Advertisement

ಸಮಾನತೆ, ಸಹಾನುಭೂತಿ ಭಾರತದ ಶಕ್ತಿಯಾಗಲಿ

08:10 AM Aug 15, 2017 | Team Udayavani |

ನವದೆಹಲಿ: “ಭಾರತವು ಸಮಾನತಾವಾದ ಮತ್ತು ಸಹಾನು ಭೂತಿಯ ಶಕ್ತಿಯಾಗಬೇಕು. ದೇಶದ ಡಿಎನ್‌ಎಗೆ ಮಾನವತೆಯ ಅಂಶವು ಬಹುಮುಖ್ಯವಾದದ್ದು.’

Advertisement

70ನೇ ಸ್ವಾತಂತ್ರೊತ್ಸವದ ಹಿನ್ನೆಲೆಯಲ್ಲಿ ದೇಶದ ಜನತೆಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ನೀಡಿರುವ ಕರೆಯಿದು. ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಕೋವಿಂದ್‌ ಅವರು ಸೋಮವಾರ ರಾತ್ರಿ ದೇಶವನ್ನುದ್ದೇಶಿಸಿ ಸ್ವಾತಂತ್ರೊéàತ್ಸವದ ಭಾಷಣ ಮಾಡಿದರು. ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಮಾತಂಗಿರಿ ಹಾಜ್ರಾ, ಭಗತ್‌ ಸಿಂಗ್‌, ಆಜಾದ್‌, ಅಶ್ಫಾಕುಲ್ಲಾ ಖಾನ್‌, ಮಹಾತ್ಮ ಗಾಂಧಿ, ಬೋಸ್‌ ಮತ್ತಿತರರು ದೇಶಕ್ಕಾಗಿ ಪ್ರಾಣ ತ್ಯಾಗಿ ಮಾಡಿದ್ದು, ಅವರನ್ನೇ ಸ್ಫೂರ್ತಿಯಾಗಿಟ್ಟುಕೊಂಡು ನಾವು ನವಭಾರತವನ್ನು ಕಟ್ಟಬೇಕಿದೆ ಎಂದರು. ಪಂಡಿತ್‌ ಜವಾಹರ್‌ಲಾಲ್‌ ನೆಹರೂರನ್ನೂ ಸ್ಮರಿಸಿದ ರಾಷ್ಟ್ರಪತಿ ಕೋವಿಂದ್‌, “ಭಾರತದ ಪ್ರಾಚೀನ ಪರಂಪರೆ ಮತ್ತು ಸಂಪ್ರದಾಯಗಳನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಸಮ್ಮಿಳಿತಗೊಳಿಸಿ ಸಾಗಬೇಕು ಎಂದಿದ್ದರು. ಅದನ್ನು ಅನುಸರಿ ಸಬೇಕು’ ಎಂದೂ ಹೇಳಿದರು. ಇದೇ ವೇಳೆ, ಜಎಸ್‌ಟಿ ಜಾರಿ, ಸ್ವತ್ಛ ಭಾರತ, ನೋಟುಗಳ ಅಮಾನ್ಯ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಕೋವಿಂದ್‌ ಶ್ಲಾ ಸಿದರು.

