Advertisement

ಏ.8ರಿಂದ ಭಾರತ-ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್‌ ಸರಣಿ

10:06 AM Dec 28, 2017 | Team Udayavani |

ಮುಂಬೈ: ಅತಿಥೇಯ ಭಾರತ, ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಮುಂಬೈನಲ್ಲಿ ನಡೆಯಲಿರುವ ಮಹಿಳಾ ಟಿ20 ತ್ರಿಕೋನ ಸರಣಿಯ ಬಳಿಕ ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್‌ ತಂಡ ಭಾರತದ ವಿರುದ್ಧ ನಡೆಯುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ತ್ರಿಕೋನ ಸರಣಿಯ ಫೈನಲ್‌ ಪಂದ್ಯದ ಬಳಿಕ ಎ. 8ರಿಂದ ಏಕದಿನ ಸರಣಿ ಆರಂಭಗೊಳ್ಳಲಿದೆ. ಜುಲೈನಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಪರಾಭವಗೊಂಡ ಬಳಿಕ ಭಾರತದ ಮಹಿಳಾ ಕ್ರಿಕೆಟ್‌ ತಂಡ
ಇಂಗ್ಲೆಂಡ್‌ನೆದುರು ಯಾವುದೇ ಏಕದಿನ ಪಂದ್ಯದಲ್ಲಿ ಪಾಲ್ಗೊಂಡಿಲ್ಲ.

Advertisement

ಈ ಬಾರಿ ಭಾರತದ ಮಹಿಳಾ ತಂಡ ಇಂಗ್ಲೆಂಡ್‌ ತಂಡವನ್ನು ಎದುರುಗೊಳ್ಳಲಿದೆಯಾದರೂ ಅದಕ್ಕೂ ಮೊದಲು ತ್ರಿಕೋನ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾದ ಸವಾಲನ್ನು ಭಾರತದ ಸ್ವೀಕರಿಸಲಿದೆ. ಭಾರತ ಮತ್ತು ಇಂಗ್ಲೆಂಡ್‌ ವಿರುದ್ಧದ ಮಹಿಳಾ ಏಕದಿನ ಕ್ರಿಕೆಟ್‌ನ ವೇಳಾಪಟ್ಟಿ ಪ್ರಕಟಗೊಂಡಿದ್ದು, ಎ. 8ರಂದು ಮೊದಲ ಏಕದಿನ, ಎ. 11ರಂದು ಎರಡನೇ ಮತ್ತು ಎ. 14ರಂದು ಮೂರನೇ ಏಕದಿನ ಪಂದ್ಯ ನಡೆಯಲಿವೆ. ಆದರೆ ಪಂದ್ಯ ನಡೆಯುವುದು ಎಲ್ಲಿ ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next