Advertisement

She said YES..! ಆ್ಯಶಸ್ ಪಂದ್ಯದಲ್ಲಿ ಹೀಗೊಂದು ಪ್ರೇಮ ಪ್ರಸಂಗ: ವಿಡಿಯೋ

02:27 PM Dec 10, 2021 | Team Udayavani |

ಬ್ರಿಸ್ಬೇನ್: ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಆ್ಯಶಸ್ ಸರಣಿ ಆರಂಭವಾಗಿದೆ. ಮೊದಲ ಪಂದ್ಯದ ಮೂರನೇ ದಿನದಾಟದಲ್ಲಿ ಮೈದಾನದಲ್ಲಿ ಉಭಯ ತಂಡದ ಅಟಗಾರರು ಸೆಣಸಾಡುತ್ತಿದ್ದರೆ, ಇತ್ತ ಪ್ರೇಕ್ಷಕರ ಗ್ಯಾಲರಿಯಲ್ಲಿ ಇಂಗ್ಲೆಂಡ್ ಅಭಿಮಾನಿಯೊಬ್ಬ ಆಸೀಸ್ ತಂಡದ ಅಭಿಮಾನಿಯೊಬ್ಬರಿಗೆ ಪ್ರೇಮ ನಿವೇದನೆ ಮಾಡಿದ ಪ್ರಸಂಗ ನಡೆದಿದೆ.

Advertisement

ಇಂಗ್ಲೆಂಡ್ ನ ರಾಬ್ ತನ್ನ ಆಸ್ಟ್ರೇಲಿಯಾದ ಗೆಳತಿ ನ್ಯಾಟ್‌ ಗೆ ಪ್ರಪೋಸ್ ಮಾಡಿದ್ದಾರೆ. ಆಸ್ಟ್ರೇಲಿಯಾದಲ್ಲಿ 2017-18ರ ಆಶಸ್‌ನಲ್ಲಿ ಮೊದಲ ಬಾರಿಗೆ ನ್ಯಾಟ್ ಅನ್ನು ನೋಡಿದ್ದ ರಾಬ್ ಇಂದು ಗಾಬಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸಾವಿರಾರು ಜನರೆದುರು ಗೆಳತಿಗೆ ಪ್ರೇಮ ನಿವೇದನೆ ಮಾಡಿ ಕೈಬೆರಳಿಗೆ ಉಂಗುರ ತೊಡಿಸಿದರು.

ಇದನ್ನೂ ಓದಿ:ಹಳೆಯ ಹಾಡಿಗೆ ಜೆಎನ್‌ಯು ಭದ್ರತಾ ಸಿಬ್ಬಂದಿ ಭರ್ಜರಿ ಡ್ಯಾನ್ಸ್ : ವೈರಲ್ ವಿಡಿಯೋ

“ನಾವಿಬ್ಬರೂ ಕ್ರಿಕೆಟ್ ನಿಂದಲೇ ಸ್ನೇಹಿತರಾದವರು. ನಾಲ್ಕು ವರ್ಷಗಳ ಹಿಂದೆ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆಕೆಯನ್ನು ನೋಡಿದ್ದೆ” ಎಂದು ರಾಬ್ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next