Advertisement

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ಭೇಟಿ: ಪರಿಸರ ಮಾಲಿನ್ಯಕ್ಕೆ ಸಿಗುತ್ತ ಮುಕ್ತಿ?

03:06 PM Jul 05, 2022 | Team Udayavani |

ಹುಮನಾಬಾದ್: ಕೈಗಾರಿಕಾ ಘಟಕಗಳಿಂದ ಹುಮನಾಬಾದ್ ಪಟ್ಟಣ ಸೇರಿದಂತೆ ಸುತ್ತಲ್ಲಿನ ಗ್ರಾಮಗಳಲ್ಲಿ ಪರಿಸರ ಮಾಲಿನ್ಯ ಉಂಟಾಗುತ್ತಿದ್ದು, ಕಳೆದ ಕೆಲ ದಿನಗಳ ಹಿಂದೆ ನಿಯಮ ಉಲ್ಲಂಘಿಸಿದ 6 ಕಾರ್ಖನೆಗಳು ಮುಚ್ಚಲು ಆದೇಶ ಬಂದಿತ್ತು .

Advertisement

ಕಾರ್ಖಾನೆಗಳಿಂದ ಪರಿಸರ ಮಾಲಿನ್ಯ ಉಂಟಾಗುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ। ಶಾಂತ್ ತಿಮ್ಮಯ್ಯ ಪಟ್ಟಣಕ್ಕೆ, ಕೈಗಾರಿಕಾ ಘಟಕಗಳಿಗೆ ಭೇಟಿ ನೀಡಲಿದ್ದು, ಪರಿಸರ ಹಾನಿ ಉಂಟು ಮಾಡುತ್ತಿರುವ ಕುರಿತು ಕಠಿಣ ಕಾನೂನು ಕ್ರಮಕ್ಕಾಗಿ  ಇಲ್ಲಿನ ಜನರು ನಿರೀಕ್ಷೆಯಲ್ಲಿ ಇದ್ದಾರೆ.

ಕಳೆದ ಒಂದು ದಶಕಕ್ಕೂ ಅಧಿಕ ಅವಧಿಯಿಂದ ಇಲ್ಲಿನ ಕೈಗಾರಿಕಾ ಘಟಕಗಳಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದ್ದು, ಪಟ್ಟಣ ಸೇರಿದಂತೆ ಸುತ್ತಲ್ಲಿನ ಗ್ರಾಮಗಳಿಗೆ ಕಂಟಕವಾಗಿ ಪರಿಣಮಿಸಿದೆ. ಮುಖ್ಯವಾಗಿ ಗಡವಂತಿ, ಮಾಣಿಕನಗರ ಗ್ರಾಮಸ್ಥರಿಗೆ ವಾಯು ಮಾಲಿನ್ಯ ಜತೆಗೆ ಜಲ ಮಾಲಿನ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಕಾರ್ಖಾನೆಗಳು ಸೂಸುವ ವಾಯು ಮಾಲಿನ್ಯದಿಂದ ಹುಮನಾಬಾದ ಪಟ್ಟಣದ ಜನರು ಕೂಡ ಸಮಸ್ಯೆ ಎದುರಿಸುತ್ತಿದ್ದಾರೆ.

ಪರಿಸರ ಮಾಲಿನ್ಯ ತಡೆಗಟ್ಟುವಂತೆ ಒತ್ತಾಯಿಸಿ ಇಲ್ಲಿನ ಗ್ರಾಮಸ್ಥರು ಅನೇಕ ಭಾರಿ ಪ್ರತಿಭಟನೆ ನಡೆಸಿದರು. ಸರ್ಕಾರಗಳಿಗೆ ಪತ್ರಗಳು ಕೂಡ ಬರೆದಿದ್ದರು. ಅಲ್ಲದೇ, ಸ್ಥಳೀಯ ಶಾಸಕ ರಾಜಶೇಖರ ಪಾಟೀಲರು ಕೂಡ ಗಡವಂತಿ ಗ್ರಾಮಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಕೆಮಿಕಲ್ ಹಾಗೂ ಇತರೆ ಕಾರ್ಖಾನೆಗಳಿಂದ ಉಂಟಾಗುತ್ತಿರುವ ಸಮಸ್ಯೆಗೆ ಮುಕ್ತಿ ದೊರಕಿಸುವ ಕಾರ್ಯ ಮಾಡುವುದಾಗಿ ಭರವಸೆ ನೀಡಿದರು. ಅಲ್ಲದೆ, ವಿಧಾನ ಸಭೆಯಲ್ಲಿ ಕೂಡ ಕಾರ್ಖಾನೆಗಳಿಂದ ಗ್ರಾಮಸ್ಥರು ಎದುರಿಸುತ್ತಿರುವ ಸಮಸ್ಯೆ ಕುರಿತು ಸರ್ಕಾರದ ಗಮನ ಸೆಳೆದಿದ್ದರು.

ಕಳೆದ ಕೆಲ ತಿಂಗಳಿಂದ  ರಾಷ್ಟ್ರೀಯ ಮಾನವ ಹಕ್ಕುಗಳ ಹೋರಾಟ ಸಮಿತಿ ಸದಸ್ಯರು ಸಂಬಂಧಿಸಿದ ಇಲಾಖೆಗಳಿಗೆ, ಸರ್ಕಾರಕ್ಕೆ, ರಾಜ್ಯಪಾಲರಿಗೆ ಪತ್ರಬರೆದು ಪರಿಸರ ಹಾನಿ, ಜನರ ಆರೋಗ್ಯದಮೇಲೆ ಬೀರುತ್ತಿರುವ ಪರಿಣಾಮಗಳ  ಕುರಿತು ಮನವಿ ಸಲ್ಲಿಸಿದರು.

