Advertisement

ಮಹಾಭಿಯೋಗ ಸಮರ: ಅರ್ಜಿ ಹಿಂಪಡೆದ ಕಾಂಗ್ರೆಸ್‌

08:11 AM May 09, 2018 | Harsha Rao |

ನವದೆಹಲಿ: ಸುಪ್ರೀಂ ಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ವಿರುದ್ಧದ ಮಹಾಭಿಯೋಗ ಪ್ರಕ್ರಿಯೆಗೆ ಸಂಬಂಧಿಸಿದ ಅರ್ಜಿಯನ್ನು ಕಾಂಗ್ರೆಸ್‌ ಸಂಸದರು ಒಂದೇ ದಿನದಲ್ಲಿ ವಾಪಸ್‌ ಪಡೆದುಕೊಂಡಿದ್ದಾರೆ. ಸೋಮವಾರ ಸಲ್ಲಿಸಿದ ಅರ್ಜಿಯನ್ನು ನ್ಯಾ.ಎ.ಕೆ.ಸಿಕ್ರಿ ನೇತೃತ್ವದ ಐವರು ಸದಸ್ಯರ ನ್ಯಾಯಪೀಠ ಮಂಗಳವಾರ ಕೈಗೆತ್ತಿಕೊಂಡು, ಪ್ರಕರಣವನ್ನು ವಜಾಗೊಳಿಸಿತು. ಕೇವಲ 45 ನಿಮಿಷಗಳಲ್ಲಿ ಒಟ್ಟು ಪ್ರಕ್ರಿಯೆ ಮುಕ್ತಾಯವಾಯಿತು.

Advertisement

ಕಾಂಗ್ರಸ್‌ನ ರಾಜ್ಯಸಭೆ ಸಂಸದರಾಗಿರುವ ಪ್ರತಾಪ್‌ ಸಿಂಗ್‌ ಬಾಜ್ವಾ ಮತ್ತು ಅಮೀ ಹರ್ಷದ್‌ ರಾಯ್‌ ಯಾÿಕ್‌ ಪರವಾಗಿ ವಾದಿಸಿದ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌, ಐವರು ಸದಸ್ಯರ ಸಾಂವಿಧಾನಿಕ ಪೀಠ ರಚಿಸುವ ಆದೇಶ ಹೊರಡಿಸಿದ್ದು ಯಾರು ಎಂಬ ಪ್ರಶ್ನೆಯನ್ನು ನ್ಯಾಯಪೀಠದ ಮುಂದಿಟ್ಟರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌, ಮಹಾಭಿಯೋಗ ನೋಟಿಸ್‌ಗೆ ಸಹಿ ಹಾಕಿದ್ದ 50ಕ್ಕೂ ಅಧಿಕ ಸಂಸದರ ಪೈಕಿ ಕೇವಲ ಇಬ್ಬರು ಮಾತ್ರ ರಾಜ್ಯಸಭೆ ಸಭಾಪತಿ ನಿರ್ಣಯ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇತರ ಆರು ಪಕ್ಷಗಳ ಸಂಸದರು ಈ ಬಗ್ಗೆ ಮನವಿ ಸಲ್ಲಿಸಲಿಲ್ಲ ಎಂದರು. ಅಲ್ಲದೆ, ಇತರ ಪಕ್ಷಗಳ ಸಂಸದರು ಈ ಬಗ್ಗೆ ಕಾಂಗ್ರೆಸ್‌ನ ಇಬ್ಬರು ಸಂಸದರಿಗೆ ಅಧಿಕಾರವನ್ನೇ ಕೊಟ್ಟಿಲ್ಲ ಎಂದು ವಾದಿಸಿದರು. 

ಇದಕ್ಕೂ ಮೊದಲು ನ್ಯಾಯವಾದಿ ಸಿಬಲ್‌ ನ್ಯಾಯಪೀಠಕ್ಕೆ ಏಳು ಪ್ರಶ್ನೆಗಳನ್ನು ಕೇಳಿದ್ದರು. ಮುಖ್ಯ ನ್ಯಾಯಮೂರ್ತಿಯ ವಿರುದ್ಧವೇ ಮಹಾಭಿಯೋಗ ನಿಲುವಳಿ ಮಂಡಿಸಿರುವ ಕಾರಣ, ಅವರ ಆಡಳಿತಾತ್ಮಕ ಆದೇಶದ ಮೂಲಕ ಸಂವಿಧಾನ ಪೀಠ ರಚಿಸುವುದನ್ನು ಒಪ್ಪಲಾಗದು. ಒಂದು ವೇಳೆ ಅವರೇ ಆ ನಿರ್ಧಾರ ಕೈಗೊಂಡಿದ್ದರೆ, ಅರ್ಜಿದಾರರಿಗೆ ಅದನ್ನು ತಿಳಿಯುವ ಹಕ್ಕು ಇದೆ. ಹಾಗಾಗಿ, ಪೀಠ ರಚನೆ ಕುರಿತು ವಿವರಣೆ ನೀಡಿ ಎಂದು ಕೋರಿದರು.

ಇದಕ್ಕೆ ಪೀಠದ ನೇತೃತ್ವದ ವಹಿಸಿದ್ದ ನ್ಯಾ.ಎ.ಕೆ.ಸಿಕ್ರಿ, “ನೀವು ನ್ಯಾಯಪೀಠಕ್ಕೆ ಸವಾಲು ಹಾಕುತ್ತಿದ್ದೀರಾ?’ ಎಂದು ಪ್ರಶ್ನಿಸಿ ದರು. ಜತೆಗೆ ಇಬ್ಬರು ಸಂಸದರಿಗೆ ಆದೇಶದ ಪ್ರತಿ ನೀಡುವು ದರಿಂದ ಆಗುವ ಪ್ರಯೋಜನವೇನು ಎಂದೂ ಪ್ರಶ್ನಿಸಿದರು. ಅಂತಿಮವಾಗಿ ನ್ಯಾಯಪೀಠ ಸಿಬಲ್‌ ಕೋರಿಕೆಗೆ ಒಪ್ಪದ ಹಿನ್ನೆಲೆ ಯಲ್ಲಿ,  ಅರ್ಜಿಯನ್ನು ಸಿಬಲ್‌ ಹಿಂಪಡೆದರು.

