ಬೆಂಗಳೂರು: ಸಚಿವ ಸಿ. ಟಿ ರವಿ ಅವರು ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ಯಾಸಿನೋ ಆರಂಭ ಮಾಡಲು ಹೊರಟಿದ್ದರು. ಅಂತವರಿಗೆ ನೈತಿಕತೆ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿ.ಟಿ ರವಿಯವರು ರಾಜ್ಯದಲ್ಲಿ ಕ್ಯಾಸಿನೋ ಪ್ರಾರಂಭಿಸಲು ಹೊರಟಿದ್ದು ಯಾಕೆ? ಇಂತವರು ಇದರ ಬಗ್ಗೆ ಮಾತನಾಡೋಕೆ ಹಕ್ಕಿದೆಯಾ ಎಂದು ಪ್ರಶ್ನಿಸಿದರು.
ಸಿ.ಟಿ.ರವಿ ಹೇಳುವುದು ಒಂದು ಮಾಡುವುದು ಒಂದು. ಅಕ್ರಮಗಳಿಗೆ ಪ್ರೋತ್ಸಾಹವನ್ನು ಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಜಮೀರ್ ಕ್ಯಾಸಿನೋ ಬಗ್ಗೆ ಮಾತನಾಡುವ ಹಕ್ಕು ಸಿ.ಟಿ.ರವಿಗಿಲ್ಲ ಎಂದರು.
ಇದನ್ನೂ ಓದಿ: ಸಚಿವ ಸೋಮಣ್ಣ ತೊಲಗಿದರೆ ಮಾತ್ರ ವಸತಿ ಇಲಾಖೆ ಉದ್ದಾರವಾಗುತ್ತದೆ: ಈಶ್ವರ್ ಖಂಡ್ರೆ ಆಕ್ರೋಶ
ಡ್ರಗ್ಸ್ ಆರೋಪದಲ್ಲಿ ಜಮೀರ್ ಹೆಸರು ಪ್ರಸ್ತಾಪವಾದ ಬಗ್ಗೆ ಮಾತನಾಡಿದ ಅವರು, ನಮ್ಮ ಶಾಸಕರೇ ತನಿಖೆ ಮಾಡಿ ಅಂದಿದ್ದಾರೆ. ಊಹಾಪೋಹದ ಆರೋಪ ಸರಿಯಲ್ಲ. ಯಾರೇ ಆಗಲಿ ಅವರನ್ನು ಪತ್ತೆ ಹಚ್ಚಲಿ. ತಪ್ಪಿತಸ್ಥರ ಮೇಲೆ ಕಠಿಣ ಶಿಕ್ಷೆ ನೀಡಲಿ ಎಂದು ಖಂಡ್ರೆ ಹೇಳಿದರು.