Advertisement

ಬಿಎಸ್ಪಿಯಿಂದ ಸಮಾನ ಅವಕಾಶ: ಶ್ಯಾಮಸುಂದರ

03:27 PM Jan 16, 2018 | Team Udayavani |

ಮಾನ್ವಿ: ಸರ್ವರಿಗೂ ಸಮಾನ ಅವಕಾಶ ನೀಡಬಲ್ಲ ಪವಿತ್ರವಾದ ಪ್ರಜಾಪ್ರಭುತ್ವ ಜಾರಿಗೆ ತರಲು ಬಿಎಸ್‌ಪಿ ಪಕ್ಷದಿಂದ ಮಾತ್ರ ಸಾಧ್ಯ ಎಂದು ಬಿಎಸ್‌ಪಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಶ್ಯಾಮಸುಂದರ ಕುಂಬ್ದಾಳ ಹೇಳಿದರು.

Advertisement

ಬಹುಜನ ಸಮಾಜ ಪಕ್ಷ ತಾಲೂಕು ಘಟಕದಿಂದ ಸೋಮವಾರ ಪಟ್ಟಣದ ಅಂಬೇಡ್ಕರ್‌ ವೃತ್ತದಲ್ಲಿ ಬಿಎಸ್‌ಪಿ ರಾಷ್ಟ್ರಾಧ್ಯಕ್ಷೆ ಮಾಯಾವತಿ ಅವರ ಜನ್ಮದಿನ ನಿಮಿತ್ತ ಕೇಕ್‌ ಕತ್ತರಿಸಿ ಅವರು ಮಾತನಾಡಿದರು. ಸುಮಾರು 50 ವರ್ಷಗಳಿಗೂ ಹೆಚ್ಚುಕಾಲ ಈ ದೇಶವನ್ನಾಳಿದ ಕಾಂಗ್ರೆಸ್‌ ಜನರಿಗೆ ಉತ್ತಮ ಶಿಕ್ಷಣ, ಉದ್ಯೋಗ, ಭೂಮಿ ಹಾಗೂ ಬಂಡವಾಳಗಳನ್ನು ಒದಗಿಸುವ ಯೋಜನೆ ಬಿಟ್ಟು ಅನ್ನಭಾಗ್ಯ, ಕ್ಷೀರಭಾಗ್ಯ, ತಾಳಿಭಾಗ್ಯದಂತಹ ಚಾರಿಟಿ
ಯೋಜನೆಗಳನ್ನು ಜಾರಿ ಮಾಡಿ ದೇಶದಲ್ಲಿ ಬಹುಸಂಖ್ಯಾತರನ್ನು ದೈನೇಸಿಗಳನ್ನಾಗಿ ಮಾಡುತ್ತಿದೆ. ಇನ್ನು ಬಿಜೆಪಿ ಸರ್ಕಾರ ಬಡತನ, ನಿರುದ್ಯೋಗ, ಅಪೌಷ್ಟಿಕತೆಯಂತಹ ಜ್ವಲಂತ ಸಮಸ್ಯೆಗಳನ್ನು ನಿರ್ಲಕ್ಷಿಸಿ ಜಾತಿ-ಜಾತಿಗಳ ಮಧ್ಯೆ ಜಗಳ ಹಚ್ಚಿ ಕೋಮುಗಲಭೆಗಳನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.

ಸರ್ವರಿಗೂ ಸಮಾನ ಅವಕಾಶಗಳು ದೊರಕಲು ಬಿಎಸ್‌ಪಿ ಪಕ್ಷದಿಂದ ಮಾತ್ರ ಸಾಧ್ಯ. ಕರ್ನಾಟಕದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಅಭ್ಯರ್ಥಿಗಳ ಗೆಲುವಿಗೆ ನಾವೆಲ್ಲರೂ ಶ್ರಮಿಸೋಣ ಎಂದರು.

ಇದೆ ವೇಳೆ ಪ್ರಜಾಪ್ರಭುತ್ವ ಉಳಿಸುವ ಕಡೆಗೆ-ಆನೆಯ ನಡಿಗೆ ಜನಾಂದೋಲನ ಬೈಕ್‌ ರ್ಯಾಲಿ ನಡೆಸಲಾಯಿತು. ಅಲ್ಲದೆ ಬಡ ಜನರಿಗೆ ಒಂದು ದಿನ ಉಚಿತ ಆಟೋ ಸೇವೆ ಒದಗಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಬಿಎಸ್‌ಪಿ ಜಿಲ್ಲಾ ಸಮಿತಿ ಸದಸ್ಯ ಹನುಮಂತ್ರಾಯ ಕಪಗಲ್‌, ಚನ್ನಬಸವ ಜಗ್ಲಿ, ನಾರಾಯಣಪ್ಪ ನಾಯಕ, ಸಂಪತ್‌ರಾಜ್‌, ಯಮುನಪ್ಪ ಪನ್ನೂರು, ಇಮಾಮ್‌ ಸಾಬ್‌, ದುರುಗಪ್ಪ ಸಾದಾಪುರ, ದೇಶರಾಜ್‌ ಕೊಡ್ಲಿ, ಪರಶುರಾಮ
ಬಾಗಲವಾಡ, ಉರುಕುಂದ ಜಗ್ಲಿ, ಬಿ. ಚಂದ್ರಶೇಖರ, ಬಸವರಾಜ ದೇವರಮನಿ, ತಾಯಪ್ಪ ದೊಡ್ಡಿ ಸೇರಿದಂತೆ ಆನೇಕರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next