Advertisement

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

01:38 AM Oct 28, 2021 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಸೂಚನೆ ಮೇರೆಗೆ ಎಲ್ಲ ಸರಕಾರಿ ಕಚೇರಿ, ಸಂಸದರ ಕಚೇರಿಗಳಲ್ಲಿ ವರ್ಷಾನುಗಟ್ಟಲೆಯಿಂದ ಧೂಳು ತಿನ್ನುತ್ತಿರುವ ಸಾವಿರಾರು ಕಡತಗಳಿಗೆ ಮುಕ್ತಿ ಸಿಕ್ಕಿದೆ.

Advertisement

ಕಡತ ಯಜ್ಞ ಅ. 2ರಿಂದ ನಡೆಯುತ್ತಿದ್ದು, ಸದ್ಯದಲ್ಲೇ ಪೂರ್ತಿಯಾಗಿ ವಿಲೇವಾರಿಯಾಗಲಿವೆ. ಇದರಿಂದಾಗಿ ನಾನಾ ಕಚೇರಿಗಳಲ್ಲಿ ರಾಷ್ಟ್ರಪತಿ ಭವನದ ಎರಡು ಪಟ್ಟು ಜಾಗ ಅಂದರೆ ಸುಮಾರು 4 ಲಕ್ಷ ಚದರ ಅಡಿ ಜಾಗ ಉಪಯೋಗಕ್ಕೆ ಸಿಗಲಿದೆ. ದೇಶದ ಇತಿಹಾಸದಲ್ಲೇ ಇಷ್ಟು ದೊಡ್ಡಮಟ್ಟದ ಕಡತ ಯಜ್ಞ ಇದೇ ಮೊದಲು ಎನ್ನಲಾಗಿದೆ.

ಮಾಸಾಂತ್ಯಕ್ಕೆ “ಮುಕ್ತ… ಮುಕ್ತ… ಮುಕ್ತ’!
“ಕಡತ ಯಜ್ಞ ಸಮರೋಪಾದಿಯಲ್ಲಿ ನಡೆಯು ತ್ತಿದ್ದು, ಶೇ. 78ರಷ್ಟು ವಿಲೇವಾರಿಯಾಗಿ 3.18 ಲಕ್ಷ ಚದರಡಿ ಜಾಗ ತೆರವಾಗಿದೆ. ಸರಾಗವಾಗಿ ವಿಲೇವಾರಿಯಾಗಬಲ್ಲಂಥ 9,31,442 ಕಡತಗಳನ್ನು ಗುರುತು ಮಾಡಲಾಗಿದ್ದು, ಅವು ಕೂಡ ಈ ಮಾಸಾಂತ್ಯದ ಹೊತ್ತಿಗೆ ಮುಕ್ತಿಪಡೆಯಲಿವೆ.

