Advertisement

ಪಿಯು ಪ್ರವೇಶ ಹೆಚ್ಚಳಕ್ಕೆ ದಾಖಲಾತಿ ಆಂದೋಲನ

11:30 AM May 06, 2017 | Harsha Rao |

ಬೆಂಗಳೂರು: ಮೇ ಎರಡನೇ ವಾರದಲ್ಲಿ ಪ್ರಕಟವಾಗಲಿರುವ ಎಸ್ಸೆಸ್ಸೆಲ್ಸಿ ಫ‌ಲಿತಾಂಶದ ನಂತರ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳು ಶಿಕ್ಷಣ ಮುಂದುವರಿಸುವ ನಿಟ್ಟಿನಲ್ಲಿ ಹಾಗೂ ಯಾವುದೇ ವಿದ್ಯಾರ್ಥಿ ಕಾಲೇಜು ಶಿಕ್ಷಣದಿಂದ
ವಂಚಿತರಾಗದಂತೆ ನೋಡಿಕೊಳ್ಳಲು ದಾಖಲಾತಿ ಆಂದೋಲನ ಕೈಗೊಳ್ಳಲು ಪಿಯು ಇಲಾಖೆ ಸುತ್ತೋಲೆ ಹೊರಡಿಸಿದೆ.
ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರು ತಮ್ಮ ವ್ಯಾಪ್ತಿಯ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಬೇಕು. ನಂತರ ಆ ವಿದ್ಯಾರ್ಥಿಗಳ ಪಾಲಕ, ಪೋಷಕರನ್ನು ಸಂಪರ್ಕಿಸಿ, ಪಿಯುಗೆ ದಾಖಲಾಗಲು ಪ್ರೋತ್ಸಾಹ ನೀಡಬೇಕು. ವಿದ್ಯಾರ್ಥಿಗಳ ಪಾಲಕ, ಪೋಷಕರನ್ನು ತಲುಪಲು ಕರಪತ್ರ, ದೂರವಾಣಿ ಸಂದೇಶ, ವಾಟ್ಸ್‌ಆ್ಯಪ್‌ ಸಂದೇಶ, ಫೇಸ್‌ಬುಕ್‌ ಮೂಲಕ ಅಭಿಯಾನ ಮಾಡಬೇಕು ಎಂದು ತಿಳಿಸಲಾಗಿದೆ. ಒಂದು ಸಾವಿರ ರೂ.
ಕ್ಕಿಂತ ಜಾಸ್ತಿ ವೆಚ್ಚ ಆಗದಂತೆ ಎಚ್ಚರ ವಹಿಸಲು ಸೂಚಿಸಿದೆ.

Advertisement

ಸ್ಥಳೀಯ ಸುದ್ದಿವಾಹಿನಿಯಲ್ಲಿ ಕಾಲೇಜಿನ ಸೌಲಭ್ಯಗಳನ್ನು ಪ್ರಸಾರ ಮಾಡುವಂತೆ ಉತ್ತೇಜಿಸುವುದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಿಜ್ಞಾನ, ವಾಣಿಜ್ಯ ಸಂಯೋಜನೆಯ ಪಠ್ಯಪುಸ್ತಕವನ್ನು ಉಚಿತವಾಗಿ ನೀಡುವ ಯೋಜನೆಯ ಮನವರಿಕೆ, ಜಿಲ್ಲೆಗೆ ಪ್ರಥಮ ಬಂದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡುವ ವಿಚಾರ ಸೇರಿ ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮ ಜಾರಿ ಮಾಡುವುದನ್ನು ಸೇರಿಸಿಕೊಂಡು ದಾಖಲಾತಿ ಆಂದೋಲನ ನಡೆಸಲು ಪ್ರಾಂಶುಪಾಲಕರಿಗೆ ಸೂಚನೆ ನೀಡಿದೆ.

ಕಾಲೇಜು ಬಿಟ್ಟ ವಿದ್ಯಾರ್ಥಿಗಳನ್ನು ಪುನಃ ಕಾಲೇಜಿಗೆ ಕರೆತರಲು ಮನೆ, ಮನೆಗೆ ಭೇಟಿ ನೀಡುವುದು, ಈ ಆಂದೋಲನಕ್ಕಾಗಿ ಕಾಲೇಜು ಅಭಿವೃದ್ಧಿ ಸಭೆ ಕರೆದು, ಪ್ರವೇಶ ಹೆಚ್ಚಳಕ್ಕೆ ಪೂರಕವಾಗುವಂತೆ ಕಳೆದ ವರ್ಷದ
ದಾಖಲಾತಿ ವರದಿ ಸಿದ್ಧಪಡಿಸುವುದು, ತಾಲೂಕಿಗೆ ಒಬ್ಬ ಪ್ರಾಂಶುಪಾಲರನ್ನೇ ನೋಡಲ್‌ ಅಧಿಕಾರಿಯಾಗಿ ನೇಮಿಸುವುದು, ಕಾಲೇಜಿನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಭಾವಚಿತ್ರ ಪ್ರಕಟಿಸುವುದು ಸೇರಿ ಹಲವು ಕ್ರಮ ತೆಗೆದುಕೊಳ್ಳಲು ನಿರ್ದೇಶಿಸಲಾಗಿದೆ.

ಅಗತ್ಯ ದಾಖಲೆ ಸಲ್ಲಿಕೆ
2017-18ನೇ ಶೈಕ್ಷಣಿಕ ವರ್ಷದಲ್ಲಿ ತಾತ್ಕಾಲಿಕ ಅರ್ಹತಾ ಪತ್ರ ಹಾಗೂ ವಲಸೆ ಪ್ರಮಾಣ ಪತ್ರ ಪಡೆಯಲಿಚ್ಛಿಸುವ ಅಭ್ಯರ್ಥಿಗಳು ಪದವಿಪೂರ್ವ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ ಮೂಲಕ ಅರ್ಜಿ ಡೌನ್‌ಲೋಡ್‌ ಮಾಡಿಕೊಂಡು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಲು ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next