ಮೂವರು ಯೋಧರಿಗೆ “ಕೀರ್ತಿ ಚಕ್ರ’ದ ಗರಿಮೆ
ಉಗ್ರರ ವಿರುದ್ಧ ಹೋರಾಡಿ ಪ್ರಾಣತೆತ್ತ ಇಬ್ಬರು ಯೋಧರು ಸೇರಿದಂತೆ ಭದ್ರತಾ ಪಡೆಯ ಐವರು ಪ್ರಸಕ್ತ ವರ್ಷದ ಕೀರ್ತಿ ಚಕ್ರಕ್ಕೆ ಭಾಜನರಾಗಿದ್ದಾರೆ. ಹವಿಲ್ದಾರ್‌ ಗಿರೀಶ್‌ ಗುರುಂಗ್‌, ಮೇಜರ್‌ ಡೇವಿಡ್‌ಮನುÉನ್‌, ಪ್ರಮೋದ್‌ ಕುಮಾರ್‌ ಅವರಿಗೆ ಮರಣೋತ್ತರ ಕೀರ್ತಿ ಚಕ್ರ ದೊರೆತರೆ, ಮೇಜರ್‌ ಪ್ರೀತಂ ಸಿಂಗ್‌ ಕುನ್ವಾರ್‌, ಚೇತನ್‌ಕುಮಾರ್‌ ಗೀತಾ ಅವರ ಮುಡಿಗೂ ಎರಡನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಕೀರ್ತಿ ಚಕ್ರದ ಗೌರವ ಸಂದಲಿದೆ. ವಿಶೇಷವೆಂದರೆ, ಈ ಬಾರಿ ಯಾರಿಗೂ ಅತ್ಯುನ್ನತ ಗೌರವವಾದ ಅಶೋಕ ಚಕ್ರವನ್ನು ಘೋಷಿಸಲಾಗಿಲ್ಲ. ಇದು ಹೊರತುಪಡಿಸಿದರೆ, ರಕ್ಷಣಾ ಮತ್ತು ಅರೆಸೇನಾ ಪಡೆಯ ಯೋಧರಿಗೆ ಒಟ್ಟು 112 ಶೌರ್ಯ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ನಕ್ಸಲರ ವಿರುದ್ಧ ಹೋರಾಡಿ ಹುತಾತ್ಮರಾದ ಛತ್ತೀಸ್‌ಗಢದ ಪೊಲೀಸ್‌ ಅಧಿಕಾರಿ  ಅವರಿಗೆ ದೇಶದ ಅತ್ಯುನ್ನತ ಪೊಲೀಸ್‌ ಶೌರ್ಯ ಪದಕ ಪ್ರದಾನ ಮಾಡಲಾಗುತ್ತದೆ. ಇದೇ ವೇಳೆ ಕೇಂದ್ರ ಮತ್ತು ರಾಜ್ಯಗಳ ಪೊಲೀಸ್‌ ಪಡೆಯ 989 ಸಿಬ್ಬಂದಿಗೆ ವಿವಿಧ ಸೇವಾ ಪದಕಗಳನ್ನು ನೀಡಿ ಗೌರವಿಸಲಾಗುತ್ತದೆ.

ಭಾಷಣದ ಪ್ರಮುಖಾಂಶಗಳು
–  ಸರ್ಕಾರದ ನೀತಿಗಳ ಲಾಭವು ಸಮಾಜದ ಎಲ್ಲ ವರ್ಗಗಳಿಗೂ ತಲುಪುವಂತಾಗಬೇಕು.
–  ಇದಕ್ಕೆ ಸರ್ಕಾರ ಮತ್ತು ಜನರ ಪಾಲುದಾರಿಕೆ ಬಹಳ ಅಗತ್ಯ.
– 2022ಕ್ಕೆ 75ನೇ ಸ್ವಾತಂತ್ರ್ಯ ಸಂಭ್ರಮ ಆಚರಿಸಲಿದ್ದೇವೆ. ನವ ಭಾರತದ ಮೈಲುಗಲ್ಲನ್ನು ಅಷ್ಟರಲ್ಲೇ ನಾವು ತಲುಪಿರಬೇಕು.
– ನವಭಾರತ ಎಂದರೆ ಸಹಾನುಭೂತಿಯುಳ್ಳ ಸಮಾಜ. ಅದರಲ್ಲಿ ಎಸ್‌ಸಿ, ಎಸ್ಟಿ, ಒಬಿಸಿಗಳು ಕೂಡ ರಾಷ್ಟ್ರೀಯ ಅಭಿವೃದ್ಧಿ ಪ್ರಕ್ರಿಯೆಯ ಭಾಗವಾಗಿರಬೇಕು.
– ನೋಟು ಅಮಾನ್ಯಕ್ಕೆ ನೀವು ನೀಡಿದ ಬೆಂಬಲವು ನಮ್ಮದು ಎಷ್ಟೊಂದು ಜವಾಬ್ದಾರಿಯುತ ಸಮಾಜ ಎಂಬುದು ಅರಿವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next