ಸಚಿವಾಲಯಗಳಲ್ಲೂ “ಯಜ್ಞ’
ವಿವಿಧ ಸರಕಾರಿ ಸಚಿವಾಲಯಗಳಲ್ಲಿ, ಸಂಸದ ರಿಂದ ಹಾಗೂ ಸಂಸದೀಯ ಸಮಿತಿಗಳಿಂದ ಅನುಮೋದನೆಗೊಂಡ ಕಡತಗಳನ್ನೂ ತ್ವರಿತವಾಗಿ ವಿಲೇ ವಾರಿ ಗೊಳಿಸಲಾಗುತ್ತದೆ. ಸಂಸದರಿಂದ 10,273 ಕಡತಗಳು ನನೆಗುದಿಗೆ ಬಿದ್ದಿರುವ ಬಗ್ಗೆ ಕೇಂದ್ರ ಸರಕಾರ ಮಾಹಿತಿ ಕಲೆಹಾಕಿದೆ. ಇದನ್ನು 15 ದಿನದೊಳಗೆ ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ. ಬುಧವಾರ ಸಂಜೆಯ ಹೊತ್ತಿಗೆ 5,500 ಕಡತಗಳಿಗೆ ಮುಕ್ತಿ ಸಿಕ್ಕಿದೆ. ನನೆಗುದಿಗೆ ಬಿದ್ದಿದ್ದ ಪ್ರತಿಯೊಂದು ಕಡತಗಳು ವಿಲೇವಾರಿ ಯಾಗಿರುವುದಕ್ಕೆ ಪತ್ರವೊಂದನ್ನು ಸಿದ್ಧಪಡಿಸಿ, ಆ ಸಚಿವಾಲಯಗಳ ಸಚಿವರು ಸಹಿ ಹಾಕಿ ಕಳಿಸ ಬೇಕಿದೆ. ಹಾಗಾಗಿ ಹೆಚ್ಚು ಕಡತಗಳಿದ್ದ ರೈಲ್ವೇ ಇಲಾಖೆಯ ಸಚಿವ ಅಶ್ವಿ‌ನಿ ವೈಷ್ಣವ್‌ ಹಾಗೂ ಹೆದ್ದಾರಿ ಇಲಾಖೆಯ ನಿತಿನ್‌ ಗಡ್ಕರಿ ಈಗ ಇಂಥ ಪತ್ರಗಳ ಸರಣಿಗೆ ಸಹಿ ಹಾಕುವುದರಲ್ಲಿ ಮಗ್ನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:5000 ಕಿಮೀ ದೂರ ಕ್ರಮಿಸಬಲ್ಲ ಅಗ್ನಿ 5 ಬ್ಯಾಲಿಸ್ಟಿಕ್‌ ಕ್ಷಿಪಣಿ ಪರೀಕ್ಷೆ ಯಶಸ್ವಿ

Advertisement

ರೈಲ್ವೇ ಇಲಾಖೆಯಲ್ಲಿ ಸಂಸದರಿಂದ ಬಂದಿದ್ದ ಕಡತಗಳು 2,700ರಷ್ಟಿದ್ದರೆ, ಅವುಗಳಲ್ಲಿ 1,700 ಕಡತಗಳು ಒಪ್ಪಿಗೆ ಪಡೆದಿವೆ. ಹೆದ್ದಾರಿ ಸಚಿವಾಲ ಯಲ್ಲಿ 900 ಇಂಥ ಕಡತಗಳಿದ್ದರೆ ಅವುಗಳಲ್ಲಿ 400 ಕಡತಗಳಿಗೆ ಒಪ್ಪಿಗೆ ನೀಡಲಾಗಿದೆ.

ರದ್ದಿಯಿಂದ 4 ಕೋಟಿ ರೂ.!
ವಿಲೇವಾರಿಗೊಂಡ ಹಳೆಯ ಕಡತಗಳನ್ನು ರದ್ದಿಗೆ ಹಾಕಿದ್ದರಿಂದ ಸುಮಾರು 4.29 ಕೋಟಿ ರೂ. ಆದಾಯವೂ ಸರಕಾರಕ್ಕೆ ಬಂದಿದೆ. ಈ ವಿಚಾರದಲ್ಲಿ ಹೆಚ್ಚು ಆದಾಯ ಬಂದಿರುವುದು ಕೇಂದ್ರ ಪರಿಸರ ಇಲಾಖೆಯಿಂದ. ಆ ಇಲಾಖೆ ಯಿಂದಲೇ ಅತೀ ಹೆಚ್ಚು (99,000) ಕಡತ ಗಳನ್ನು ರದ್ದಿಗೆ ಹಾಕಲಾಗಿದೆ. ಅನಂತರದ ಸ್ಥಾನ ದಲ್ಲಿ ಕೇಂದ್ರ ಗೃಹ ಇಲಾಖೆ (81,000), ರೈಲ್ವೇ ಇಲಾಖೆ (80,000), ಸಿಬಿಐ ಹಾಗೂ ಕೇಂದ್ರ ನೇರ ತೆರಿಗೆಗಳ ಮಂಡಳಿ (ತಲಾ 50,000) ಇವೆ.

Advertisement

Udayavani is now on Telegram. Click here to join our channel and stay updated with the latest news.

Next