Advertisement

INDvsENG ಸರಣಿಯ ಮಧ್ಯೆಯೇ ತವರಿಗೆ ಮರಳಿದ ಇಂಗ್ಲೆಂಡ್ ಸ್ಪಿನ್ನರ್ ರೆಹಾನ್ ಅಹ್ಮದ್

01:22 PM Feb 23, 2024 | Team Udayavani |

ರಾಂಚಿ: ಇಂಗ್ಲೆಂಡ್ ತಂಡದ ಯುವ ಲೆಗ್ ಸ್ಪಿನ್ನರ್ ರೆಹಾನ್ ಅಹ್ಮದ್ ಅವರ ಭಾರತ ಪ್ರವಾಸವು ಮಧ್ಯದಲ್ಲೇ ಅಂತ್ಯಗೊಂಡಿದ್ದು, ಅವರು ವೈಯಕ್ತಿಕ ಕಾರಣಗಳಿಂದ ತವರಿಗೆ ಮರಳಲಿದ್ದಾರೆ. ಕೊನೆಯ ಪಂದ್ಯಕ್ಕೆ ಅವರ ಬದಲಿ ಆಟಗಾರನನ್ನು ಹೆಸರಿಸದಿರಲು ಇಂಗ್ಲೆಂಡ್ ನಿರ್ಧರಿಸಿದೆ.

Advertisement

19 ವರ್ಷದ ಯುವ ಬೌಲರ್ ಮೊದಲ ಮೂರು ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. 11 ವಿಕೆಟ್ ಕಬಳಿಸಿರುವ ರೆಹಾನ್ ಅವರು ಹಾರ್ಟ್ಲಿ ಬಳಿಕ ಹೆಚ್ಚು ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್ ಆಗಿದ್ದಾರೆ.

ರಾಂಚಿ ಟೆಸ್ಟ್‌ ನ ಮುನ್ನಾದಿನದಂದು ಅಹ್ಮದ್ ಅಭ್ಯಾಸ ನಡೆಸಿದ್ದಾರೆ. ಆದರೆ ಬಳಿಕ ತವರಿಗೆ ಹಿಂತಿರುಗುವ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು. ರಾಂಚಿ ಪಂದ್ಯದಲ್ಲಿ ಶೋಯೆಬ್ ಬಶೀರ್ ಆಡುತ್ತಿದ್ದಾರೆ.

ರಾಂಚಿ ಪಂದ್ಯಕ್ಕೆ ಇಂಗ್ಲೆಂಡ್ ತಂಡ: ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಆಲಿ ಪೋಪ್, ಜೋ ರೂಟ್, ಜಾನಿ ಬೇರ್ಸ್ಟೋವ್, ಬೆನ್ ಸ್ಟೋಕ್ಸ್ (ನಾ), ಬೆನ್ ಫೋಕ್ಸ್ (ವಿ.ಕೀ), ಟಾಮ್ ಹಾರ್ಟ್ಲಿ, ಆಲಿ ರಾಬಿನ್ಸನ್, ಶೋಯೆಬ್ ಬಶೀರ್, ಜೇಮ್ಸ್ ಆಂಡರ್ಸನ್

Advertisement

Udayavani is now on Telegram. Click here to join our channel and stay updated with the latest news.

Next