Advertisement
ನಗರೀಕರಣದ ಜಂಜಾಟ ಎಷ್ಟೇ ವ್ಯಾಪಿಸಿದರೂ ಕೂಡ ತುಳುವಿನಲ್ಲಿ ಬರುವ ನಾಟಕಗಳನ್ನು ಸಂಭ್ರ ಮಿಸುವ ಲಕ್ಷಾಂತರ ಮನಸುಗಳು ಇಲ್ಲಿವೆ. ಉತ್ಸವ, ನೇಮ ನಡಾವಳಿ, ಸಂಘ ಸಂಸ್ಥೆಗಳ ಸಂಭ್ರಮ ಕೂಟದ ಸಮಯದಲ್ಲಿ ತುಳು ನಾಟಕ ಇದ್ದರಷ್ಟೇ ಚಂದ. ಹರಕೆಯ ಸ್ವರೂಪದಲ್ಲಿ ಯಕ್ಷಗಾನ ನಡೆಯುವ ಹಾಗೆ, ಕಾರ್ಯಕ್ರಮದ ಸಂಭ್ರಮಕ್ಕೆ ನಾಟಕ ಎಂಬ ಮನೋಭೂಮಿಕೆಯಿಂದಾಗಿ ಕರಾವಳಿ ಭಾಗದಲ್ಲಿ ತುಳು ರಂಗಭೂಮಿಗೆ ವಿಶೇಷ ಸ್ಥಾನ ಮಾನ, ಗೌರವ.
Related Articles
ಒಂದನ್ನೊಂದು ಮೀರಿಸುವ ನಾಟಕ ತಂಡಗಳು ಒಂದೆಡೆಯಾದರೆ, ಕಲಾವಿದರ “ನಾಮಧೇಯ’ದ ಬಲ ಮತ್ತೂಂದೆಡೆ; ಇನ್ನೊಂದೆಡೆ ಕಥೆ, ಹೊಸತನ, ಪ್ರಸ್ತುತಿ, ಆಕರ್ಷಕತೆ, ಸಾಹಿತ್ಯ, ಗೀತರಚನೆ, ಸಂಭಾಷಣೆ… ಹೀಗೆ ನಾನಾ ಕೋನಗಳಿಂದ ತುಳು ನಾಟಕ ತುಳುನಾಡಿಗೆ ಎವರ್‌ಗ್ರೀನ್. ಅಂದಹಾಗೆ, ಯಾವುದೇ ಹೊಸ ಪ್ರಯೋಗ ಬಂದರೂ ಕೂಡ ತುಳು ರಂಗಭೂಮಿಗೆ ಯಾವುದೇ ಆಪತ್ತು ಇಲ್ಲ ಬರುವುದೂ ಇಲ್ಲ. ಯಾಕೆಂದರೆ ಕಲೆಯನ್ನು ನೇರವಾಗಿ ಆ ಕ್ಷಣದಲ್ಲೇ ಸಂಭ್ರಮಿಸುವ ಕಲಾಪೋಷಕ ಮನಸ್ಸು ಕರಾವಳಿ ಭಾಗದಲ್ಲಿ ಚಿರಂತನ.
Advertisement
1933ರಲ್ಲೇ ಆರಂಭವಾದ ತುಳು ನಾಟಕಕೋಸ್ಟಲ್ವುಡ್ಗೆ ಮೂಲ ಅಡಿಪಾಯವೇ ತುಳು ರಂಗಭೂಮಿ. 1970ರಲ್ಲಿ ತುಳು ಸಿನೆಮಾ ಪ್ರದರ್ಶನ ಆರಂಭಿಸಿದರೆ, ತುಳು ರಂಗಭೂಮಿ ಸರಿಸುಮಾರು 1933ರಲ್ಲಿಯೇ ಆರಂಭವಾಗಿತ್ತು. ಮಂಗಳೂರಿನ ಮಾಧವ ತಿಂಗಳಾಯರು ಬರೆದ “ಜನಮರ್ಲ್’ ತುಳುವಿನ ಪ್ರಾರಂಭಿಕ ನಾಟಕ ಎಂಬುದು ಲೆಕ್ಕಾಚಾರ. ಈ ಸಮಯದಲ್ಲಿ ಪಡುಬಿದ್ರಿ ಶಿವಣ್ಣ ಹೆಗ್ಡೆ ಅವರ “ವಿದ್ಯೆದ ತಾದಿ’ 1936ರಲ್ಲಿ, 1945ರಲ್ಲಿ ಕೆಮೂ¤ರು ದೊಡ್ಡಣ್ಣ ಶೆಟ್ಟಿಯವರ “ರಂಗ್‌ದ ಗೊಬ್ಬು’ ಪ್ರದರ್ಶನ ಕಂಡಿತ್ತು. ಅವರ “ಮುತ್ತುನ ಮದೆ¾’ ಆ ಕಾಲದಲ್ಲಿ ಸಾವಿರ ಪ್ರದರ್ಶನ ಕಂಡಿತ್ತು. “ಬೆಚ್ಚ ಬೆಚ್ಚ ಗಂಜಿ ಉಂಡು, ಲತ್ತ್ ಮುಂಚಿ ಚಟ್ನಿ ಉಂಡು.. ಬತ್ತ್ ದೊಂತೆ ಉಂಡ್ರು ಪೋಲೆ, ಬತ್ತ್ದೊಂತೆ ಉಂಡ್ರು ಪೋಲೆ’ ಹಾಡು ಈಗಲೂ ಕೆಲವರಿಗೆ ನೆನಪಿದೆ.
ಕನ್ನಡ ಕೊಂಕಣಿಯಲ್ಲಿ ಆಶಾಭಾವ
ತುಳು ರಂಗಭೂಮಿಯ ಮಧ್ಯೆಯೂ ಕರಾವಳಿಯಲ್ಲಿ ಕನ್ನಡ ರಂಗಭೂಮಿಯೂ ಸಾಕಷ್ಟು ಸದ್ದು ಮಾಡಿದೆ. ಕನ್ನಡ ರಂಗಭೂಮಿಯಲ್ಲಿಯೂ ಕುತೂಹಲ ಭರಿತ ನಾಟಕ ಪ್ರದರ್ಶನ ಕಾಣುತ್ತಿದೆ. ಇಲ್ಲೂ ಕೂಡ ಪ್ರಸಿದ್ದ ನಾಮಧೇಯರ ನಾಟಕಗಳು ಆಯ್ದ ಪ್ರೇಕ್ಷಕರನ್ನು ಆಕರ್ಷಿಸುತ್ತಿರುವುದು ಆಶಾಭಾವದ ಸಂಗತಿ. ಇನ್ನು, ಕೊಂಕಣಿ ರಂಗಭೂಮಿಯಲ್ಲಿಯೂ ಕೆಲವು ನಾಟಕಗಳು ಬರುತ್ತಿವೆ. ಕರಾವಳಿಯಲ್ಲಿ ಕೊಂಕಣಿ ಭಾಷಿಕರು ಸಾಕಷ್ಟು ಸಂಖ್ಯೆಯಲ್ಲಿದ್ದು ಇನ್ನಷ್ಟು ನಾಟಕಗಳನ್ನು ರಂಗಕ್ಕೆ ತರಲು ಇನ್ನಷ್ಟು ಹೆಚ್ಚಿನ ಪ್ರಯತ್ನ ಆಗಬೇಕಾಗಿದೆ.