Advertisement
ಶಾಲೆಯಲ್ಲಿ ಮೂರು ವರ್ಷಗಳ ಹಿಂದೆಯೇ ಎಲ್‌ಕೆಜಿ – ಯುಕೆಜಿ ಆರಂಭಗೊಂಡಿದ್ದು, ಕಳೆದ ವರ್ಷ 1ರಿಂದ 10ನೇ ತರಗತಿವರೆಗೆ 498 ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದರು. ಕಳೆದ ವರ್ಷ ಒಂದನೇ ತರಗತಿಗೆ 45 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದು, ಈ ಬಾರಿ ಇಲ್ಲಿಯವರೆಗೆ 49 ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ.
ಮೂಲ ಸೌಕರ್ಯಗಳ ಜತೆಗೆ ಶಾಲೆಗೆ ಸ್ವಂತ ಕೊಳವೆಬಾವಿ ಇದ್ದು, ಅದರಿಂದ ಸುಮಾರು 30 ಮನೆಗಳಿಗೆ ನೀರನ್ನೂ ಕೊಡಲಾಗುತ್ತಿತ್ತು. ಕಳೆದ ಕೆಲವು ದಿನಗಳ ಹಿಂದೆ ಅದರಲ್ಲಿ ನೀರು ಬತ್ತಿ ಹೋಗಿದ್ದು, ಬಳಿಕ ಗ್ರಾಮ ಪಂಚಾಯತ್‌ನಿಂದ ಕೊಳವೆಬಾವಿ ಕೊರೆಯಲಾಗಿದೆ. ಜತೆಗೆ ಶಾಲೆಯ ಕೈ ತೋಟವೂ ಉತ್ತಮವಾಗಿದ್ದು, ಇತರ ಶಾಲೆಗಳಿಗೆ ಮಾದರಿಯಾಗಿ ಬೆಳೆದಿದೆ. ಉತ್ತಮ ಬೆಳವಣಿಗೆ
ಭಾರತೀಯ ಪರಂಪರೆ ಹಾಗೂ ಸಂಸ್ಕೃತಿಯನ್ನು ಉಳಿಸುವ ಕಾರ್ಯವನ್ನು ಸರಕಾರಿ ಶಾಲೆಗಳು ಮಾಡುತ್ತಿದ್ದು, ಹೀಗಾಗಿ ಸರಕಾರಿ ಶಾಲೆಗಳನ್ನು ಉಳಿಸುವ ದೃಷ್ಟಿಯಿಂದ ಆಂಗ್ಲ ಶಿಕ್ಷಣ ಆರಂಭಗೊಂಡಿರುವುದು ಉತ್ತಮ ಬೆಳವಣಿಗೆ. ಇದು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಪೂರಕವಾಗಿದೆ. ಪೋಷಕರು ಖಾಸಗಿ ಶಾಲೆ ಶಿಕ್ಷಣಕ್ಕೆ ಮಾರುಹೋಗದೆ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವ ಪ್ರಯತ್ನ ಮಾಡಬೇಕಿದೆ. – ಎಸ್.ಎಂ. ಅಬೂಬಕ್ಕರ್, ಹೆತ್ತವರು
Related Articles
ಶಾಲೆಯಲ್ಲಿ ಎಲ್ಲ ಮೂಲ ಸೌಕರ್ಯಗಳು ಉತ್ತಮವಾಗಿದ್ದು, ಕೆಲವು ದಿನಗಳ ಹಿಂದೆ ಶಾಲೆಯ ಕೊಳವೆ ಬಾವಿಯಲ್ಲಿ ನೀರು ಬತ್ತಿ ಹೋಗಿತ್ತು. ಬಳಿಕ ಗ್ರಾ.ಪಂ.ನಿಂದ ಕೊಳವೆಬಾವಿ ಕೊರೆಯಲಾಗಿದ್ದು, ಪ್ರಸ್ತುತ ನೀರಿನ ಸಮಸ್ಯೆ ನಿವಾರಣೆಯಾಗಿದೆ. ಇಲ್ಲಿಯವರೆಗೆ 49 ವಿದ್ಯಾರ್ಥಿಗಳು ಶಾಲೆಗೆ ಸೇರ್ಪಡೆಗೊಂಡಿದ್ದಾರೆ.
- ಗೋಪಾಲ್ ಬಿ. ಮುಖ್ಯ ಶಿಕ್ಷಕರು
Advertisement