Advertisement

ಪಾಕಿಸ್ಥಾನಕ್ಕೆ ತವರಿನಲ್ಲೇ ಸರಣಿ ಸೋಲು: ಟೆಸ್ಟ್ ಚಾಂಪಿಯನ್ ಶಿಪ್ ನಿಂದ ಹೊರಬಿದ್ದ ಬಾಬರ್ ಪಡೆ

03:12 PM Dec 12, 2022 | Team Udayavani |

ಮುಲ್ತಾನ್: ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲೂ ಸೋಲನುಭವಿಸಿದ ಪಾಕಿಸ್ಥಾನವು ತವರಿನಲ್ಲಿ ಮತ್ತೊಂದು ಸರಣಿ ಕಳೆದುಕೊಂಡಿದೆ. ಅಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲೂ ಪಾಕಿಸ್ಥಾನದ ಹೋರಾಟ ಅಂತ್ಯವಾಗಿದೆ.

Advertisement

ಮೊದಲ ಟೆಸ್ಟ್ ಪಂದ್ಯವನ್ನು ಕಳೆದುಕೊಂಡಿದ್ದ ಪಾಕಿಸ್ಥಾನವು ಎರಡನೇ ಪಂದ್ಯದಲ್ಲೂ 26 ರನ್ ಅಂತರದ ಸೋಲನುಭವಿಸಿದೆ.

ಮುಲ್ತಾನ್ ಪಂದ್ಯದ ಮೊದಲ ಇನ್ನಿಂಗ್ ನಲ್ಲಿ ಇಂಗ್ಲೆಂಡ್ 281 ರನ್ ಗಳಿಸಿದ್ದರೆ, ಪಾಕಿಸ್ಥಾನ 202 ರನ್ ಮಾತ್ರ ಗಳಿಸಿತ್ತು. ಎರಡನೇ ಇನ್ನಿಂಗ್ ನಲ್ಲಿ ಇಂಗ್ಲೆಂಡ್ 275 ರನ್ ಗಳಿಸಿದರೆ, ಗೆಲುವಿಗೆ 355 ರನ್ ಗುರಿ ಪಡೆದ ಪಾಕಿಸ್ಥಾನ 328 ರನ್ ಗಳಿಗೆ ಆಲೌಟಾಯಿತು.

ನಾಲ್ಕು ವಿಕೆಟ್ ಗೆ 198 ರನ್ ಗಳಿಸಿದ್ದಲ್ಲಿಂದ ಇಂದಿನ ದಿನದಾಟ ಆರಂಭಿಸಿದ ಪಾಕ್, ಸೌದ್ ಶಕೀಲ್ ಮತ್ತು ನವಾಜ್ ಬೆಂಬಲ ನೀಡಿದರು. ಶಕೀಲ್ 94 ರನ್ ಮಾಡಿದರೆ, ನವಾಜ್ 40 ರನ್ ಗಳಿಸಿದರು. ಅಘಾ ಸಲ್ಮಾನ್ ಕೊನೆಯಲ್ಲಿ ಅಜೇಯ 20 ರನ್ ಗಳಿಸಿದರು.

ಎರಡನೇ ಹೊಸ ಚೆಂಡಿನಿಂದ ದಾಳಿ ನಡೆಸಿದ ಮಾರ್ಕ್ ವುಡ್ ಇಂಗ್ಲೆಂಡ್ ಗೆ ವರವಾದರು. ಮಾರ್ಕ್ ವುಡ್ ನಾಲ್ಕು ವಿಕೆಟ್ ಪಡೆದು ಮಿಂಚಿದರೆ, ರಾಬಿನ್ಸನ್ ಮತ್ತು ಆ್ಯಂಡರ್ಸನ್ ತಲಾ ಎರಡು ವಿಕೆಟ್ ಪಡೆದರು.

Advertisement

ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ಇಂಗ್ಲೆಂಡ್ ತನ್ನ ಕೊನೆಯ 9 ಟೆಸ್ಟ್‌ಗಳಲ್ಲಿ 8 ಅನ್ನು ಗೆದ್ದಿದೆ. ಪಾಕಿಸ್ಥಾನ ಸರಣಿಯ ಮೂರನೇ ಟೆಸ್ಟ್ ಪಂದ್ಯ ಕರಾಚಿಯಲ್ಲಿ ನಡೆಯಲಿದೆ.

ಫೈನಲ್ ರೇಸ್ ನಿಂದ ಹೊರಕ್ಕೆ

ಈ ಗೆಲುವಿನೊಂದಿಗೆ ಇಂಗ್ಲೆಂಡ್ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲೀಗ 44.44 ಪರ್ಸೆಂಟೈಲ್‌ ನೊಂದಿಗೆ 5 ನೇ ಸ್ಥಾನದಲ್ಲಿದೆ. ಆದರೆ ಪಾಕಿಸ್ತಾನ 42.42 ಪರ್ಸೆಂಟೈಲ್‌ ನೊಂದಿಗೆ 6 ನೇ ಸ್ಥಾನದಲ್ಲಿದೆ.

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ರೇಸ್ ನಿಂದ ಪಾಕಿಸ್ಥಾನ ಬಹುತೇಕ ಹೊರಬಿದ್ದಿದೆ. ಫೈನಲ್‌ನಲ್ಲಿ ಸ್ಥಾನ ಪಡೆಯಲು ಪಾಕಿಸ್ತಾನವು ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಸೈಕಲ್‌ ನಲ್ಲಿ ತನ್ನ ಉಳಿದ ಐದು ಟೆಸ್ಟ್ ಪಂದ್ಯಗಳಲ್ಲಿ ನಾಲ್ಕನ್ನು ಗೆಲ್ಲಬೇಕಾಗಿತ್ತು. ಆದರೆ ಈಗಾಗಲೇ ಎರಡು ಪಂದ್ಯ ಸೋತಿದ್ದು, ಇನ್ನು ಇಂಗ್ಲೆಂಡ್ ವಿರುದ್ಧ ಒಂದು ಪಂದ್ಯ, ನ್ಯೂಜಿಲ್ಯಾಂಡ್ ವಿರುದ್ಧ ಎರಡು ಪಂದ್ಯವಾಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next