Advertisement

3ನೇ ಟೆಸ್ಟ್‌: ಇಂದು ಪುನರಾರಂಭ ಇಂಗ್ಲೆಂಡ್‌- ದಕ್ಷಿಣ ಆಫ್ರಿಕಾ ಪಂದ್ಯ 

12:01 AM Sep 10, 2022 | Team Udayavani |

ಲಂಡನ್‌: ರಾಣಿ ಎರಡನೇ ಎಲಿಜಬೆತ್‌ ಅವರ ನಿಧನದಿಂದಾಗಿ ಶುಕ್ರವಾರ ಸ್ಥಗಿತಗೊಂಡಿದ್ದ ಇಂಗ್ಲೆಂಡ್‌- ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಟೆಸ್ಟ್‌ ಪಂದ್ಯ ಶನಿವಾರ ಪುನರಾರಂಭಗೊಳ್ಳಲಿದೆ. ಆದರೆ ಈ ಟೆಸ್ಟ್‌ ಮೂರೇ ದಿನಕ್ಕೆ ಸೀಮಿತಗೊಳ್ಳಲಿದೆ.

Advertisement

ಗುರುವಾರದ ಆಟ ಟಾಸ್‌ಗಷ್ಟೇ ಸೀಮಿತವಾಗಿತ್ತು. ಬಳಿಕ ಸುರಿದ ಭಾರೀ ಮಳೆಯಿಂದ ಒಂದೂ ಎಸೆತ ಸಾಧ್ಯವಾಗಲಿಲ್ಲ. ಅಗಲಿದ ಎಲಿಜಬೆತ್‌ ಗೌರವಾರ್ಥ ಶುಕ್ರವಾರದ ಆಟ ನಡೆಯಲಿಲ್ಲ.

ಶನಿವಾರದ ಆಟಕ್ಕೂ ಮುನ್ನ ಒಂದು ನಿಮಿಷ ಮೌನ ಪ್ರಾರ್ಥನೆ ಮೂಲಕ ರಾಣಿ ಎಲಿಜಬೆತ್‌ಗೆ ಗೌರವ ಸಲ್ಲಿಸಲಾಗುವುದು, ಆಟಗಾರರೆಲ್ಲ ಕಪ್ಪು ಪಟ್ಟಿ ಧರಿಸುವರು.

ವನಿತಾ ಕ್ರಿಕೆಟ್‌
ಪ್ರವಾಸಿ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಿನ ಮೊದಲ ಟಿ20 ಪಂದ್ಯ ಕೂಡ ಶನಿವಾರ ನಡೆಯಲಿದೆ. ಭಾರತೀಯ ಕಾಲಮಾನದಂತೆ ಇದು ರಾತ್ರಿ 11.30ಕ್ಕೆ ಆರಂಭಗೊಳ್ಳುತ್ತದೆ. ಉಳಿದೆರಡು ಪಂದ್ಯಗಳು ಸೆ. 13 ಮತ್ತು ಸೆ. 15ರಂದು ಏರ್ಪಡಲಿವೆ.

Advertisement

Udayavani is now on Telegram. Click here to join our channel and stay updated with the latest news.

Next