Advertisement

My Hero: ನೈಜ ಘಟನೆ ಆಧಾರಿತ ಮೈ ಹೀರೋ

11:57 AM Aug 30, 2024 | Team Udayavani |

ಈಗಾಗಲೇ ಟ್ರೇಲರ್‌ ಮೂಲಕ ಗಮನ ಸೆಳೆದಿರುವ “ಮೈ ಹೀರೋ’ ಚಿತ್ರ ಇಂದು ತೆರೆಕಾಣುತ್ತಿದೆ. ವರ್ಣಬೇಧ ಮತ್ತು ಜಾತೀಯತೆಯ ಹಿನ್ನೆಲೆಯಲ್ಲಿ ಮೈ ಹೀರೋ ಸಿನಿಮಾ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಅವಿನಾಶ್‌. ಹಾಗಂತ ಇದನ್ನು ಆರ್ಟ್‌ ಸಿನಿಮಾ ಶೈಲಿಯಲ್ಲಿ ಹೆಣೆಯಲಾಗಿಲ್ಲ, ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ದೃಷ್ಟಿಕೋನದಲ್ಲಿಯೇ ಮನರಂಜನೆಯ ದೃಷ್ಟಿಯಲ್ಲಿಯೇ ಸಿನಿಮಾ ಮಾಡಲಾಗಿದೆ.

Advertisement

ಈ ಸಿನಿಮಾ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ಅವಿನಾಶ್‌ ವಿಜಯಕುಮಾರ್‌, ಅಂತಾರಾಷ್ಟ್ರೀಯ ಮಟ್ಟದ ಸಬ್ಜೆಕ್ಟ್ ಇಟ್ಟುಕೊಂಡು ಈ ಕಥೆ ಮಾಡಿದ್ದೇವೆ. ವಿದೇಶದಲ್ಲಿನ ವರ್ಣಭೇದ ನಮ್ಮಲ್ಲಿನ ಜಾತೀಯತೆಯ ಮೇಲೆ ಇಡೀ ಸಿನಿಮಾ ಸಾಗುತ್ತದೆ. ಸಿಟಿಯಲ್ಲಿ ಈ ಜಾತೀಯತೆ ಬಗ್ಗೆ ಗೊತ್ತಾಗದಿದ್ದರೂ ಹಳ್ಳಿಗಳಲ್ಲಿನ ಸ್ಥಿತಿಯ ಜತೆಗೆ ಹಿಂದುಳಿದ ವರ್ಗದವರ ಮೇಲಿನ ಶೋಷಣೆಯ ಬಗ್ಗೆಯೂ ಈ ಸಿನಿಮಾ ಮೂಲಕ ಹೇಳಹೊರಟಿದ್ದೇವೆ. 2020-2021ರಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಬಾಲಕನ ಮೇಲೆ ನಡೆದ ನೈಜ ಕೃತ್ಯ ಆಧರಿತ ಸಿನಿಮಾ ಇದು. ಇದರ ಜತೆಗೆ ಅಮೆರಿಕನೊÌಬ್ಬರು ಭಾರತದ ಹಿಂದೂಯಿಸಂ ಅನ್ನು ಫಾಲೋ ಮಾಡುತ್ತಿರುತ್ತಾರೆ. ಅದೂ ಕೂಡ ನೈಜ ಘಟನೆ ಆಧಾರಿತವೇ. ಒಂದು ಸಂದರ್ಭದಲ್ಲಿ ಆ ಇಬ್ಬರೂ ಒಂದೇ ಕಡೆ ಸಿಗ್ತಾರೆ. ಅಲ್ಲಿಂದ ಏನೆಲ್ಲ ಘಟಿಸುತ್ತದೆ ಎಂಬುದೇ ಈ ಸಿನಿಮಾದ ತಿರುಳು ಎನ್ನುತ್ತಾರೆ ನಿರ್ದೇಶಕರು.

Advertisement

Udayavani is now on Telegram. Click here to join our channel and stay updated with the latest news.

Next