ಹೊಸದಿಲ್ಲಿ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗಾಗಿ ರಾಜ್ಯ ಸರಕಾರಗಳು ಸಮಿತಿ ರಚನೆ ಮಾಡಿರುವುದು ತಪ್ಪೇನಲ್ಲ. ಇಂಥ ಅಧಿಕಾರ ಅವುಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ತೀರ್ಪು ಉತ್ತರಾಖಂಡ ಮತ್ತು ಗುಜರಾತ್ ರಾಜ್ಯಗಳಿಗೆ ಸಮಾಧಾನ ತಂದಿದೆ. ಸಿಜೆಐ ಡಿ.ವೈ. ಚಂದ್ರಚೂಡ್ ಮತ್ತು ನ್ಯಾ| ಪಿ.ಎಸ್. ನರಸಿಂಹ ಅವರಿದ್ದ ಪೀಠವು ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ವಿಚಾರಣೆ ನಡೆಸಿತು.
ಸಂವಿಧಾನದ ಪರಿಚ್ಛೇದ 162ರಂತೆ ರಾಜ್ಯ ಸರಕಾರಗಳಿಗೆ ಸಮಿತಿಗಳನ್ನು ರಚಿಸುವ ಅಧಿಕಾರವಿದೆ. ಇದನ್ನು ನೀವು ಪ್ರಶ್ನೆ ಮಾಡುವಂತಿಲ್ಲ ಎಂದು ಅರ್ಜಿದಾರರಿಗೆ ಸೂಚಿಸಿ, ಅರ್ಜಿಯನ್ನು ತಿರಸ್ಕರಿಸಿತು.
ಇದೇ ಪರಿಚ್ಛೇದದ 5ರಿಂದ 7ನೇ ಶೆಡ್ಯೂಲ್ ಗಳಲ್ಲಿ ರಾಜ್ಯಗಳ ಅಧಿಕಾರದ ಬಗ್ಗೆಯೇ ಪ್ರಸ್ತಾವಿಸಲಾಗಿದೆ. ಇಂಥ ಸಮಿತಿಗಳನ್ನು ರಚಿಸಿದ ಮಾತ್ರಕ್ಕೆ ಸಂವಿಧಾನಕ್ಕೆ ಧಕ್ಕೆಯಾಗಲಿದೆ ಎಂದು ಹೇಳುವಂತಿಲ್ಲ ಎಂದು ಕೋರ್ಟ್ ಹೇಳಿತು.