Advertisement

ENGvsWI: 147 ವರ್ಷಗಳಲ್ಲೇ ಮೊದಲು; ವಿಂಡೀಸ್ ವಿರುದ್ದ ದಾಖಲೆ ಬರೆದ ಇಂಗ್ಲೆಂಡ್

05:58 PM Jul 18, 2024 | Team Udayavani |

ಟ್ರೆಂಟ್ ಬ್ರಿಡ್ಜ್: ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಿದೆ. ಟ್ರೆಂಟ್ ಬ್ರಿಡ್ಜ್ ನಲ್ಲಿ (Trent Bridge) ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ (England) ತಂಡವು ದಾಖಲೆಯೊಂದನ್ನು ಬರೆದಿದೆ.

Advertisement

ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಇಂಗ್ಲೆಂಡ್ ಬ್ಯಾಟರ್ ಗಳು ಭರ್ಜರಿಯಾಗಿ ಬ್ಯಾಟ್ ಬೀಸಿದರು. ಕೇವಲ 4.2 ಓವರ್ ಗಳಲ್ಲಿ 50 ರನ್ ಗಳಿಸಿತು. 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಂಡವೊಂದು 27 ಎಸೆತಗಳಲ್ಲಿ 50 ರನ್ ಗಳಿಸಿದ್ದು ಇದೇ ಮೊದಲು. 1994 ರಲ್ಲಿ ಓವಲ್‌ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 4.3 ಓವರ್‌ಗಳಲ್ಲಿ 50 ರನ್ ಗಳಿಸಿದ ಇಂಗ್ಲೆಂಡ್ ತನ್ನದೇ ಆದ ದಾಖಲೆಯನ್ನು ಮುರಿದಿದೆ.

ಮೊದಲ ಓವರ್ ನಲ್ಲಿಯೇ ಜಾಕ್ ಕ್ರಾಲಿ ರೂಪದಲ್ಲಿ ವಿಕೆಟ್ ಕಳೆದುಕೊಂಡರೂ, ಬೆನ್ ಡಕೆಟ್ ಮತ್ತು ಒಲೀ ಪೋಪ್ ಭರ್ಜರಿಯಾಗಿ ಬ್ಯಾಟಿಂಗ್ ನಡೆಸಿದರು. ಡಕೆಟ್ 59 ಎಸೆತಗಳನ್ನು ಎದುರಿಸಿ 71 ರನ್ ಗಳಿಸಿದರು.

ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ವೇಗವಾಗಿ ತಂಡದ 50 ರನ್

4.2 ಓವರ್‌ ಗಳು – ವಿಂಡೀಸ್ ವಿರುದ್ಧ ಇಂಗ್ಲೆಂಡ್, ನಾಟಿಂಗ್‌ಹ್ಯಾಮ್, 2024

Advertisement

4.3 ಓವರ್‌ ಗಳು – ದ.ಆಫ್ರಿಕಾ ವಿರುದ್ಧ ಇಂಗ್ಲೆಂಡ್, ಓವಲ್, 1994

4.6 ಓವರ್‌ ಗಳು – ಶ್ರೀಲಂಕಾ ವಿರುದ್ಧ ಇಂಗ್ಲೆಂಡ್, ಮ್ಯಾಂಚೆಸ್ಟರ್, 2002

5.2 ಓವರ್‌ ಗಳು – ಪಾಕ್ ವಿರುದ್ಧ ಶ್ರೀಲಂಕಾ, ಕರಾಚಿ, 2004

5.3 ಓವರ್‌ ಗಳು – ಇಂಗ್ಲೆಂಡ್ ವಿರುದ್ಧ ಭಾರತ, ಚೆನ್ನೈ, 2008

5.3 ಓವರ್‌ ಗಳು – ವಿಂಡೀಸ್ ವಿರುದ್ಧ ಭಾರತ, ಪೋರ್ಟ್ ಆಫ್ ಸ್ಪೇನ್, 2023

ಈ ಪಂದ್ಯದಲ್ಲಿ ಇಂಗ್ಲೆಂಡ್ ಒಂದು ಬದಲಾವಣೆ ಮಾಡಿಕೊಂಡಿದೆ. ಕಳೆದ ಪಂದ್ಯದಲ್ಲಿ ನಿವೃತ್ತಿಯಾಗಿದ್ದ ಜೇಮ್ಸ್ ಆ್ಯಂಡರ್ಸನ್ ಬದಲಿಗೆ ಮಾರ್ಕ್ ವುಡ್ ಅವರು ಈ ಪಂದ್ಯದಲ್ಲಿ ಆಡಲಿಳಿದರು. ವೆಸ್ಟ್ ಇಂಡೀಸ್ ತಂಡದ ಸ್ಪಿನ್ನರ್ ಗುಡಾಕೇಶ್ ಮೋಟಿ ಅವರು ಜ್ವರದಿಂದ ಬಳಲುತ್ತಿದ್ದ ಕಾರಣ ಕೆವಿನ್ ಸಿಂಕ್ಲೇರ್ ಅವಕಾಶ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next