ಅಮಾತ್ಯ ತಿಮ್ಮರಸ ವೇದಿಕೆಯಲ್ಲಿ ನಡೆದ ಪ್ರಥಮ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಇಂಗ್ಲಿಷ್ ವ್ಯಾಮೋಹಕ್ಕೆ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಕುಂಠಿತಗೊಂಡಿದೆ. ಉನ್ನತ ಹುದ್ದೆ ಗಿಟ್ಟಿಸಿಕೊಳ್ಳಲು ಪ್ರಜ್ಞವಂತ ನಾಗರಿಕರೇ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಕಳುಹಿಸುತ್ತಿರುವುದು
ಕನ್ನಡಕ್ಕೆ ಮಾರಕವಾಗಿದೆ ಎಂದು ವಿಷಾದಿಸಿದರು. ಕನ್ನಡ ಭಾಷೆ ಮತ್ತು ಸಾಹಿತ್ಯ ಉಳುವಿಗಾಗಿ ಸರ್ಕಾರವು ಕನ್ನಡ
ಬಳಕೆಯನ್ನು ಕಡ್ಡಾಯಗೊಳಸಬೇಕು. ಕನ್ನಡ ಮಾಧ್ಯಮದಲ್ಲಿ ಉನ್ನತ ಶಿಕ್ಷಣಕ್ಕೆ ಮುಂದಾಗಿ ಕನ್ನಡಿಗರಿಗೆ ಎಲ್ಲ ಕ್ಷೇತ್ರದಲ್ಲಿ ಉದ್ಯೋಗವಕಾಶಗಳು ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದರು. ಮುಖ್ಯಅತಿಥಿ ಹಂಪಿ ಜಿಪಂ ಸದಸ್ಯ ಪ್ರವೀಣ್ ಸಿಂಗ್, ಮಾಜಿ ಶಾಸಕ ಎಚ್. ಆರ್. ಗವಿಯಪ್ಪ, ಬಿಜೆಪಿ ಮುಖಂಡ ಧರ್ಮೇಂದರ್ ಸಿಂಗ್, ಶೋಯೆಬ್, ಕಸಾಪ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ, ಪ.ಪಂ ಅಧ್ಯಕ್ಷ ಬಿ.ಆರ್. ಮಳಲಿ, ಅಮಾಜಿ ಹೇಮಣ್ಣ, ಸಮಾಜ ಸೇವಕ ಚಂದ್ರಪ್ಪ ಸ್ಮರಣ ಸಂಚಿಕೆ ಮತ್ತು ಸಾಹಿತಿಗಳ ನೂತನ ಗ್ರಂಥಗಳನ್ನು ಬಿಡುಗಡೆ ಮಾಡಿದರು. ಹೂವಿನಹಡಗಲಿ ಕಾಶಿಮಠದ ಹಿರಿಶಾಂತವೀರ ಮಹಾಸ್ವಾಮಿಗಳು ಉದ್ಘಾಟಿಸಿದರು. ನಂತರ ಸಂಜೆ ಗೋಷ್ಠಿಗಳು ಜರುಗಿದವು. ಮೆರವಣಿಗೆ: ಕಸಾಪ ಕಮಲಾಪುರ ಹೋಬಳಿ ಘಟಕದ ವತಿಯಿಂದ ನಡೆದ ಹೋಬಳಿ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕಮಲಾಪುರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಸಮ್ಮೇಳನದ ಸರ್ವಾಧ್ಯಕ್ಷ ಮ.ಬ.ಸೋಮಣ್ಣರ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಮೆರವಣಿಗೆಗೆ ಮಾಜಿ ಶಾಸಕ ಎಚ್. ಆರ್. ಗವಿಯಪ್ಪ, ಮುನೀರ್ ಮೋಟಾರ್ ಶೋಯಬ್ ಚಾಲನೆ ನೀಡಿದರು. ಕಸಾಪ ಕಮಲಾಪುರ ಹೋಬಳಿ ಘಟಕದ ಅಧ್ಯಕ್ಷ ದಯಾನಂದ ಕಿನ್ನಾಳ್, ಪಪಂ ಅಧ್ಯಕ್ಷ ಡಾ|ಬಿ. ಆರ್. ಮಳಲಿ, ಉಪಾಧ್ಯಕ್ಷ ಕೊರವರ ಭೀಮಣ್ಣ ಸೇರಿದಂತೆ ಪಪಂ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನಗರದ ಗಣ್ಯರು ಭಾಗವಹಿಸಿದ್ದರು.
Advertisement