Advertisement
ಅಂಜನಾದ್ರಿ ಬೆಟ್ಟಕ್ಕೆ ನಿತ್ಯವೂ ಸಾವಿರಾರು ಭಕ್ತರು ಆಗಮಿಸುತ್ತಾರೆ. ಪ್ಲಾಸ್ಟಿಕ್ ಬಾಟಲ್,ಬಟ್ಟೆ ಹಾಗೂ ತೆಂಗಿನಕಾಯಿ ಚಿಪ್ಪುಗಳನ್ನು ಎಲ್ಲಂದರಲ್ಲಿ ಬಿಸಾಡುವ ಮೂಲಕ ಇಡೀ ಬೆಟ್ಟವನ್ನು ಕಸದ ಕುಪ್ಪೆಯಾಗಿಸಿದ್ದರು. ಇದನ್ನು ಮನಗಂಡ ವಿಜಯ ಬಳ್ಳಾರಿ ,ಅರ್ಜುನ, ಆನಂದ,ಸಂತೋಷ, ಹರನಾಯಕ,ಸೌಮ್ಯ ,ಮಂಜುಳಾ ಸೇರಿ 25 ಕ್ಕೊ ಹೆಚ್ಚಿನ ಕಿಷ್ಕಿಂದಾ ಯುವ ಚಾರಣ ಬಳಗದ ಯುವಕ , ಯುವತಿಯರು ಅಂಜನಾದ್ರಿ ಸ್ವಚ್ಚತಾ ಕಾರ್ಯ ಮಾಡಿ ಯುವ ಜನತೆಗೆ ಮಾದರಿಯಾಗಿದ್ದಾರೆ.
ಪ್ಲಾಸ್ಟಿಕ್ ಬಳಕೆ ದೇವಾಲಯಗಳಲ್ಲಿ ನಿಷೇಧವಿದ್ದರೂ ಇಲ್ಲಿಗೆ ಆಗಮಿಸುವ ಭಕ್ತರು ನೀರಿನ ಬಾಟಲ್, ಪ್ಲಾಸ್ಟಿಕ್ ಪಾಕೆಟ್ ಗಳಲ್ಲಿರುವ ಕುರುಕಲು ತಿಂಡಿಗಳನ್ನು ತಂದು ತಿಂದು ಎಲ್ಲಂದರಲ್ಲಿ ಎಸೆಯುವ ಮೂಲಕ ಕಿಷ್ಕಿಂಧಾ ಅಂಜನಾದ್ರಿ ಪ್ರದೇಶವನ್ನು ಮಲೀನ ಮಾಡುತ್ತಿದ್ದು ದೇವಾಲಯದಲ್ಲಿ ಇರುವ ಸಿಬಂದಿಗಳು ಸಹ ಅದನ್ನು ತಡೆಯುವಲ್ಲಿ ವಿಫಲವಾಗಿದ್ದಾರೆ. ತೆಂಗಿನಕಾಯಿ ಒಡೆಯುವ ಸ್ಥಳದಲ್ಲಿ ದೇಗುಲದ ಯಾವ ಸಿಬಂದಿ ಇರದೇ ಇರುವುದರಿಂದ ಭಕ್ತರು ಇಡೀ ಪ್ರದೇಶವನ್ನು ಕಾಯಿ ಎಸೆದು ಕೆಡಿಸಿದ್ದಾರೆ. ಇದನ್ನು ತಡೆಯಲು ಸೂಕ್ತ ನಿಯಮಗಳನ್ನು ರೂಪಿಸಿ ಅನುಷ್ಠಾನ ಮಾಡಬೇಕಿದೆ.