Advertisement

16 ವರ್ಷಗಳ ಬಳಿಕ ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಪಾಕ್‌ ಪ್ರವಾಸ

11:37 AM Nov 19, 2020 | keerthan |

ಲಂಡನ್‌: ಇಂಗ್ಲೆಂಡ್‌ ಕ್ರಿಕೆಟ್‌ ತಂಡ ಬರೋಬ್ಬರಿ 16 ವರ್ಷಗಳ ಬಳಿಕ ಪಾಕಿಸ್ಥಾನಕ್ಕೆ ಪ್ರವಾಸ ತೆರಳಲು ಸಜ್ಜಾಗಿದೆ. ಆದರೆ ಈ ಪ್ರವಾಸಕ್ಕಿನ್ನೂ ಒಂದು ವರ್ಷವಿದೆ. ಮುಂದಿನ ವರ್ಷದ ಅಕ್ಟೋಬರ್‌ನಲ್ಲಿ ಇಂಗ್ಲೆಂಡ್‌ ತಂಡ ಪಾಕಿಸ್ಥಾನಕ್ಕೆ ತೆರಳಿ 2 ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದೆ.

Advertisement

ಕರಾಚಿಯಲ್ಲಿ ಅ. 14 ಮತ್ತು 15ರಂದು ಈ ಪಂದ್ಯಗಳು ನಡೆಯಲಿವೆ. ಬಳಿಕ ಎರಡೂ ತಂಡಗಳು ಐಸಿಸಿ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಲಿವೆ. ಇಂಗ್ಲೆಂಡ್‌ ತಂಡ 2005ರಲ್ಲಿ ಕೊನೆಯ ಸಲ ಪಾಕಿಸ್ಥಾನಕ್ಕೆ ತೆರಳಿತ್ತು.

ಇಂಗ್ಲೆಂಡ್‌ ತಂಡದ ಪಾಕಿಸ್ಥಾನ ಪ್ರವಾಸವನ್ನು ಇಸಿಬಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಾಮ್‌ ಹ್ಯಾರಿಸನ್‌ ಪ್ರಕಟನೆಯೊಂದರಲ್ಲಿ ತಿಳಿಸಿದ್ದಾರೆ. ಪಿಸಿಬಿಯೊಂದಿಗೆ ನಾವಿನ್ನು ನಿರಂತರ ಸಂಪರ್ಕದಲ್ಲಿರಲಿದ್ದು, ಭದ್ರತೆ ಮತ್ತು ಸುರಕ್ಷತೆ ಬಗ್ಗೆ ಹೆಚ್ಚಿನ ನಿಗಾ ವಹಿಸಲಿದ್ದೇವೆ ಎಂದರು.

ಮಂಗಳವಾರ ಮುಗಿದ “ಪಾಕಿಸ್ಥಾನ್‌ ಸೂಪರ್‌ ಲೀಗ್‌’ ಪಂದ್ಯಾವಳಿಯಲ್ಲಿ ಇಂಗ್ಲೆಂಡಿನ ಆಟಗಾರರಾದ ಅಲೆಕ್ಸ್‌ ಹೇಲ್ಸ್‌ ಮತ್ತು ಸಮಿತ್‌ ಪಟೇಲ್‌ ಆಡಿದ್ದರೆಂಬುದು ಉಲ್ಲೇಖನೀಯ.

Advertisement

Udayavani is now on Telegram. Click here to join our channel and stay updated with the latest news.

Next