Advertisement

ಇಂಗ್ಲೆಂಡ್ ಎದುರು ಸೋತ ಭಾರತ ವನಿತಾ ತಂಡ: ಒದ್ದೆ ಮೈದಾನ ಎಂದ ಹರ್ಮನ್ ಪ್ರೀತ್

09:24 AM Sep 11, 2022 | Team Udayavani |

ಚೆಸ್ಟರ್ ಲಿ ಸ್ಟ್ರೀಟ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ವನಿತಾ ತಂಡವು ಮೊದಲ ಟಿ20 ಪಂದ್ಯದಲ್ಲಿ ಮುಗ್ಗರಿಸಿದೆ. ಹರ್ಮನ್ ಪಡೆ ಸರಣಿಯ ಆರಂಭಿಕ ಪಂದ್ಯದಲ್ಲಿ ಒಂಬತ್ತು ವಿಕೆಟ್ ಗಳ ಹೀನಾಯ ಸೋಲನುಭವಿಸಿತು.

Advertisement

ಇಲ್ಲಿನ ರಿವರ್ ಸೈಡ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡಸಿದ ಭಾರತ 20 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 132 ರನ್ ಗಳಿಸಿದರೆ, ಇಂಗ್ಲೆಂಡ್ ತಂಡವು ಒಂದು ವಿಕೆಟ್ ನಷ್ಟಕ್ಕೆ ಕೇವಲ 13 ಓವರ್ ಗಳಲ್ಲಿ ಗುರಿ ತಲುಪಿತು.

ಭಾರತದ ಪರ 29 ರನ್ ಗಳಿಸಿದ ದೀಪ್ತಿ ಶರ್ಮಾ ಅವರದ್ದೇ ಹೆಚ್ಚಿನ ಗಳಿಕೆ. ಉಳಿದಂತೆ ಸ್ಮೃತಿ ಮಂಧನಾ 23 ರನ್,  ನಾಯಕಿ ಹರ್ಮನ್ 20 ರನ್ ಗಳಿಸಿದರು. ಇಂಗ್ಲೆಂಡ್ ಪರ ಸಾರಾ ಗ್ಲೆನ್ ನಾಲ್ಕು ವಿಕೆಟ್ ಕಿತ್ತು ಮಿಂಚಿದರು.

ಇದನ್ನೂ ಓದಿ:ಕರ್ತವ್ಯ ನಿರ್ವಹಣೆಯಲ್ಲಿ ಲೋಪ : ಪೊಲೀಸ್ ಸಿಬ್ಬಂದಿಗಳನ್ನೇ ಜೈಲಿಗೆ ಹಾಕಿದ ಪೊಲೀಸ್ ಅಧಿಕಾರಿ

ಸುಲಭ ಗುರಿ ಬೆನ್ನತ್ತಿದ ಇಂಗ್ಲೆಂಡ್ ಗೆ ಸೋಫಿಯಾ ಡಂಕ್ಲಿ ಅದ್ಭುತ ಆರಂಭ ಒದಗಿಸಿದರು. ಡಂಕ್ಲಿ 61 ರನ್ ಗಳಿಸಿದರೆ, ಡೇನಿಯಲ್ ವ್ಯಾಟ್ 24 ರನ್, ಏಲಿಸ್ ಕ್ಯಾಪ್ಸೆ ಅಜೇಯ 32 ರನ್ ಗಳಿಸಿದರು.

Advertisement

ಒದ್ದೆ ಅಂಗಳ: ಪಂದ್ಯದ ಬಳಿಕ ಮಾತನಾಡಿದ ಭಾರತೀಯ ನಾಯಕಿ ಹರ್ಮನ್ ಪ್ರೀತ್ ಕೌರ್ ಮೈದಾನ ಒಣಗಿರಲಿಲ್ಲ ಎಂದು ದೂರಿದರು. “ನಾವು ಬಲವಂತವಾಗಿ ಆಡಿದ್ದೇವೆ ಎಂದು ನನಗೆ ಅನಿಸುತ್ತಿದೆ. ಪರಿಸ್ಥಿತಿ ಸೂಕ್ತವಾಗಿರಲಿಲ್ಲ. ನೆಲ ತುಂಬಾ ತೇವವಾಗಿತ್ತು. ಇದರಿಂದ ಗಾಯಗೊಳ್ಳುವ ಸಾಧ್ಯತೆಗಳು ಹೆಚ್ಚು. ನಮ್ಮ ಆಟಗಾರರೊಬ್ಬರು ಗಾಯಗೊಂಡಿದ್ದರಿಂದ ನಮ್ಮಲ್ಲಿ ಒಬ್ಬ ಬೌಲರ್ ಕಡಿಮೆಯಾದರು” ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next