Advertisement

ಮತ್ತೆ ಭಿನ್ನಮತ? ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಈಶ್ವರಪ್ಪ ಗೈರು!

12:57 PM Aug 06, 2017 | |

ಬೆಂಗಳೂರು: ಪಕ್ಷದ ಕಾರ್ಯ ಚಟುವಟಿಕೆಗಳ ಕುರಿತ ಹಿಂದಿನ 3 ತಿಂಗಳ ವಿಶ್ಲೇಷಣೆ ಮತ್ತು ಮುಂದಿನ 3 ತಿಂಗಳ ಕಾರ್ಯಯೋಜನೆಗಳನ್ನು ರೂಪಿಸಲು ಭಾನುವಾರ ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ  ನಡೆಸುತ್ತಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ  ವಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಅವರ ಗೈರು ಎದ್ದು ಕಂಡಿದೆ.

Advertisement

ನಿನ್ನೆ ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆಗೂ ಈಶ್ವರಪ್ಪ ಗೈರಾಗಿರುವುದು ಭಿನ್ನಮತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಆದರೆ ಈಶ್ವರಪ್ಪ ಅವರು ಮನೆಯಲ್ಲಿ ಪೂಜೆ ಇರುವ ಕಾರಣ ಗೈರಾಗಿದ್ದಾರೆ ಎಂದು ಹೇಳಲಾಗಿದೆ.

ಕಾರ್ಯಕಾರಿಣಿ ಸಭೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ರಾಜ್ಯ ಉಸ್ತುವಾರಿ ಮುರಳೀಧರ ರಾವ್‌, ಸಹ ಉಸ್ತುವಾರಿ ಪುರಂದರೇಶ್ವರಿ , ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ರಮೇಶ್‌ ಜಿಗಜಿಣಿಗಿ ಸೇರಿದಂತೆ ಪ್ರಮುಖ ನಾಯಕರು , ಕಾರ್ಯಕಾರಿಣಿ ಸದಸ್ಯರು ಭಾಗಿಯಾಗಿದ್ದರು.

ನಮ್ಮ ಕ್ಯಾಪ್ಟನ್‌ ಬಿಎಸ್‌ವೈ 
ಸಭೆಯಲ್ಲಿ ಮಾತನಾಡಿದ ಡಿ.ವಿ.ಸದಾನಂದ ಗೌಡ ಯಡಿಯೂರಪ್ಪ ಅವರು ನಮ್ಮ ಕ್ಯಾಪ್ಟನ್‌ ಅವರು ಮಂದಿನ ಮುಖ್ಯಮಂತ್ರಿಯಾಗಬೇಕು ಎಂದರು. 

ಬಿಹಾರ ಎನ್‌ಡಿಎ ತೆಕ್ಕೆಗೆ ಬಂದಿದೆ.ಇನ್ನು ತಮಿಳುನಾಡು ಕೂಡ ಬರುವ ಸಾಧ್ಯತೆಗಳಿವೆ. ಎನ್‌ಡಿಎ ತೆಕ್ಕೆಗೆ ಬಂದರೆ ಸಾಲದು ಬಿಜೆಪಿ ತೆಕ್ಕೆಗೆ ಬರಬೇಕು ಎಂದರು.

Advertisement

ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರತೀ ಮನೆಗೆ ತಲುಪಿದ್ದಾರೆ. ಅವರು ತಲುಪಿದರೆ ಸಾಲದು ಬಿಜೆಪಿಯ ಪ್ರತೀ ಕಾರ್ಯಕರ್ತರೂ ತಲುಪಬೇಕು ಎಂದರು. 

ಇಂದು ಎಲ್ಲವರೂ ನಮ್ಮವರೇ 
ಮುರಳೀದರರಾವ್‌ ಮಾತನಾಡಿ  1951 ರಿಂದ ಜನಸಂಘದ ವಿರುದ್ದ ಟೀಕೆ ಮಾಡುತ್ತಾ ಇದ್ದರು. ಕೋಮುವಾದಿ ಎಂದು ಋಣಾತ್ಮಕವಾಗಿ ಮಾತನಾಡುತ್ತಿದ್ದರು. ಆದರೆ ಇಂದು ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ , ಸ್ಪೀಕರ್‌ ಎಲ್ಲವರೂ ನಮ್ಮವರೆ ಆಗಿದ್ದಾರೆ ಎಂದು ಹರ್ಷ ವ್ಯಕ್ತ ಪಡಿಸಿದರು.

ಕರ್ನಾಟಕದಲ್ಲಿ ಮುಂದಿನ ವಿಧಾನಸಭೆಯಲ್ಲಿ ಗೆಲುವು ಮಾತ್ರವಲ್ಲ ಭರ್ಜರಿ ಜಯ ನಮ್ಮದಾಗುತ್ತದೆ. ಮಿಷನ್‌ 150 ಗುರಿ ಸುಲಭವಾಗಿ ತಲುಪುತ್ತೇವೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next