Advertisement
ರಾಜಧಾನಿಯಲ್ಲಿ ಅಂತರ್ಜಲ ಪ್ರಮಾಣ ಇಳಿಮುಖವಾಗಿರುವ ಕಾರಣ, ಆಯ್ದ ನಿವೇಶನದಲ್ಲಿನ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಕೆ ಕಡ್ಡಾಯಗೊಳಿಸಿ ಸರ್ಕಾರ 2009ರಲ್ಲಿ ಕಾಯ್ದೆ ಜಾರಿಗೊಳಿಸಿತ್ತು. ಕಾಯ್ದೆ ಜಾರಿಯಾಗಿ 8 ವರ್ಷ ಕಳೆದರೂ ಪದ್ಧತಿ ಅಳವಡಿಕೆಗೆ ಸ್ಪಂಧನೆ ದೊರೆತಿಲ್ಲ. ಆ ಹಿನ್ನೆಲೆಯಲ್ಲಿ 2017ರ ಫೆಬ್ರವರಿಯಲ್ಲಿ ದಂಡ ಪ್ರಯೋಗಕ್ಕೆ ಸರ್ಕಾರ ನಿರ್ಧರಿಸಿತು. ಅದರಂತೆ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳದ ಕಟ್ಟಡಗಳನ್ನು ಪಟ್ಟಿ ಮಾಡಿದ ಜಲಮಂಡಳಿಯು ಆ ಕಟ್ಟಡಗಳ ನೀರು ಬಳಕೆ ಶುಲ್ಕದ ಜತೆಗೆ ದಂಡವನ್ನು ಸೇರಿಸಿ ವಸೂಲಿ ಮಾಡು ವ್ಯವಸ್ಥೆ ಜಾರಿಗೊಳಿಸಿದೆ.
Related Articles
Advertisement
ಎರಡು ತಿಂಗಳಿನಿಂದೀಚೆಗೆ ಮಾಲೀಕರು ತಮ್ಮ ಕಟ್ಟಡ 2007ಕ್ಕೂ ಮೊದಲೇ ನಿರ್ಮಾಣವಾಗಿತ್ತು ಎಂಬುದಕ್ಕೆ ಪೂರಕ ದಾಖಲೆ ಸಲ್ಲಿಸಿದ ಹಿನ್ನೆಲೆಯಲ್ಲಿ 20,000 ಕಟ್ಟಡಗಳನ್ನು ದಂಡ ವ್ಯಾಪ್ತಿಯಿಂದ ಕೈಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಳೆ ನೀರು ಕೊಯ್ಲು ಸುಲಭ ಪ್ರತಿ ತಿಂಗಳು ಬಿಲ್‌ನ ಅರ್ಧದಷ್ಟು ದಂಡ ಪಾವತಿಸುವುದಕ್ಕಿಂತ ಕಟ್ಟಡಕ್ಕೆ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳುವುದು ಸುಲಭವಾಗಿದ್ದು, ಎರಡು ಸರಳ ಮಾದರಿಗಳಿವೆ. ಮನೆಯ ತಾರಸಿಯಲ್ಲಿ ಸಂಗ್ರಹವಾಗುವ ಮಳೆ ನೀರು ಸಂಪ್‌ಗೆ ಹರಿಯುವಂತೆ ಕೊಳವೆ ಅಳವಡಿಸುವುದು. ಜತೆಗೆ ನೀರಿನ ಶುದ್ಧತೆ ಕಾಪಾಡಲು ಫಿಲ್ಟರ್ ಅಳವಡಿಸಿಕೊಳ್ಳುವುದು ಅಥವಾನೇರವಾಗಿ ಅಂತರ್ಜಲ ಸೇರುವಂತೆ ಇಂಗುಗುಂಡಿ ನಿರ್ಮಿಸಿ ಕೊಳವೆ ಸಂಪರ್ಕ ಕಲ್ಪಿಸುವ ಮಾದರಿಗಳಿವೆ. ದಂಡ ಪ್ರಮಾಣ ಹೇಗೆ?
ಗೃಹ ಬಳಕೆ ಸಂಪರ್ಕಕ್ಕೆ ನೀರು ಬಳಕೆ ಶುಲ್ಕದ ಶೇ.50ರಷ್ಟು ಹಾಗೂ ಗೃಹೇತರ ಸಂಪರ್ಕಕ್ಕೆ ನೀರು ಬಳಕೆ ಶುಲ್ಕದ ಶೇ.100ರಷ್ಟು ದಂಡ ವಿಧಿಸಲಾಗುತ್ತಿದೆ. ಆ ಮೂಲಕ ಪ್ರತಿ ತಿಂಗಳು ದಂಡದ ರೂಪದಲ್ಲಿ ಮಂಡಳಿಗೆ ಕೋಟ್ಯಂತರ ರೂ.ಆದಾಯ ಸಂಗ್ರಹವಾಗುತ್ತಿದೆ. ಕಳೆದ ಆಗಸ್ಟ್‌ನಲ್ಲಿ 2.45 ಕೋಟಿ ರೂ. ದಂಡ ವಿಧಿಸಲಾಗಿದ್ದು, 2017ರ ಫೆಬ್ರವರಿಯಿಂದ ಈವರೆಗೆ ದಂಡ ರೂಪದಲ್ಲಿ 35 ಕೋಟಿ ರೂ. ಸಂಗ್ರಹವಾಗಿದೆ. ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳಲಿ ಎಂಬ ಕಾರಣಕ್ಕೆ ದಂಡ ವಿಧಿಸಲಾಗುತ್ತಿದೆ. ಆದರೆ ಈ ಬಗ್ಗೆ ರಸೀದಿಯಲ್ಲಿ ಸ್ಪಷ್ಟವಾಗಿ ನಮೂದಾಗಿಲ್ಲ ಎಂಬುದು ಗಮನಕ್ಕೆ ಬಂದಿರಲಿಲ್ಲ. ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಬಿಲ್‌ನಲ್ಲಿ ದಂಡದ ಕಾಲಂ ನಮೂದಿಸಲು ಕ್ರಮ ಕೈಗೊಳ್ಳಲಾಗುವುದು.
ತುಷಾರ್ ಗಿರಿನಾಥ್, ಜಲಮಂಡಳಿ ಅಧ್ಯಕ್ಷ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳದಿರುವುದಕ್ಕೆ ದಂಡ ಎಂದು ಬಿಲ್‌ನಲ್ಲಿ ನಮೂದಿಸಿಲ್ಲ. ಹೀಗಾಗಿ ಜನರಿಗೆ ಯಾವ ಕಾರಣಕ್ಕೆ ದಂಡ ಎಂಬುದು ತಿಳಿಯುತ್ತಿಲ್ಲ. ನಮೂದಿಸಿದಾಗ ಮಾತ್ರ ದಂಡ ಪಾವತಿಯಿಂದ ವಿನಾಯ್ತಿ ಪಡೆಯಲು ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳುತ್ತಾರೆ.
ಚಂದ್ರಮೌಳಿ, ಜಲಮಂಡಳಿ ಗುತ್ತಿಗೆದಾರ