Advertisement

ಕಳೆದ ಕೆಲ ವರ್ಷಗಳಿಂದ ಉದಯವಾಣಿ ಪ್ರಕಟಿಸಿದ ವಿಶೇಷ ವರದಿಗಳ ತುಣುಕುಗಳು ಕೂಡ ದಾಖಲೆ ಮಾಡಿ ಸಲ್ಲಿಸಿದರು. ಕಾರಣ ಪರಿಸರ ಇಲಾಖೆ ಕಳೆದ ಕೆಲ ದಿನಗಳ ಹಿಂದೆ 6  ಘಟಕಗಳು ಮುಚ್ಚುವಂತೆ ಮಂಡಳಿ ಆದೇಶ ನೀಡಿತ್ತು. ಇನ್ನೂ ಕೆಲ ಕಾರ್ಖಾನಗಳು ಕೂಡ ಮುಚ್ಚು ಸ್ಥಿತಿ ಇದೇ ಎನ್ನಲಾಗುತ್ತಿದೆ.

ಗಡವಂತಿ ಗ್ರಾಮದಲ್ಲಿನ ಜನರು ಕರಮಿಕಲ್ ತ್ಯಾಜ್ಯದಿಂದ ಅನೇಕ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಗ್ರಾಮದಲ್ಲಿ ಕುಡಿಯುವ ನೀರು ಕೆಮಿಕಲ್ ಮಿಶ್ರಣದಿಂದ ಕೂಡಿದೆ. ಬೇರೆಕಡೆಗಳಿಂದ ನೀರು ತಂದು ಜನರು ಕುಡಿಯುವ ಸ್ಥಿತಿ ಗ್ರಾಮದಲ್ಲಿ ಇದೆ. ಈ ಕುರಿತು ಶಾಸಕರು ಕೂಡ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದು, ಪರಿಸರ ಮಾಲಿನ್ಯ ಮಂಡಳಿ ಅಧ್ಯಕ್ಷರು, ಅಧಿಕಾರಿಗಳು ಗ್ರಾಮಕ್ಕೆ ಭೇಟಿನೀಡಿ ಇಲ್ಲಿನ ಪರಿಸ್ಥಿತಿ ತಿಳಿದುಕೊಳ್ಳಬೇಕು.

ಮಂಗಳವಾರ ಪರಿಸರ ಮಾಲಿನ್ಯ ಮಂಡಳಿ ಅಧ್ಯಕ್ಷರು ಭೇಟಿ ಸಂದರ್ಭದಲ್ಲಿ ಇಲ್ಲಿನ ಗ್ರಾಮಸ್ಥರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಿವರಣೆ ನೀಡಲ್ಲಿದ್ದಾರೆ. ಇಲ್ಲಿನ ಕೈಗಾರಿಕಾ ಘಟಕಗಳು ಬೇರೆಕಡೆಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಲ್ಲಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅಲ್ಲದೆ, ಶಾಸಕ ರಾಜಶೇಖರ ಪಾಟೀಲ ಕೂಡ ಭೇಟಿನೀಡಿ ಜನರ ಸಮಸ್ಯೆಗಳ ಕುರಿತು ವಿವರಿಸಲ್ಲಿದ್ದಾರೆ ಎಂದು ತಿಳಿದು ಬಂದಿದೆ. ನವೀನ್ ಬತಲಿ ಜಯಕರ್ನಾಟಕ ಜನಪರ ವೇದಿಕೆ ರಾಜ್ಯ ಕಾರ್ಯದರ್ಶಿ

ಕೆಲ ಕೈಗಾರಿಕೆಗಳಿಂದ ಇಲ್ಲಿನ ಪರಿಸರ ಹಾಗೂ ಮನುಕುಲದ ಮೇಲೆ ಭಾರಿ ಪ್ರಮಾಣದ ಪ್ರಭಾವ ಬೀರುತ್ತದೆ. ಗಂಡವತಿ, ಮಾಣಿಕನಗರ ಗ್ರಾಮದಲ್ಲಿನ ನೀರು ಕುಡಿಯುವ ಯೋಗ್ಯ ಇಲ್ಲ ಎಂಬ ವರದಿಗಳು ಕೂಡ ಬಂದಿರುವುದು ತಿಳಿದುಬಂದಿದೆ. ಆರೋಗ್ಯದ ಮೇಲೆ ಹಾನಿ ಉಂಟುಮಾಡುತ್ತಿರುವ ಕಾರ್ಖಾನೆಗಳು ಗುರುತಿಸಿ ಅವುಗಳ ವಿರುದ್ದ ಕಠಿಣ ಕಾನೂನಿನ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು. ಜನ, ಜಾನುವಾರು, ಜಲಚರಗಳ ಆರೋಗ್ಯ ಹಾನಿ ಉಂಟು ಮಾಡಲು ಯಾರಿಗೂ ಅಧಿಕಾರ ಇಲ್ಲ ಎಂಬುವುದು ಮಂಡಳಿ ಅಧ್ಯಕ್ಷರು ಸಾಬೀತು ಪಡಿಸಬೇಕು. -ಓಂಕಾರ ತುಂಬಾ ಗ್ರಾಮ ಪಂಚಾಯತ ಸದಸ್ಯರು

-ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next