Advertisement

ಸವಾಲು ದಾಟಿ ಮುನ್ನಡೆದ ಸೋಲಾರ್‌ ಆರ್ಬಿಟರ್‌

07:53 PM Nov 28, 2021 | Team Udayavani |

ವಾಷಿಂಗ್ಟನ್‌: ಸೂರ್ಯನ ಅಧ್ಯಯನಕ್ಕಾಗಿ, ವರ್ಷದ ಹಿಂದೆಯೇ ಯೂರೋಪಿಯನ್‌ ಸ್ಪೇಸ್‌ ಏಜೆನ್ಸಿ (ಇಎಸ್‌ಎ) ವತಿಯಿಂದ ಉಡಾವಣೆ ಮಾಡಲಾದ ಸೋಲಾರ್‌ ಆರ್ಬಿಟರ್‌, ಪೂರ್ವಯೋಜನೆಯ ಪ್ರಕಾರ, ಬುಧವಾರ ಭೂಮಿಯ ಪರಿಭ್ರಮಣೆಯನ್ನು ಮುಗಿಸಿ, ತೀರಾ ಕ್ಲಿಷ್ಟಕರವಾಗಿದ್ದ “ಅರ್ತ್‌ ಫ್ಲೈಬೈ’ ಹಂತವನ್ನು ಯಶಸ್ವಿಯಾಗಿ ದಾಟಿ ಸೂರ್ಯನತ್ತ ಪ್ರಯಾಣ ಬೆಳೆಸಿದೆ.

Advertisement

ಈ ಮೂಲಕ, ಉತ್ತಮ ತಾಂತ್ರಿಕ ನಿರ್ವಹಣೆಯ ಹೊರತಾಗಿಯೂ ಇದರ ಯಾನವನ್ನು ಉಸಿರುಗಟ್ಟಿ ವೀಕ್ಷಿಸುತ್ತಿದ್ದ ಐರೋಪ್ಯ ಖಗೋಳ ವಿಜ್ಞಾನಿಗಳು ಕಡೆಗೂ ನಿಟ್ಟುಸಿರು ಬಿಟ್ಟಿದ್ದಾರೆ.

ಸವಾಲಿನ ಹಂತ
2020ರ ಫೆ. 10ರಂದು ಹಾರಿಬಿಡಲಾಗಿದ್ದ ಈ ನೌಕೆ, ಸರಿಯಾಗಿ ಒಂದು ವರ್ಷ, ಎಂಟು ತಿಂಗಳ ನಂತರ ತನ್ನ ಭೂಪರಿಭ್ರಮಣೆಯನ್ನು ಮುಗಿಸಿ ಸೂರ್ಯನತ್ತ ಭೂಮಿಯಿಂದ ಮೇಲ್ಮುಖವಾಗಿ ಪ್ರಯಾಣ ಬೆಳೆಸಿದೆ. ಆದರೆ, ಭೂಮಿಯ ಮೇಲ್ಮೆ„ನ 460 ಕಿ.ಮೀ. ದೂರದಲ್ಲಿ ಗಾಢವಾಗಿರುವ ಬಾಹ್ಯಾಕಾಶ ಅವಶೇಷಗಳಿಗೆ ಢಿಕ್ಕಿ ಹೊಡೆಯದಂತೆ ದಾಟಿಕೊಂಡು ಇದು ಮುನ್ನಡೆಯಬೇಕಿತ್ತು. ಸ್ವಯಂ ಸ್ಪಿನ್‌ ಆಗುವ ಮೂಲಕ ಎದುರಾದ ಅವಶೇಷಗಳಿಗೆ ಡಿಕ್ಕಿ ಹೊಡೆಯದಂತೆ ಸಾಗಿದ ಇದು ಭೂ ಗುರುತ್ವದ ಪರಿಧಿಯನ್ನು ದಾಟಿ ಹೋಗಿದೆ.

ಇದನ್ನೂ ಓದಿ:ಉಪವಿಭಾಗೀಯ ಮಟ್ಟದ ಕಚೇರಿ ರದ್ದು ಚರ್ಚೆ ಅಗತ್ಯ: ಬಿಎಸ್‌ವೈ

ಸದ್ಯಕ್ಕೆ ಭೂಮಿಯ ಮೇಲ್ಮೈ ನಿಂದ 2,000 ಕಿ.ಮೀ. ಎತ್ತರದಲ್ಲಿರುವ ಕೆಳ ಹಂತದ ಕಕ್ಷೆಯನ್ನು ಹಾಗೂ 36,000 ಕಿ.ಮೀ. ದೂರದಲ್ಲಿರುವ ಜಿಯೋಸ್ಟೇಷನರಿ ವೃತ್ತವನ್ನು ದಾಟಿ ಮುಂದಕ್ಕೆ ಸಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Advertisement

ಮುಂದೇನು?
ಈ ನೌಕೆಯು, ಮುಂದೆ ಇನ್ನರ್‌ ಸೌರವ್ಯೂಹ ವ್ಯಾಪ್ತಿಯಲ್ಲಿ ಬರುವ ಭೂಮಿಯ ಚಂದ್ರ, ಬುಧ, ಶುಕ್ರ ಗ್ರಹಗಳನ್ನು ದಾಟಿ ಸೂರ್ಯನತ್ತ ಸಾಗುತ್ತದೆ. ತನ್ನ ಅಂತಿಮ ಘಟ್ಟದಲ್ಲಿ, ಸೂರ್ಯನಿಂದ 50 ಮಿಲಿಯನ್‌ ಕಿ.ಮೀ.ಗಳ ದೂರದಲ್ಲಿ ಇದು ಸೂರ್ಯನನ್ನು ಸುತ್ತುತ್ತಾ ಈವರೆಗೆ ಕಾಣದಿರುವ ಸೂರ್ಯನ ವಿರುದ್ಧ ಧ್ರುವಗಳ ಅಧ್ಯಯನ ನಡೆಸಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next