Advertisement

ವಿದ್ಯಾರ್ಥಿ ದೆಸೆಯಲ್ಲೇ ಪರಿಸರ ಕಾಳಜಿ ಇರಲಿ

04:34 PM Sep 06, 2021 | Team Udayavani |

ಕೋಲಾರ: ವಿದ್ಯಾರ್ಥಿ ದೆಸೆಯಿಂದಲೇ ಪರಿಸರದ ಬಗ್ಗೆ ಕಾಳಜಿ ಹೊಂದುವುದರಿಂದ ಭವಿಷ್ಯ ಉತ್ತಮವಾಗಿರಲಿದೆ ಎಂದು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್‌.ನಾಗರಾಜಗೌಡ ಅಭಿಪ್ರಾಯಪಟ್ಟರು.

Advertisement

ನಗರದ ಸ್ಕೌಟ್‌ ಭವನದಲ್ಲಿ ಜಿಲ್ಲಾ ಸ್ಕೌಟ್‌ಮತ್ತು ಗೈಡ್ಸ್‌ ಸಂಸ್ಥೆ ಹಾಗೂ ರೋಟರಿಕೋಲಾರ ನಂದಿನಿಯಿಂದ ಆಯೋಜಿಸಿದ್ದಹಸಿರು ಗಣಪತಿ ತಯಾರಿಕಾ ಕಾರ್ಯಾಗಾರಕ್ಕೆಚಾಲನೆ ನೀಡಿ ಮಾತನಾಡಿ, ಸ್ಕೌಟ್ಸ್‌-ಗೈಡ್‌Õಗಳು ಇತರೆ ವಿದ್ಯಾರ್ಥಿಗಳಿಗಿಂತ ವಿಭಿನ್ನಹಾಗೂ ಜೀವನಕ್ಕೆ ಅಗತ್ಯ ತರಬೇತಿಪಡೆಯುತ್ತಿದ್ದು, ಈ ನಿಟ್ಟಿನಲ್ಲಿ ಸಾಗಬೇಕುಎಂದು ಹೇಳಿದರು.

ಅರಿಶಿಣ ಗಣಪತಿ ಪೂಜಿಸಿ: ಪರಿಸರಗಣಪತಿಯನ್ನು ಎಲ್ಲರೂ ತಮ್ಮ ಮನೆಗಳಲ್ಲಿಮಾಡಿ ಪೂಜಿಸುವ ಮೂಲಕ ಹೊಸಸಾಂಪ್ರದಾಯಕ್ಕೆ ಸ್ಕೌಟ್ಸ್‌-ಗೈಡ್ಸ್‌ ಸಂಸ್ಥೆಚಾಲನೆ ನೀಡಿರುವುದು ಶ್ಲಾಘನೀಯ.ಇಂತಹ ಸಾಮಾಜಿಕ ಕಳಕಳಿ ಎಲ್ಲಾ ಸಂಘಸಂಸ್ಥೆಗಳು ಹೊಂದುವ ಮೂಲಕ ಪರಿಸರಉಳಿಸಬೇಕಾದ ಅಗತ್ಯ ಹೆಚ್ಚಾಗಿದೆ.

ಆನ್‌ಲೈನ್‌ನಲ್ಲಿ ಎಲ್ಲರೂ ತರಬೇತಿ ಪಡೆದುಅರಿಶಿಣ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿಪೂಜಿಸಬೇಕು ಎಂದು ತಿಳಿಸಿದರು.ಜಿಲ್ಲಾ ಸ್ಥಾನಿಕ ಆಯುಕ್ತ ಜಿ.ಮುನಿನಾರಾಯಣಪ್ಪ ಮಾತನಾಡಿ, ಸ್ಕೌಟ್ಸ್‌-ಗೈಡ್ಸ್‌ಶಿಕ್ಷಣ ಸಿಗುವ ಎಲ್ಲಾ ಮಕ್ಕಳುಅದೃಷ್ಟವಂತರು, ಇಂತಹ ಅವಕಾಶಸಮಾಜದ ಪ್ರತಿ ಮಗುವಿಗೂ ಸಿಕ್ಕಿದಾಗಮಾತ್ರ ನಮ್ಮ ನಿರೀಕ್ಷೆಗೆ ತಕ್ಕಂತೆ ಬದಲಾವಣೆಸಾಧ್ಯ. ಈಗ ಶಿಬಿರಗಳ ಅಭಿರುಚಿಯನ್ನುಪಡೆದ ವಿದ್ಯಾರ್ಥಿಗಳು ಕನಿಷ್ಠ ಐದು ಜನತಮ್ಮ ಸ್ನೇಹಿತರನ್ನು ಕರೆತಂದು ಶಿಬಿರಗಳಲ್ಲಿಭಾಗವಹಿಸುವಂತೆ ಮಾಡಬೇಕು ಎಂದುತಿಳಿಸಿದರು.

ಜಿಲ್ಲಾ ಆಯುಕ್ತ ಕೆ.ಆರ್‌.ಸುರೇಶ್‌ಮಾತನಾಡಿ, ಈ ವರ್ಷ ಹತ್ತು ಲಕ್ಷ ಹಸಿರುಗಣಪತಿಗಳನ್ನು ರಾಜ್ಯಾದ್ಯಂತ ನಮ್ಮಸಂಸ್ಥೆಯಿಂದ ತರಬೇತಿ ನೀಡಿ,ಪ್ರೊತ್ಸಾಹಿಸುವ ಕಾರ್ಯ ನಡೆಯುತ್ತಿದೆ. ಈಕಾರ್ಯ ಯಶಸ್ವಿ ಆಗಬೇಕಾದರೆ ಶಿಕ್ಷಕರು ಮತ್ತು ಪೋಷಕರಮಾರ್ಗದರ್ಶನಹಾಗೂಸಹಕಾರ ಅಗತ್ಯ. ಪದಾಧಿಕಾರಿಗಳು ತಮ್ಮವ್ಯಾಪ್ತಿಯಲ್ಲಿ ಕಾರ್ಯಾಗಾರಗಳನ್ನುಆಯೋಜಿಸಿ ಪ್ರೋತ್ಸಾಹಿಸಬೇಕು ಎಂದುತಿಳಿಸಿದರು.

Advertisement

ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದಜಿಲ್ಲಾಧ್ಯಕ್ಷ ರುದ್ರಪ್ಪ, ಪದಾಧಿಕಾರಿಗಳಾದಉಮಾದೇವಿ, ವಿ.ಎಂ.ನಾರಾಯಣಸ್ವಾಮಿ, ಬಿಆರ್‌ಪಿ ಎಂ.ಸವಿತಾ, ವಿ.ಬಾಬು,ರಾಧಮ್ಮ, ವಿಶ್ವನಾಥ್‌, ವೆಂಕಟೇಶ್‌,ನಾಗವೇಣಿ ಮುಂತಾದವರುಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next