ಮಳವಳ್ಳಿ: ಗ್ರಾಮೀಣ ಜನರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು. ಆ ಮೂಲಕ ಸರ್ಕಾರಿ ಶಾಲೆ ಗಳ ಉಳಿವಿಗೆ ಮುಂದಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ ಹೇಳಿದರು.
ತಾಲೂಕಿನ ಬುಳ್ಳಿಕೆಂಪನದೊಡ್ಡಿ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆರಂಭ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿ, ಕಳೆದ 10 ವರ್ಷ ದಿಂದ ಮುಚ್ಚಿದ್ದ ಈ ಸರ್ಕಾರಿ ಶಾಲೆಗೆ ಪೋಷಕರ ಸಹಕಾರದಿಂದ 20 ವಿದ್ಯಾರ್ಥಿಗಳ ದಾಖಲು ಉತ್ತಮ ಬೆಳವಣಿಗೆ. ಮುಂದಿನ ದಿನಗಳಲ್ಲಿ ಶಾಲೆ ಅಭಿವೃದ್ಧಿಗೆ ಶಿಕ್ಷಣ ಇಲಾಖೆಯಿಂದ ಹಲವು ಕಾರ್ಯಕ್ರಮ ನಡೆಯಲಿದೆ ಎಂದರು.
ಮುಚ್ಚಿದ ಶಾಲೆ ತೆರೆಯಲುಕ್ರಮವಹಿಸಿ: ತಾಲೂಕಿನಲ್ಲಿ30 ಸರ್ಕಾರಿ ಶಾಲೆಗಳು ಮುಚ್ಚಿವೆ. ಹತ್ತು ಶಾಲೆಗಳು ಮುಚ್ಚುವ ಹಂತ ತಲುಪಿವೆ. ಪೋಷಕರ ಸಭೆ ನಡೆಸಿ, ಮುಚ್ಚಿರುವ ಸದ್ಯದಲ್ಲಿಯೇ ಎಲ್ಲ ಶಾಲೆ ಗಳನ್ನು ತೆರೆಯಲು ಕ್ರಮ ವಹಿಸಲಾಗುವುದು. ಮುಚ್ಚಿರುವ ಶಾಲೆಗಳನ್ನು ಮತ್ತೆ ಆರಂಭಿಸಿ, ಸರ್ಕಾರಿ ಶಾಲೆಗಳನ್ನು ಉಳಿಸಿ ರಕ್ಷಿಸುವ ಕಾರ್ಯಕ್ಕೆ ಪೊಷಕರು ಮುಂದಾಗಬೇಕು. ಆ ನಿಟ್ಟಿನಲ್ಲಿ ತಾಲೂ ಕಿನಲ್ಲಿ ಪೋಷಕರ ಮನವೊಲಿಸುವ ಕಾರ್ಯ ನಿರಂ ತರವಾಗಿ ನಡೆಯುತ್ತಿದ್ದು, ಶಾಲೆಗಳ ಆರಂಭಕ್ಕೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಅಧಿಕಾರಿಗಳ ನಿರ್ಲಕ್ಷ್ಯ: ಗ್ರಾಮದ ಬಿ.ನಾಗೇಶ್ ಮಾತನಾಡಿ, ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮ್ಮ ಗ್ರಾಮದ ಶಾಲೆ ಮುಚ್ಚಿತು. ಇದೀಗ ಆರಂಭವಾಗಿ ರುವ ಶಾಲೆ ಮತ್ತೆ ಮುಚ್ಚದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಬೆಂಗಳೂರಿನ ಪಟ್ಟಣಗೆರೆ ರಂಗನಾಥ ಶಾಸ್ತ್ರಿ ಕೃಷ್ಣ ವೇಣಮ್ಮಮೆಮೋರಿಯಲ್‌ಟ್ರಸ್ಟ್‌ಸತ್ಯನಾರಾಯಣ ಅವರು ಮಕ್ಕಳಿಗೆ ಬ್ಯಾಗ್ ವಿತರಿಸಿದರು.
ಕ್ಷೇತ್ರ ಸಮಾನ್ವಯಾಧಿಕಾರಿ ಯೋಗೇಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಯ ಪ್ರಕಾಶ್, ಜಿ.ಎಸ್.ಕೃಷ್ಣ, ಶಿಕ್ಷಕರಾದ ಎ.ಎಸ್.ದೇವರಾಜು, ರಾಜೇಶ್, ಸಿದ್ದರಾಜು, ಮುಖಂಡರಾದ ಕೃಷ್ಣ, ಆರ್.ದಾಸೇಗೌಡ, ಬಿ.ನಾಗೇಶ್, ಬೋರೇಗೌಡ, ಚನ್ನೇಗೌಡ ಹಾಜರಿದ್ದರು.