Advertisement

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ: ನ್ಯಾ|ಮಾಣಿಕ್ಯ

10:47 AM Jul 01, 2018 | Team Udayavani |

ಕಲಬುರಗಿ: ನಮಗಾಗಿ ಹಾಗೂ ಮುಂದಿನ ಪೀಳಿಗೆಗಾಗಿ ಪರಿಸರ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಪರಿಸರ ರಕ್ಷಣೆ ಜೊತೆಗೆ ಅದಕ್ಕೆ ಪೂರಕವಾಗಿ ಜೀವನ ನಡೆಸುವದು ನಮ್ಮೆಲ್ಲರ ಹೊಣೆ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ
ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್‌.ಆರ್‌.ಮಾಣಿಕ್ಯ ಹೇಳಿದರು.

Advertisement

ಶಹಾಬಜಾರನ ಆಶ್ರಯ ಕಾಲೋನಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ವಿಶ್ವಜ್ಯೋತಿ ಪ್ರತಿಷ್ಠಾನ ತನ್ನ ದಶಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ “ವಿಜಯಿಗೆ… ಆರೋಗ್ಯ ಜನ್ಮ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಕ್ಕಳಿಗೆ ಸಸಿಗಳನ್ನು ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಂತರ ಶಾಲಾ ಆವರಣದಲ್ಲಿ 39 ಸಸಿಗಳನ್ನು ನೆಡಲಾಯಿತು. 

ಅಧ್ಯಕ್ಷತೆ ವಹಿಸಿದ್ದ ಶಾಸಕಿ ಖನೀಜಾ ಫಾತೀಮಾ ಖಮರುಲ್‌ ಇಸ್ಲಾಂ ಮಾತನಾಡಿ, ದಿನದಿಂದ ದಿನಕ್ಕೆ ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಇದು ಕಡಿಮೆಯಾಗದೇ ಹೋದರೆ ಮಾನವ ಸಂಕುಲಕ್ಕೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು. ಜಿ.ಪಂ.ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ ಮಾತನಾಡಿ, ಹೆಚ್ಚುತ್ತಿರುವ ಪ್ರಕೃತಿ ವಿಕೋಪ, ಪ್ರವಾಹ ಇತ್ಯಾದಿಗಳಿಗೆ ಜಾಗತಿಕ ತಾಪಮಾನ ಹೆಚ್ಚಳ ಕಾರಣವಾಗಿದೆ. ತಾಪಮಾನ ಕಡಿಮೆಯಾಗಿಸಲು, ಪರಿಸರ ಉಳಿಸಲು ಪ್ರತಿಯೊಬ್ಬರೂ ಸಸಿಗಳನ್ನು ಬೆಳೆಸಲು ಮುಂದಾಗಬೇಕೆಂದರು. ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಸಾರಂಗಮಠದ ಜಗದ್ಗುರು ಪೂಜ್ಯ ಡಾ| ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿಇಒ ಸಿ.ಎಸ್‌. ಮುಧೋಳ, ಜಿ.ಪಂ.ಸದಸ್ಯ ಶಾಂತಪ್ಪ ಕೂಡಲಗಿ, ಪತ್ರಕರ್ತ ಜಯತೀರ್ಥ ಪಾಟೀಲ, ಅರಣ್ಯಾಧಿಕಾರಿಗಳಾದ ಆರ್‌.ಆರ್‌. ಯಾದವ, ಗುಂಡುಸಿಂಗ್‌, ಪಾಲಿಕೆ ಸದಸ್ಯೆ ಶರಣಮ್ಮ ಯಲ್ಲಪ್ಪ ನಾಯ್ಕೋಡಿ, ನ್ಯಾಯವಾದಿ ಮಾಲತಿ ರೇಷ್ಮಿ, ಮಂಜುರೆಡ್ಡಿ, ಸೋಮನಾಥ ಮಾಲಿಪಾಟೀಲ, ದೀಪಾರೆಡ್ಡಿ ಗೋಸಾಲ, ಶಾಲೆಯ ಮುಖ್ಯಶಿಕ್ಷಕಿ ವಿಜಯಲಕ್ಮೀ ಟೆಂಗಳಿಕರ, ಪ್ರತಿಷ್ಠಾನದ ಅಧ್ಯಕ್ಷ ಶ್ರೀಕಾಂತ ಪಾಟೀಲ ತಿಳಗೂಳ ಹಾಗೂ ಬಡಾವಣೆ ಗಣ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next