Advertisement
ಮೃತ ಕಾರ್ಮಿಕರಿಬ್ಬರು ಹಾರೋಹಳ್ಳಿ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿರುವ ಹಾರಿಜನ್ ಫ್ಯಾಕ್ಸ್ ಎಂಬ ಕಾರ್ಖಾನೆಯಲ್ಲಿ ಕಾರ್ಟನ್ ಬಾಕ್ಸ್ ತಯಾರಿಕೆ ಮಾಡುತ್ತಿದ್ದರು. ತ್ಯಾಜ್ಯಯುಕ್ತ ನೀರನ್ನು ಗುಂಡಿಯಿಂದ ಹೊರಹಾಕಲು ಹೋದಾಗ ಈ ಸಾವು ಸಂಭವಿಸಿದೆ.
ಕಾರ್ಖಾನೆಯ ಮಾಲೀಕರು ಹಾಗೂ ಏಜೆನ್ಸಿದಾರರು ಇಬ್ಬರೂ ಈ ಕಾರ್ಮಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಕಾರ್ಮಿಕ ಸಂಘಟನೆ ಮುಖಂಡ ಜಯಸಿಂಹ ಆರೋಪಿಸಿದ್ದಾರೆ.
Related Articles
Advertisement
ಸಾವಿಗೀಡಾದ ಕಾರ್ಮಿಕರ ಕುಟುಂಬಕ್ಕೆ ಸರ್ಕಾರ ಹಾಗೂ ಕಾರ್ಖಾನೆ ಆಡಳಿತ ಮಂಡಳಿ ನ್ಯಾಯಯುತವಾಗಿ ಸಿಗಬೇಕಾದ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.ಸಂಪೂರ್ಣವಾಗಿ ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಏಜೆನ್ಸಿದಾರರಿಬ್ಬರೂ ನಿರ್ಲಕ್ಷ ವಹಿಸಿದ್ದಾರೆ. ಇಪಿಟಿ ಪಿಟ್‌ನಲ್ಲಿ ಕಾರ್ಖಾನೆ ರಾಸಾಯನಿಕ ಯುಕ್ತ ನೀರು ಸೇರಿದ್ದು, ಪ್ರತಿ ಎಂಟು ದಿನಕ್ಕೆ ಒಮ್ಮೆ ಕ್ಲೀನ್ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಎಂಟು ದಿನಗಳ ಒಳಗೆ ಈ ಗುಂಡಿ ಮುಚ್ಚಿರುವುದರಿಂದ ಒಳಗೆ ವಿಷಗಾಳಿ ಸೇರ್ಪಡೆಗೊಂಡಿದ್ದು, ಮನುಷ್ಯರು ಈ ವಿಷಗಾಳಿ ಕುಡಿದ ತಕ್ಷಣ ಸಾವಿಗೀಡಾಗುವಂತಹ ಸನ್ನಿವೇಶ ಏರ್ಪಡುತ್ತದೆ. ಆದೆ ರೀತಿ ಇಲ್ಲಿಯೂ ಆಗಿದೆ ಎಂದು ಗ್ರಾಮ ಪಂಚಾಯತಿ ಸದಸ್ಯ ನರಸಿಂಹಯ್ಯ ಹೇಳಿದ್ದಾರೆ. ಕಾರ್ಖಾನೆಯವರು ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದು ತಮ್ಮನ್ನೇ ಒಳಗೆ ಬಿಡದೆ ಸಾವಿನ ಸುದ್ದಿ ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ ಎಂದು ದೂರಿದರು.
ಸಾವಿಗೀಡದ ಉಮೇಶ್ ಎಂಬಾತನಿಗೆ 3 ತಿಂಗಳ ಮಗುವಿದೆ. ಈತನ ಕುಟುಂಬ ಬೀದಿಪಾಲು ಮಾಡಿದ ಕಾರ್ಖಾನೆ ಮಾಲೀಕರು ಹಾಗೂ ಏಜೆನ್ಸಿದಾರರಿಬ್ಬರು ಪರಿಹಾರ ಕಟ್ಟಿಕೊಡುವಂತೆ ಒತ್ತಾಯಿಸಿದ್ದಾರೆ.