತಿಸಿ ಮತ್ತೆ ಕೈಗಾರಿಕೆ ಸಚಿವ ಸ್ಥಾನ ನೀಡಿದ್ದಾರೆ.ಪಕ್ಷ ಏನೇ ಜವಾಬ್ದಾರಿ ಕೊಟ್ಟರು, ಕೊಡದೇ ಇದ್ದರು ಪಕ್ಷದ ಪರವಾಗಿ ನಿಲ್ಲುತ್ತೇನೆ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

ಇದನ್ನೂ ಓದಿ :‘ತಮಾಷೆಗಾಗಿ ಹೇಳಿದ್ದು’ ಎಂದು ಈಶ್ವರಪ್ಪ ಹೇಳಿದ್ದಾರಲ್ಲ : ಯಡಿಯೂರಪ್ಪ ಸ್ಪಷ್ಟನೆ

Advertisement

ರಾಜ್ಯದಲ್ಲಿ ಕೋವಿಡ್ 3ನೇ ಅಲೆ ಭೀತಿ ಗೆ ಪ್ರತಿಕ್ರಿಯಿಸಿ,ಒಂದು, ಎರಡನೇ ಹಂತದ ಕೋವಿಡ್ ವೇಳೆ ನಮ್ಮಲ್ಲಿ ಏನೇನೂ ಇರಲಿಲ್ಲ. ಈಗ ಸರ್ಕಾರ ಎಲ್ಲ ಸಿದ್ದತೆಯನ್ನು ಮಾಡಿಕೊಂಡಿದೆ.3ನೇ ಅಲೆ 2ನೇ ಅಲೆಯಷ್ಟು ತೀವ್ರ ಇರಲಿಕ್ಕಿಲ್ಲ. ಕೋವಿಡ್ ಹಿನ್ನಲೆ ಲಾಕ್ ಡೌನ್ ಬಗ್ಗೆ ಮತ್ತೆ ಆತಂಕ ಶುರು ಆಗಿರುವ ವಿಪರಿಸ್ಥಿತಿ ನೋಡಿಕೊಂಡು ಹಿರಿಯ ತಂಡಗಳು, ಉಪ ತಂಡಗಳನ್ನು ರಚಿಸುತ್ತವೆ ಎಂದರು.

ಅದರಲ್ಲಿ ಹಿರಿಯ ವೈದ್ಯರು, ವಿಜ್ಞಾನಿಗಳು ಇರಬಹುದು.ಬೇರೆ ಬೇರೆ ದೇಶದಲ್ಲಿ 3ನೇ ಅಲೆ ಬಂದಾಗ ಅವರೆಲ್ಲ ಏನೆಲ್ಲ ಕ್ರಮ ತೆಗೆದುಕೊಂಡಿದ್ದಾರೆ.ನಾವೇನು ಮಾಡಬೇಕು ಅಂತ ಎಲ್ಲ ಸಿದ್ದತೆ ಮಾಡಿಕೊಂಡಿದೆ. ಕೋವಿಡ್ ಎದುರಿಸಲು ನಮ್ಮಲ್ಲಿ ಬೆಡ್, ಆಕ್ಸಿಜನ್, ಔಷಧೋಪಚಾರ ಎಲ್ಲವೂ ಸಿದ್ದತೆ ಆಗಿದೆ ಎಂದರು.

ರಾಜ್ಯದಲ್ಲಿ 3ನೇ ಅಲೆ ಬರದಿರಲಿ. ಜೀವಗಳ ಮೇಲೆ ಪರಿಣಾಮ ಬೀರದಿರಲಿ ಎಂದು ಭಗವಂತನಲ್ಲಿ ಕೇಳಿಕೊಳ್ಳುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next