Advertisement

ಸರ್ವರಿಗೂ ಸಮಾನ ವೇಗ, ದರದ ಇಂಟರ್ನೆಟ್‌!

07:25 AM Nov 29, 2017 | Team Udayavani |

ನವದೆಹಲಿ: ದೇಶದ ಇಂಟರ್‌ನೆಟ್‌ ಬಳಕೆದಾರರಿಗೆ ಸಮಾನ ದರದ ಮತ್ತು ವೇಗದ ಇಂಟರ್ನೆಟ್‌ ಒದಗಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರವನ್ನು ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರ (ಟ್ರಾಯ್‌) ಕೈಗೊಂಡಿದ್ದು, ನೆಟ್‌ ನ್ಯೂಟ್ರಾಲಿಟಿಯನ್ನು ಬೆಂಬಲಿಸಿ ತನ್ನ ನೀತಿ ಪ್ರಕಟಿಸಿದೆ. ಇಂಟರ್ನೆಟ್‌ ಒದಗಿಸುವಲ್ಲಿ ಯಾವುದೇ ತಾರತಮ್ಯವನ್ನು ಟ್ರಾಯ್‌ ನಿಷೇಧಿಸಿದ್ದು, ಕೆಲವು ಅಪ್ಲಿಕೇಶನ್‌ಗಳು, ಅಂತರ್ಜಾಲ ತಾಣಗಳು ಮತ್ತು ಸೇವೆಗಳನ್ನು ತಡೆಹಿಡಿಯುವುದು ಅಥವಾ ಅವುಗಳ ವೇಗ ಕಡಿಮೆ ಮಾಡುವುದು ಮತ್ತು ಇತರ ಕೆಲವು ಅಪ್ಲಿಕೇಶನ್‌ಗಳು, ವೆಬ್‌ಸೈಟ್‌ ಹಾಗೂ ಸೇವೆಗಳಿಗೆ ಅತಿ ವೇಗದ ಇಂಟರ್‌ನೆಟ್‌ ಒದಗಿಸುವ ತಾರತಮ್ಯವನ್ನು ನಿಷೇಧಿಸಿದೆ. ಇದು ಬಹು ಚರ್ಚಿತ ವಿಷಯವಾಗಿದ್ದು, ಶಿಫಾರಸಿಗೂ ಮುನ್ನ ಟ್ರಾಯ್‌ ಹಲವು ಪರಿಣಿತರನ್ನು ಸಂಪರ್ಕಿಸಿ ಅಭಿಪ್ರಾಯ ಪಡೆದಿದೆ.

Advertisement

ಕಳೆದ ವರ್ಷವೇ ಈ ಸಂಬಂಧ ಮಧ್ಯಂತರ ಶಿಫಾರಸು ಹೊರಡಿಸಿದ್ದ ಟ್ರಾಯ್‌, ಅಂತಿಮವಾಗಿ ನಿರ್ಧಾರ ಕೈಗೊಳ್ಳಲು ಮತ್ತು ಹೆಚ್ಚಿನ ಸಲಹೆ ಪಡೆಯಲು ಕಾಲಾವಕಾಶ ಪಡೆದಿತ್ತು. ಈಗ ತನ್ನ ಶಿಫಾರಸುಗಳನ್ನು ದೂರಸಂಪರ್ಕ ಸಚಿವಾಲಯಕ್ಕೆ ಕಳುಹಿಸಲಿದ್ದು, ಸಚಿವಾಲಯ ಇದನ್ನು ಪರಿಶೀಲಿಸಲಿದೆ. ಇದು ಅನುಮೋ ದನೆಗೊಂಡಲ್ಲಿ, ಯಾವುದೇ ಅಂತರ್ಜಾಲ ದಟ್ಟಣೆಯನ್ನು ಇಂಟರ್ನೆಟ್‌ ಸೇವಾ ಪೂರೈ ಕೆದಾರರು ತಡೆಹಿಡಿಯಲಾಗದು. ಇದು ಕೇವಲ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರವಲ್ಲ, ಲ್ಯಾಪ್‌ಟಾಪ್‌, ಕಂಪ್ಯೂಟರುಗಳಿಗೂ ಅನ್ವಯಿಸುತ್ತದೆ. ಅಷ್ಟೇ ಅಲ್ಲ, ಹೆಚ್ಚು ಮೊತ್ತ ಪಾವತಿ ಮಾಡುವವರಿಗೆ ವೇಗದ ಇಂಟರ್ನೆಟ್‌ ಒದಗಿಸುವ ತಾರತಮ್ಯವನ್ನೂ ಮಾಡಲಾಗದು.

Advertisement

Udayavani is now on Telegram. Click here to join our channel and stay updated with the latest news.

Next