Advertisement

Environment Day ಮುರುಘಾ ಮಠದ ಆಡಳಿತಾಧಿಕಾರಿ ವಿರುದ್ದ ಜನಾಕ್ರೋಶ

10:28 PM Jun 04, 2023 | Team Udayavani |

ಹೊಳಲ್ಕೆರೆ : ಜೂನ್ 5 ವಿಶ್ವ ಪರಿಸರ ದಿನ. ನಮ್ಮ ನೈಸರ್ಗಿಕ ಪರಿಸರವನ್ನು ರಕ್ಷಿಸಲು ನಾವೆಲ್ಲರೂ ಒತ್ತಾಯಿಸುತ್ತೇವೆ. ಅದೆ ರೀತಿಯಲ್ಲಿ ಗಿಡ ನೆಟ್ಟು ಪರಿಸರವನ್ನು ರಕ್ಷಿಸಲು ದೇಶ ರಾಜ್ಯದ ಎಲ್ಲೆಡೆ ಸಂದೇಶಗಳನ್ನು ನೀಡುತ್ತೇವೆ.  ವಿಶ್ವ ಪರಿಸರ ದಿನಕ್ಕೆ ಅಪಕೀರ್ತಿಯಂತೆ ಪಟ್ಟಣದ ಒಂಟಿ ಕಂಬದ ಮುರುಘಾ ಮಠದಲ್ಲಿರುವ ಸಾವಿರಾರು ಮರಗಳ ಮಾರಣಹೋಮ ನಡೆಸಿ ಇಲ್ಲಿನ ಸುಂದರ ಪ್ರಕೃತಿ ಹಾಳು ಗೆಡವಿ ಭಕ್ತರ ಅವಕೃಪೆಗೆ ಒಳಗಾಗಿರುವ ಮುರುಘಾ ಮಠದ ಆಡಳಿತಾಧಿಕಾರಿ ವಿರುದ್ದ ಜನಾಕ್ರೋಶ ವ್ಯಕ್ತವಾಗಿದೆ.

Advertisement

ಚಿತ್ರದುರ್ಗ ಮುರುಘಾ ಮಠದ ಶಾಖಾ ಮಠವಾದ ಪಟ್ಟಣದ ಒಂಟಿ ಕಂಭದ ಮುರುಘ ಮಠದಲ್ಲಿ ಹಿರಿಯ ಜದ್ಗುರು ಲಿ.ಶ್ರೀ ಮಲ್ಲಿಕಾರ್ಜುನ ಮುರುಘಾ ರಾಜೇಂದ್ರ ಸ್ವಾಮಿಗಳ ಐಕ್ಯ ಸ್ಥಳ. ಲಕ್ಯಂತರ ಭಕ್ತರ ಅರಾಧ್ಯ ದೈವ ಎನ್ನಲಾಗಿರುವ ಶ್ರೀ ಮಲ್ಲಿಕಾರ್ಜನ ಮುರುಘಾ ರಾಜೇಂದ್ರ ಸ್ವಾಮಿಗಳ ಇಚ್ಚೆಯಂತೆ ಇಲ್ಲಿ ಐಕ್ಯವಾಗಿದ್ದಾರೆ. ಈ ನಿಟ್ಟಿನಲ್ಲಿ ಇಲ್ಲಿನ ೮೦ ಎಕರೆ ವಿಸ್ತೀರ್ಣದಲ್ಲಿ ಬೃಹತ್ ಉದ್ಯಾನವನ, ಸಾವಿರಾರು ಜಾತಿಗಳ ಮರಗಿಡಗಳು, ಹಣ್ಣು ಹೂವಿನ ಗೀಡಗಳು ಬೆಳೆಸಿ ಅರೆ ಮಲೆನಾಡಿನ ಪ್ರಕೃತಿ ತಾಣವನ್ನಾಗಿ ಸೃಷ್ಟಿಸಲಾಗಿತ್ತು. ಕೋಟಿ ಗಟ್ಟಲೆ ಹಣ ವ್ಯಯಿಸಿದ ಮಠ, ಬರಡಾಗಿದ್ದ ಭೂಮಿಯಲ್ಲಿ ಸುಂದರ ತಾಣವನ್ನಾಗಿ ಸೃಷ್ಟಿಸಿ ಪ್ರವಾಸಿ ತಾಣ ಮಾಡಲಾಗಿತ್ತು.

