Advertisement
ಯೋಜನೆ ಕುರಿತು ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ, ಅಧಿಕಾರಿಗಳು ಪ್ರಸ್ತುತಪಡಿಸಿದ “ವಿಸ್ತೃತ ಸಂಭವನೀಯ ವರದಿ’ಯನ್ನು (ಡಿಟೇಲ್ಡ್ μಸಿಬಿಲಿಟಿ ರಿಪೋರ್ಟ್) ಅವಲೋಕಿಸಿದ ಮುಖ್ಯಮಂತ್ರಿಯವರು, ಯೋ ಜನೆ ಜಾರಿಗೆ ತರಬೇಕಾದರೆ ಪರಿಸರಕ್ಕೆ ಸಂಬಂಧಿಸಿದ ವಿಷಯಗಳ ಕಾರಣಕ್ಕೆ ಕೆಲವೊಂದು ಸಂದೇಹಗಳು, ಗೊಂದಲಗಳು ಉಂಟಾಗಿ ವಿರೋಧ ವ್ಯಕ್ತವಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲು ಆಗುವುದಿಲ್ಲ. ಹಾಗಾಗಿ ಯೋಜನೆ ಬಗ್ಗೆ ಪರಿಸರ ಪರಿಣಾಮ ಹಾಗೂ ಮೌಲ್ಯಮಾಪನ ವರದಿ ಸಿದ್ಧಪಡಿಸಿ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿರು. ತಮ್ಮ ಬಜೆಟ್‌ನಲ್ಲಿ ಕುಮಾರಸ್ವಾಮಿ ಈ ಯೋಜನೆ ಘೋಷಣೆ ಮಾಡಿದ್ದರು.
ಒತ್ತಡ ಕಡಿಮೆಯಾಗ ಬಹುದು. ಆದರೆ, ಇವುಗಳಿಂದ ಮಾತ್ರ ಸಂಚಾರ ಸುಗಮವಾಗುತ್ತದೆ ಎಂದು ಹೇಳಲಿಕ್ಕಾಗುವುದಿಲ್ಲ. ಎಲಿವೆಟೆಡ್ ಕಾರಿಡಾರ್‌ನಂತ ಯೋಜನೆಗಳನ್ನೂ ಜಾರಿಗೆ ತರಬೇಕಾಗುತ್ತದೆ. ಮೆಟ್ರೋ 3ನೇ ಹಂತದ ಜೊತೆಗೆ ಅದಕ್ಕೆ ಸಂಪರ್ಕ ಕಲ್ಪಿಸುವ ಯೋಜನೆಗಳನ್ನು ಕಾರ್ಯಗತಗೊಳಿಸಿದಾಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಎಲಿವೆಟೆಡ್ ಕಾರಿಡಾರ್ ಯೋಜನೆ ಬಗ್ಗೆ ಪ್ರಾಥಮಿಕ ಹಂತದ ಚರ್ಚೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.
Related Articles
Advertisement
ರೇವಣ್ಣ ಉಪಸ್ಥಿತಿ; ಸಿಎಂ ಸಮಜಾಯಿಷಿ ಎಲಿವೇಟೆಡ್ ಕಾರಿಡಾರ್ ಯೋಜನೆ ಸಂಬಂಧಿತ ಸಭೆಯಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸಹ ಉಪಸ್ಥಿತರಿದ್ದರು. ಇದಕ್ಕೆ ಸಮಜಾಯಿಷಿ ನೀಡಿದ ಮುಖ್ಯಮಂತ್ರಿ ಎಚ್‌ಡಿಕೆ, ಈ ಯೋಜನೆ ಲೋಕೋಪಯೋಗಿ ಇಲಾಖೆ ವ್ಯಾಪಿಗೆ ಬರಲಿದೆ, ಹೀಗಾಗಿ ರೇವಣ್ಣ ಬಂದಿದ್ದಾರೆ. ಮಾಧ್ಯಮದವರು, ಬೆಂಗಳೂರು ಅಭಿವೃದ್ಧಿಯನ್ನು ರೇವಣ್ಣ ಅವರು ಹೈಜಾಕ್ ಮಾಡುತ್ತಿದ್ದಾರೆ ಎಂದು ಬಿಂಬಿಸಬೇಡಿ ಎಂದು ಚಟಾಕಿ ಹಾರಿಸಿದರು.
14 ವರ್ಷಗಳಿಂದ ಪ್ರಸ್ತಾವನೆಯಲ್ಲಿರುವ ಎಲಿವೆಟೆಡ್ ಕಾರಿಡಾರ್ ಯೋಜನೆ ಬಗ್ಗೆ ಇಂದು ಪ್ರಾಥಮಿಕ ಚರ್ಚೆ ನಡೆಸಿದ್ದೇವೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಯೋಜನೆ ಕಾರ್ಯಗತ ಗೊಳಿಸಲಾಗುವುದು. ಒಂದೊಮ್ಮೆಜನ, ಯೋಜನೆ ಬೇಡ, ನಾವು ಟ್ರಾಫಿಕ್‌ನಲ್ಲೇ ಓಡಾಡುತ್ತೇವೆ ಎಂದರೆ ನಾವೇನೂ ಮಾಡಲಾಗುವುದಿಲ್ಲ.
ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