Advertisement

ಬೆನ್ ಸ್ಟೋಕ್ಸ್ ಸಾಹಸ: ದ್ವಿತೀಯ ಟೆಸ್ಟ್ ಗೆದ್ದ ಇಂಗ್ಲೆಂಡ್, ಸರಣಿ ಸಮಬಲ

12:24 PM Jul 21, 2020 | keerthan |

ಮ್ಯಾಂಚೆಸ್ಟರ್: ದ್ವಿತೀಯ ಇನ್ನಿಂಗ್ಸ್ ನಲ್ಲೂ ಬೆನ್ ಸ್ಟೋಕ್ಸ್ ಭರ್ಜರಿ ಬ್ಯಾಟಿಂಗ್ ಸಾಹಸ, ವೇಗಿಗಲ ನೆರವಿನಿಂದ ಇಂಗ್ಲೆಂಡ್ ದ್ವಿತೀಯ ಟೆಸ್ಟ್ ಪಂದ್ಯವನ್ನು 113 ರನ್ ಗಳ ಅಂತರದಿಂದ ಗೆದ್ದುಕೊಂಡಿದೆ. ಇದರೊಂದಿಗೆ ಸರಣಿ 1-1 ಅಂತರದಿಂದ ಸಮಬಲಗೊಂಡಿದೆ.

Advertisement

ಉತ್ತಮ ಮುನ್ನಡೆಯೊಂದಿಗೆ ಐದನೇ ದಿನ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಗೆ ಸ್ಟೋಕ್ಸ್ ಆಧಾರವಾದರು. ಬೌಂಡರಿ ಸಿಕ್ಸರ್ ಗಳ ಆಟ ಆರಂಭಿಸಿದ ಸ್ಟೋಕ್ಸ್ ಕೇವಲ 36 ಎಸೆತದಲ್ಲಿ ಅರ್ಧಶತಕ ಬಾರಿಸಿದರು.

ಕೇವಲ 19 ಓವರ್ ಗಳಲ್ಲಿ 129 ರನ್ ಗಳಿಸಿದ ಆಂಗ್ಲರು ಡಿಕ್ಲೇರ್ ಘೋಷಿಸಿದರು. ಗೆಲುವಿಗೆ 312 ರನ್ ಗುರಿ ಪಡೆದ ವಿಂಡೀಸ್ ಡ್ರಾ ಸಾಧಿಸಲು 85 ಓವರ್ ಆಡಬೇಕಿತ್ತು. ಆದರೆ ಬ್ರಾಡ್ ದಾಳಿಗೆ ಬೆದರಿದ ವಿಂಡೀಸ್ 37 ರನ್ ಆಗುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿತು. ಐದನೇ ವಿಕೆಟ್ ಗೆ ಜೊತೆಯಾದ ಶೆಮ್ರಾಹ್ ಬ್ರೂಕ್ಸ್ ಮತ್ತು ಜೆಮೈನ್ ಬ್ಲಾಕ್ ವುಡ್ ನೂರು ರನ್ ಜೊತೆಯಾಟ ನಡೆಸಿದರು. ಬ್ರೂಕ್ಸ್ 62 ರನ್ ಗಳಿಸಿದರೆ ಬ್ಲಾಕ್ ವುಡ್ 55 ರನ್ ಗಳಿಸಿದರು. ಆದರೆ ಇವರ ವಿಕೆಟ್ ಪತನದ ನಂತರ ವಿಂಡೀಸ್ ಸತತ ವಿಕೆಟ್ ಕಳೆದುಕೊಂಡಿತು.

ಅಂತಿಮವಾಗಿ ವಿಂಡೀಸ್ 198 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಇಂಗ್ಲೆಂಡ್ 113 ರನ್ ಗಳ ಗೆಲುವು ಸಾಧಿಸಿದೆ. ಬ್ರಾಡ್ ಮೂರು ವಿಕೆಟ್ ಪಡೆದರೆ, ವೋಕ್ಸ್, ಸ್ಟೋಕ್ಸ್ ಮತ್ತು ಬೆಸ್ ಎರಡು ವಿಕೆಟ್ ಪಡೆದು ಮಿಂಚಿದರು. ಸ್ಟೋಕ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next