ಅದರೆ ಜೂನ್ ೫ ವಿಶ್ವ ಪರಿಸರ ದಿನಾಚರಣೆ ಮುನ್ನ ದಿನಗಳಲ್ಲಿ ಇಲ್ಲಿನ ಸಾವಿರಾರು ಮರಗೀಡಗಳನ್ನು ಕಡಿಸಿ ಕಾಳ ಸಂತೆಯಲ್ಲಿ ಮಾರಾಟ ಮಾಡುವ ಹುನ್ನಾರ ಕೈಗೊಳ್ಳಲಾಗಿದೆ ಎನ್ನುವ ಸುದ್ದಿ ಜಿಲ್ಲೆಯಲ್ಲಿ ಹರಿದಾಡುತ್ತಿದೆ. ಮಠದಲ್ಲಿರುವ ಮರಗಿಡಗಳನ್ನು ದುರುದ್ದೇಶಪೂರಿತವಾಗಿ ತೆರವುಗೊಳಿಸುತ್ತಿರುವ ಸರಕಾರಿ ಆಡಳಿತಾಧಿಕಾರಿ ವಿರುದ್ದ ಭಕ್ತರು ಆಕ್ರೋಶಗೊಂಡಿದ್ದಾರೆ.

ಒಂಟಿ ಕಂಬದ ಮುರುಘಾ ಮಠದಲ್ಲಿ ಕಳೆದ ೧೫ ದಿನಗಳಿಂದ ಮರಗಳ ಮಾರಣಹೋಮ ನಡೆಯುತ್ತಿದೆ. ಇಲ್ಲಿನ ಉದ್ಯನವನ ನಾಶ ಮಾಡಿದ್ದಾರೆ. ಜನರಿಗೆ ಆಶ್ರಯವಾಗಿದ್ದ ವನ ನಾಶ ಮಾಡುವುದು ಖಂಡನೀಯ. ಆಡಳಿತಾಧಿಕಾರಿ ಮರಗಳನ್ನು ಕಡಿದು ಸಾಗಿಸುತ್ತಿದ್ದಾರೆಂದು ಇಲ್ಲಿನ ಕೆಲಸಗಾರರು ತಿಳಿಸಿದ್ದಾರೆ. ಆಕ್ರಮವಾಗಿ ವನದಲ್ಲಿರುವ ಮರಗಳನ್ನು ಮಾರಣ ಹೋಮ ಮಾಡಿರುವವರ ವಿರುದ್ದ ಕಾನೂನು ಕೈಗೊಳ್ಳಬೇಕು.
* ಜೀತೇಂದ್ರ ಹುಲಿಗುಂಟೆ ಮಠದ ಸಲಹಾ ಸಮಿತಿ ಸದಸ್ಯರು .

ಮಠದಲ್ಲಿರುವ ಅನಗತ್ಯ ಗೀಡಗಳನ್ನು ತೆರವುಗೊಳಿಸುವಂತೆ ತಿಳಿಸಿದೆ. ಅಲ್ಲಿನ ತೋಟಗಳಿಗೆ ತೊಂದರೆ ಅಗುವುದನ್ನು ತಪ್ಪಿಸಲು ಮತ್ತು ಅನಗತ್ಯವಾಗಿರುವ ಒಣಗಿರುವ ಮರಗಳನ್ನು ತೆರವುಗೊಳಿಸಲು ಅಧೇಶ ನೀಡಿದೆ. ಹಾಗಾಗಿ ಮಠದಲ್ಲಿನ ಮರಗಳನ್ನು ತೆರವು ಕೆಲಸ ನಡೆಯುತ್ತಿದೆ.
** ವರ್ಸ್ತದ್ ಮಠ. ಸರಕಾರ ನಿಯೋಜಿತ ಆಡಳಿತಾಧಿಕಾರಿ. ಮುರುಘಾ ಮಠ

Advertisement

ಒಂಟಿ ಕಂಬದ ಮುರುಘಾ ಮಠದಲ್ಲಿ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಪರವಾನಿಗೆ ನೀಡಿಲ್ಲ. ಕಾನೂನು ಬಾಹಿರವಾಗಿ ಮರಗಳನ್ನು ಕಡಿದು ಹಾಕಿದ್ದಲ್ಲಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುತ್ತೇವೆ.
ವಸಂತಕುಮಾರ್ ಅರಣ್ಯಾಧಿಕಾರಿ.

ವರದಿ: ಎಸ್. ವೇದಮೂರ್ತಿ ಹೊಳಲ್ಕೆರೆ

Advertisement

Udayavani is now on Telegram. Click here to join our channel and stay updated with the latest news.

Next