Advertisement

ಶೌಚಾಲಯ ಕಟ್ಟಲು ಇಒ ತಾಕೀತು

10:29 AM Dec 09, 2021 | Team Udayavani |

ಅಫಜಲಪುರ: ಅಂಗನವಾಡಿ ಕೇಂದ್ರ ಗಳಲ್ಲಿ ಕಡ್ಡಾಯವಾಗಿ ಶೌಚಾಲಯ ಇರಬೇಕು ಎಂದು ಹೈಕೋರ್ಟ್‌ ಆದೇಶ ಇರುವುದರಿಂದ ನಿಗದಿತ ಅವಧಿಯೊಳಗೆ ಕಟ್ಟಿಕೊಳ್ಳಬೇಕು ಎಂದು ತಾ.ಪಂ ಇಒ ರಮೇಶ ಸುಲ್ಪಿ ತಾಕೀತು ಮಾಡಿದರು.

Advertisement

ತಾ.ಪಂ ಸಭಾಂಗಣದಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ತಾಲೂಕಿನ 98 ಅಂಗನವಾಡಿಗಳಿಗೆ ಶೌಚಾಲಯ ಮಂಜೂರಾಗಿವೆ. ಡಿ. 12ರ ಒಳಗಾಗಿ ಶೌಚಾಲಯ ಕಟ್ಟಿಸಬೇಕು. ಪ್ರತಿ ಶೌಚಾಲಯಕ್ಕೆ 40 ಸಾವಿರ ರೂ. ಅನುದಾನ ನಿಗದಿ ಪಡಿಸಲಾಗಿದ್ದು, ಗುಣಮಟ್ಟದ ಕಾಮಗಾರಿ ಆಗಬೇಕು ಎಂದು ತಿಳಿಸಿದರು.

ಶಿಶು ಅಭಿವೃದ್ದಿ ಇಲಾಖೆ ಅಧಿಕಾರಿ ಮೀನಾಕ್ಷಿ ಮಾತನಾಡಿ, ತಾಲೂಕಿನಾದ್ಯಂತ 260 ಅಂಗನವಾಡಿ ಕೇಂದ್ರಗಳಿದ್ದು ಸ್ವಂತ ಕಟ್ಟಡ 213 ಇವೆ. 27 ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಸಮುದಾಯ ಭವನ ಅಥವಾ ಶಾಲೆಗಳಲ್ಲಿ 20 ಕಡೆ ನಡೆಯುತ್ತಿವೆ. ಹೊಸ 14 ಕಟ್ಟಡಗಳು ನಡೆಯುತ್ತಿವೆ. ಈ ಪೈಕಿ ಏಳು ಕಟ್ಟಡಗಳು ಮುಗಿದಿದ್ದು, ವಶಕ್ಕೆ ಪಡೆಯಬೇಕಾಗಿದೆ. ಏಳು ಪ್ರಗತಿಯಲ್ಲಿವೆ, ಮಂಜೂರಾದ ಶೌಚಾಲಯಗಳನ್ನು ಗುಣಮಟ್ಟದಲ್ಲಿ ಕಟ್ಟಿಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪಿಆರ್‌ಇ ಎಇಇ ನಬಿ ಮಾತನಾಡಿ, ಶೌಚಾಲಯ ಕಾಮಗಾರಿಗಳನ್ನು ನಿಗ ದಿತ ಸಮಯದಲ್ಲಿ ಮುಗಿಸುತ್ತೇವೆ ಎಂದರು. ಅಧಿಕಾರಿಗಳಾದ ರಮೇಶ ಪಾಟೀಲ, ಮೇಲ್ವಿಚಾರಕಿಯರಾದ ಶಾರದಾ ಅವಟೆ, ನಿಂಗಮ್ಮ, ಗೌರಾ ಬಾಯಿ, ಪಾರ್ವತಿ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next