Advertisement

90ರ ಅಜ್ಜಿ ಸೋಂಕಿನಿಂದ ಪಾರು

07:22 PM May 31, 2021 | Team Udayavani |

ಆಳಂದ: ಕೊರೊನಾ ಸೋಂಕಿತ 13 ಹೊಸ ಪ್ರಕರಣಗಳು ರವಿವಾರ ಪತ್ತೆ ಯಾಗಿವೆ. ಈ ನಡುವೆ ಚಿಕಿತ್ಸೆಗೆ ಒಳಗಾಗಿ 16 ಮಂದಿ ಗುಣಮುಖ ಆಗಿದ್ದಾರೆ. ನಿಂಬಾಳ ಗ್ರಾಮದಲ್ಲಿ ಸೋಂಕು ತಗುಲಿದ್ದ 66 ವರ್ಷದ ಮಹಿಳೆ ಕಲಬುರಗಿಯ ಬಾಬಾಹೌಸ್‌ ಆಸ್ಪತ್ರೆಯಲ್ಲಿ ರವಿವಾರ ಮೃತಪಟ್ಟಿದ್ದಾಳೆ.

Advertisement

154 ಜನರು ಐಸೋಲೇಷನ್‌ಗೆ: ಕಳೆದ ಸಾಲಿನ ಏಪ್ರಿಲ್‌ 20ರಿಂದ ಇದುವರೆಗೂ 4130 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 3803 ಮಂದಿ ಗುಣಮುಖರಾಗಿದ್ದಾರೆ. 121 ಮಂದಿ ಮೃತಪಟ್ಟಿದ್ದಾರೆ. ಬಾಕಿ 207 ಸಕ್ರಿಯ ಸೋಂಕಿತರಿದ್ದು, ಇವರಲ್ಲಿ 50 ಮಂದಿ ಜಿಲ್ಲಾಸ್ಪತ್ರೆಯಲ್ಲಿ, ಮೂವರು ಆಳಂದ ಕೋವಿಡ್‌ ಆರೈಕೆ ಕೇಂದ್ರದಲ್ಲಿ, 154 ಮಂದಿ ಹೋಂ ಐಸೋಲೇಷನ್‌ಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

90 ವರ್ಷದ ಅಜ್ಜಿ ಗೆಲುವು: ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದ 90 ವರ್ಷದ ಜೈಸುನ್‌ಬಿ ಯಾದಗಿರಿ ಎನ್ನುವರು ಕೊರೊನಾ ಸೋಂಕಿನ ವಿರುದ್ಧ ಹೋರಾಡಿ, ಕಲಬುರಗಿ ಖಾಸಗಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಈಗ ಆರೋಗ್ಯವಾಗಿದ್ದಾರೆ ಎಂದು ಮೊಮ್ಮಗ ಅಬ್ದುಲ್‌ ರಬ್ಟಾನಿ ಸಿದ್ಧಿಕಿ ತಿಳಿಸಿದ್ದಾರೆ. ಕೋವಿಡ್‌ ಆರೈಕೆ: ಪಟ್ಟಣದ ಡಾ| ಬಿ.ಆರ್‌. ಅಂಬೇಡ್ಕರ ವಸತಿ ನಿಲಯದಲ್ಲಿ, ಮಾದನಹಿಪ್ಪರಗಾ ಮತ್ತು ನಿಂಬರಗಾ ವಸತಿ ಶಾಲೆಗಳಲ್ಲಿ ಕ್ವಾರಂಟೈನ್‌ ಕೇಂದ್ರ ತೆರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next