ಸೋಲಿನ ಭೀತಿಯಿಂದ  ಕ್ರಮ
ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲುವ ಭೀತಿ ಇದೆ. ಹೀಗಾಗಿಯೇ ಅದು ಎಲ್ಲ ಪಕ್ಷಗಳಿಗಿಂತ ಪ್ರತ್ಯೇಕವಾಗಿರುವ ನಿಲುವು ಅನುಸರಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟಿÉ, ಕಾಂಗ್ರೆಸ್‌ ಪಕ್ಷ ವನ್ನು ಟೀಕಿ ಸಿದ್ದಾರೆ. 

Advertisement

ಫೇಸ್‌ಬುಕ್‌ನಲ್ಲಿ ಹೀಗೆ ಬರೆ ದು ಕೊಂಡಿ ರುವ ಅವ ರು, ಮಹಾಭಿಯೋಗ ವಿಚಾರದಲ್ಲಿ ಕಾಂಗ್ರೆಸ್‌ ಕದಡುವ ನೀರಿನಲ್ಲಿ ಮೀನು ಹಿಡಿವ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ ತನಗೆ ಬೇಕಾದ ನ್ಯಾಯಪೀಠದಲ್ಲಿ ರಾಜ್ಯಸಭೆ ಸಭಾಪತಿ ನಿರ್ಣಯದ ವಿರುದ್ಧ ಮನವಿ ಸಲ್ಲಿಸಿತ್ತು. ಮಹಾಭಿಯೋಗ ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಇರುವಾಗ ಸಭಾಪತಿ ನಿರ್ಣಯ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ಕೂಡ ಸ್ವೀಕಾರಾರ್ಹವಲ್ಲ. ಈ  ಬಗ್ಗೆ ಎಲ್ಲರೂ ಒಂದೇ ಯೋಚನೆ ಮಾಡುತ್ತಿರುವಾಗ ಕಾಂಗ್ರೆಸ್‌ ಏಕೆ ಪ್ರತ್ಯೇಕವಾಗಿರುವ ನಿಲುವು ಹೊಂದಿದೆ ಎನ್ನುವುದೇ ಆಶ್ಚರ್ಯ ಎಂದಿದ್ದಾರೆ. 

ಮಾಹಿತಿ ಹಕ್ಕು ಕಾಯ್ದೆ ಅನ್ವಯ ಅರ್ಜಿ
ನ್ಯಾ.ಎ.ಕೆ.ಸಿಕ್ರಿ ನೇತೃತ್ವದ ಐವರು ಸದಸ್ಯರ ನ್ಯಾಯಪೀಠ ರಚನೆ ಬಗೆಗಿನ ಆದೇಶದ ಪ್ರತಿ ನೀಡಲು ನ್ಯಾಯಪೀಠ ನಿರಾಕರಿಸಿದ ಹಿನ್ನೆಲೆಯಲ್ಲಿ ನ್ಯಾಯವಾದಿ ಪ್ರಶಾಂತ್‌ ಭೂಷಣ್‌ ಮಾಹಿತಿ ಹಕ್ಕು ಕಾಯ್ದೆಯಡಿ ಸುಪ್ರೀಂಕೋರ್ಟ್‌ನ ಮುಖ್ಯ ಮಾಹಿತಿ ಅಧಿಕಾರಿಗೆ ಅರ್ಜಿ ಸಲ್ಲಿಸಿದ್ದಾರೆ. ಇದರ ಜತೆಗೆ ಕೇಸ್‌ ಲಿಸ್ಟ್‌ ಮಾಡಿದ್ದು ಯಾರು, ನ್ಯಾ.ಎ.ಕೆ.ಸಿಕ್ರಿ ನೇತೃತ್ವದ ಪೀಠ ರಚಿಸಿ ಆದೇಶ ನೀಡಿದವರು ಯಾರು ಎಂಬ ಮಾಹಿತಿ ಹಾಗೂ ಆ ಆದೇಶದ ಪ್ರತಿ ನೀಡುವಂತೆಯೂ ಕೋರಿದ್ದಾರೆ. 

ರಾಜಕೀಯ ಕಾರಣಕ್ಕಲ್ಲ
ರಾಜಕೀಯ ಕಾರಣಗಳಿಗಾಗಿಯೇ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ ಎಂಬ ಆರೋ ಪವನ್ನು ಮಾಜಿ ಸಚಿವ ಕಪಿಲ್‌ ಸಿಬಲ್‌ ತಳ್ಳಿಹಾಕಿ ದ್ದಾರೆ. ಕೋರ್ಟ್‌ ಕಲಾಪದ ಬಳಿಕ ಮಾತನಾಡಿದ ಅವರು, “ನ್ಯಾಯಾಂಗದ ಘನತೆ ಮತ್ತು ಸ್ವಾತಂತ್ರ್ಯ ಕಾಪಾಡಲು ಕಾಂಗ್ರೆಸ್‌ ಹೋರಾಡುತ್ತಿದೆ. ನ್ಯಾಯಾಂಗದಲ್ಲಿ ಪಾರದರ್ಶಕ ವ್ಯವಸ್ಥೆ ಬೇಕೆಂಬುದೇ ಪಕ್ಷದ ಆದ್ಯತೆ ಎಂದು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next