Advertisement

ESA Day; ಸೋಲಿನ ಸಂಕಷ್ಟದಿಂದ ಹೊರ ಬಂದ ಮುಂಬೈ; ಸಂಭ್ರಮ ಡಬಲ್

09:52 PM Apr 07, 2024 | Team Udayavani |

ಮುಂಬೈ: ವಾರ್ಷಿಕ ಇಎಸ್‌ಎ ದಿನದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನ ಗೆಲುವು ಎಲ್ಲಾ ಆಟಗಾರರು, ಸಿಬಂದಿ ಮತ್ತು ತರಬೇತುದಾರರ ನೆಚ್ಚಿನ ಆಟವಾಗಿ ಪರಿಣಮಿಸಿತು ಎಂದು ತಂಡದ ಮಾಲಕಿ ನೀತಾ ಎಂ. ಅಂಬಾನಿ ಸಂತಸ ವ್ಯಕ್ತಪಡಿಸಿದರು.

Advertisement

ವಾಂಖೆಡೆ ಸ್ಟೇಡಿಯಂನಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯಕ್ಕೆ 18,000 ಹುಡುಗಿಯರು ಮತ್ತು ಹುಡುಗರು ಸಾಕ್ಷಿಯಾದರು. ಮುಂಬೈ ಇಂಡಿಯನ್ಸ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ CSR ಆರ್ಮ್, ರಿಲಯನ್ಸ್ ಫೌಂಡೇಶನ್ ಸಹಭಾಗಿತ್ವದಲ್ಲಿ, ನೀತಾ ಅಂಬಾನಿಯವರ ದೂರದೃಷ್ಟಿಯ ತಂಡದ ಅಚ್ಚುಮೆಚ್ಚಿನ ಸಂಪ್ರದಾಯವಾಗಿ ಮಾರ್ಪಟ್ಟಿರುವ ಇಎಸ್‌ಎ ದಿನವನ್ನು ಆಚರಿಸಲು, ಮುಂಬೈ ನಗರದಾದ್ಯಂತದ ವಿವಿಧ ಎನ್‌ಜಿಒಗಳಿಂದ ಬಂದಿದ್ದ ವಿಶೇಷ ಅಗತ್ಯವುಳ್ಳ 200 ಮಕ್ಕಳು ಸೇರಿದಂತೆ 18,000 ಕ್ಕೂ ಹೆಚ್ಚು ಮಕ್ಕಳು ಪಂದ್ಯ ವೀಕ್ಷಿಸಿ ಸಂಭ್ರಮಿಸಿದರು.

ಯುವ ಮನಸ್ಸುಗಳನ್ನು ಪ್ರೇರೇಪಿಸಲು ಮತ್ತು ವಿನಮ್ರ ಹಿನ್ನೆಲೆಯ ಮಕ್ಕಳಲ್ಲಿ ಶಿಕ್ಷಣ ಮತ್ತು ಕ್ರೀಡೆಗಳ ಮೌಲ್ಯಗಳನ್ನು ಉತ್ತೇಜಿಸುವ ಗುರಿಯನ್ನು ರಿಲಯನ್ಸ್ ಹೊಂದಿದೆ. ಈ ವರ್ಷ ಮಕ್ಕಳೆಲ್ಲರೂ ಮುಂಬೈ ಇಂಡಿಯನ್ಸ್ ನ  ತನ್ನ ನೆಚ್ಚಿನ ಕ್ರಿಕೆಟಿಗರನ್ನು ಕ್ರೀಡಾಂಗಣದಲ್ಲೇ ಹುರಿದುಂಬಿಸಿದರು.

ರವಿವಾರ ನಡೆದ ಪಂದ್ಯದಲ್ಲಿ ಮುಂಬೈ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ 29 ರನ್‌ಗಳ ಜಯ ಸಾಧಿಸಿತು. ಸತತ ಮೂರು ಸೋಲಿನ ಬಳಿಕ ಗೆಲುವಿಗಾಗಿ ಪಣ ತೊಟ್ಟ ಮುಂಬೈ ಇಂಡಿಯನ್ಸ್ ಜಯ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ.

Advertisement

ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.235 ರನ್‌ಗಳ ದೊಡ್ಡ ಮೊತ್ತ ಕಲೆ ಹಾಕಿದರು. ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಟ್ರಿಸ್ಟಾನ್ ಸ್ಟಬ್ಸ್ 25 ಎಸೆತಗಳಲ್ಲಿ ಔಟಾಗದೆ 71 ರನ್ ಗಳಿಸಿದರು. ಆದರೆ ಇನ್ನೊಂದು ಬದಿಯಲ್ಲಿ ಅವರಿಗೆ ಬೆಂಬಲದ ಕೊರತೆ ಎದುರಾಯಿತು. 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಲಷ್ಟೇ ಶಕ್ತವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next