Advertisement

ENGvsPAK: ಟೆಸ್ಟ್‌ ಇತಿಹಾಸದಲ್ಲೇ ಮೊದಲು…. ದಾಖಲೆಯ ಜೊತೆಯಾಟವಾಡಿದ ರೂಟ್-ಬ್ರೂಕ್

05:37 PM Oct 10, 2024 | Team Udayavani |

ಮುಲ್ತಾನ್:‌ ಪ್ರವಾಸಿ ಇಂಗ್ಲೆಂಡ್‌ ವಿರುದ್ದದ ಪಾಕಿಸ್ತಾನದ ಮೊದಲ ಟೆಸ್ಟ್‌ ಪಂದ್ಯದಲ್ಲಿ ರನ್‌ ರಾಶಿ ಹರಿದಿದೆ. ಮುಲ್ತಾನ್‌ (Multan) ನಲ್ಲಿ ನಡೆಯುತ್ತಿರುವ ನಾಲ್ಕನೇ ದಿನದಾಟದಲ್ಲಿ ಇಂಗ್ಲೆಂಡ್‌ ತಂಡವು ಭರ್ಜರಿ ರನ್‌ ಪೇರಿಸಿದ್ದು, ಏಳು ವಿಕೆಟ್‌ ನಷ್ಟಕ್ಕೆ 823 ರನ್‌ ಗಳಿಸಿದೆ. ಯುವ ಆಟಗಾರ ಹ್ಯಾರಿ ಬ್ರೂಕ್‌ (Harry Brook) ಅವರ ತ್ರಿಶತಕ ಮತ್ತು ಅನುಭವಿ ಆಟಗಾರ ಜೋ ರೂಟ್‌ (Joe Root) ದ್ವಿಶತಕ ಬಾರಿಸಿ ಮಿಂಚಿದ್ದಾರೆ.

Advertisement

ಮುಲ್ತಾನ್‌ ನಲ್ಲಿ ಜೋ ರೂಟ್‌ ಮತ್ತು ಹ್ಯಾರಿ ಬ್ರೂಕ್‌ ಅವರು ನಾಲ್ಕನೇ ವಿಕೆಟ್‌ ಗೆ 454 ರನ್‌ ಜೊತೆಯಾಟವಾಡಿದರು.

1877 ರಲ್ಲಿ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಇಬ್ಬರು ಬ್ಯಾಟರ್‌ ಗಳು ನಾಲ್ಕನೇ ವಿಕೆಟ್‌ ಗೆ 450 ರನ್‌ ಜೊತೆಯಾಟವಾಡಿದರು. ಆಸ್ಟ್ರೇಲಿಯದ ಆ್ಯಡಮ್ ವೋಗ್ಸ್ ಮತ್ತು ಶಾನ್ ಮಾರ್ಷ್ 449 ರನ್ ಗಳಿಸಿದ್ದು ಇದುವರೆಗಿನ ಅತ್ಯುತ್ತಮವಾಗಿತ್ತು. ಅವರು 2015 ರಲ್ಲಿ ಹೋಬರ್ಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಈ ದಾಖಲೆಯ ಸ್ಕೋರ್ ಗಳಿಸಿದ್ದರು.

ಹ್ಯಾರಿ ಬ್ರೂಕ್‌ ಅವರು 317 ರನ್‌ ಗಳಿಸಿ ತ್ರಿಶತಕ ಸಾಧಕರ ಸಾಲಿಗೆ ಸೇರಿದರು. ಬ್ರೂಕ್‌ 322 ಎಸೆತಗಳಲ್ಲಿ 317 ರನ್‌ ಮಾಡಿದರು. ಈ ಇನ್ನಿಂಗ್ಸ್‌ ನಲ್ಲಿ 29 ಬೌಂಡರಿ ಮತ್ತು ಮೂರು ಸಿಕ್ಸರ್‌ ಬಾರಿಸಿದರು. ಜೋ ರೂಟ್‌ ಅವರು 375 ಎಸೆತಗಳಲ್ಲಿ 262 ರನ್‌ ಗಳಿಸಿದರು.

Advertisement

ಬ್ರೂಕ್ ಮತ್ತು ರೂಟ್ ಅವರ 454 ರನ್‌ಗಳ ಜೊತೆಯಾಟವು ವಿದೇಶದಲ್ಲಿ ಯಾವುದೇ ವಿಕೆಟ್‌ ಗಾಗಿ ಟೆಸ್ಟ್ ಕ್ರಿಕೆಟ್‌ ನಲ್ಲಿ ಗಳಿಸಿದ ಅತಿ ಹೆಚ್ಚಿನ ಜೊತೆಯಾಟವಾಗಿದೆ. 1934 ರಲ್ಲಿ ಓವಲ್‌ ನಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 451 ರನ್ ಗಳಿಸಿದ್ದು ಹಿಂದಿನ ಅತ್ಯುತ್ತಮವಾಗಿತ್ತು. ರೂಟ್ ಮತ್ತು ಬ್ರೂಕ್ ಪಾಕಿಸ್ತಾನದ ವಿರುದ್ಧ ಯಾವುದೇ ತಂಡವು ಯಾವುದೇ ವಿಕೆಟ್‌ ಗೆ ದಾಖಲಿಸಿದ ಅತ್ಯಧಿಕ ಜೊತೆಯಾಟವನ್ನು ದಾಖಲಿಸಿದರು.

ಒಟ್ಟಾರೆಯಾಗಿ ಟೆಸ್ಟ್‌ ಕ್ರಿಕೆಟ್‌ ನಲ್ಲಿ ಅತಿ ದೊಡ್ಡ ಜೊತೆಯಾಟದ ದಾಖಲೆ ಇನ್ನೂ ಶ್ರೀಲಂಕಾದ ಕುಮಾರ ಸಂಗಕ್ಕರ ಮತ್ತು ಮಹೇಲಾ ಜಯವರ್ಧನೆ ಹೆಸರಿನಲ್ಲಿದೆ. ಅವರು 2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಕೊಲಂಬೊದಲ್ಲಿ 624 ರನ್‌ ಜೊತೆಯಾಟವಾಡಿದ್ದರು.

ಪಾಕಿಸ್ತಾನ ತಂಡವು ಮೊದಲ ಇನ್ನಿಂಗ್ಸ್‌ ನಲ್ಲಿ 556 ರನ್‌ ಗಳಿಸಿದರೆ, ಇಂಗ್ಲೆಂಡ್‌ ತಂಡವು 7 ವಿಕೆಟ್‌ ಗೆ 823 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next