Advertisement

ಮ್ಯಾಂಚೆಸ್ಟರ್‌ ಟೆಸ್ಟ್‌ ಪಂದ್ಯ: ಇನ್ನಿಂಗ್ಸ್‌ ಅಂತರದಲ್ಲೇ ಇಂಗ್ಲೆಂಡ್‌ ಸೇಡು

05:17 PM Aug 28, 2022 | Team Udayavani |

ಮ್ಯಾಂಚೆಸ್ಟರ್‌: ಪ್ರವಾಸಿ ದಕ್ಷಿಣ ಆಫ್ರಿಕಾ ಎದುರಿನ ದ್ವಿತೀಯ ಟೆಸ್ಟ್‌ ಪಂದ್ಯವನ್ನು ಇನ್ನಿಂಗ್ಸ್‌ ಅಂತರದಲ್ಲಿ ಗೆಲ್ಲುವ ಮೂಲಕ ಇಂಗ್ಲೆಂಡ್‌ ಸೇಡು ತೀರಿಕೊಂಡಿದೆ. ಕೇವಲ 3 ದಿನಗಳಲ್ಲಿ ಮುಗಿದ ಈ ಪಂದ್ಯದಲ್ಲಿ ಬೆನ್‌ ಸ್ಟೋಕ್ಸ್‌ ಪಡೆಯ ಗೆಲುವಿನ ಅಂತರ ಇನ್ನಿಂಗ್ಸ್‌ ಹಾಗೂ 85 ರನ್‌.

Advertisement

ಲಾರ್ಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯವನ್ನು ದಕ್ಷಿಣ ಆಫ್ರಿಕಾ ಇಷ್ಟೇ ಅವಧಿಯಲ್ಲಿ, ಇನ್ನಿಂಗ್ಸ್‌ ಹಾಗೂ 12 ರನ್‌ ಅಂತರದಿಂದ ಗೆದ್ದಿತ್ತು. ಸರಣಿ ಈಗ 1-1 ಸಮಬಲದಲ್ಲಿ ನೆಲೆಸಿದೆ.

ಅಂತಿಮ ಟೆಸ್ಟ್‌ ಸೆ. 8ರಂದು ಓವಲ್‌ನಲ್ಲಿ ಆರಂಭವಾಗಲಿದೆ. ದಕ್ಷಿಣ ಆಫ್ರಿಕಾದ 151 ರನ್ನಿಗೆ ಜವಾಬಾಗಿ ಇಂಗ್ಲೆಂಡ್‌ 9 ವಿಕೆಟಿಗೆ 415 ರನ್‌ ಪೇರಿಸಿತು. 264 ರನ್‌ ಹಿನ್ನಡೆಗೆ ಸಿಲುಕಿದ ದಕ್ಷಿಣ ಆಫ್ರಿಕಾ ದ್ವಿತೀಯ ಇನ್ನಿಂಗ್ಸ್‌ನಲ್ಲೂ ತೀವ್ರ ಬ್ಯಾಟಿಂಗ್‌ ಕುಸಿತ ಅನುಭವಿಸಿ 179 ಕ್ಕೆ ಸರ್ವಪತನ ಕಂಡಿತು. ರಾಬಿನ್ಸನ್‌ 4, ಆ್ಯಂಡರ್ಸನ್‌ 3 ವಿಕೆಟ್‌ ಕೆಡವಿದರು.

Advertisement

Udayavani is now on Telegram. Click here to join our channel and stay updated with the latest news.

Next