Advertisement

England-New Zealand ಏಕದಿನ ಸರಣಿ ಇಂದಿನಿಂದ ಆರಂಭ

11:30 PM Sep 07, 2023 | Team Udayavani |

ಕಾರ್ಡಿಫ್: ಟಿ20 ಸರಣಿ ಬಳಿಕ ಇಂಗ್ಲೆಂಡ್‌ ಮತ್ತು ನ್ಯೂಜಿಲ್ಯಾಂಡ್‌ ತಂಡಗಳು ನಾಲ್ಕು ಪಂದ್ಯಗಳ ಏಕದಿನ ಸರಣಿಗಾಗಿ ಪರಸ್ಪರ ಹೋರಾಡಲಿವೆ. ಸರಣಿಯ ಮೊದಲ ಪಂದ್ಯ ಕಾರ್ಡಿಫ್ನಲ್ಲಿ ಶುಕ್ರವಾರ ನಡೆಯಲಿದೆ. ಟಿ20 ಸರಣಿ ಸಮಬಲದಲ್ಲಿ ಅಂತ್ಯಗೊಂಡಿದ್ದು ಏಕದಿನ ಸರಣಿಯಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆಂದು ಕಾದು ನೋಡಬೇಕಾಗಿದೆ.

Advertisement

ಈ ಏಕದಿನ ಸರಣಿಯು ಮುಂಬರುವ ಏಕದಿನ ವಿಶ್ವಕಪ್‌ಗೆ ಸಿದ್ಧತೆ ಮಾಡಿಕೊಳ್ಳಲು ಎರಡೂ ತಂಡಗಳಿಗೆ ಅತ್ಯಂತ ಪ್ರಮುಖವಾಗಿದೆ. ಮೂರು ವರ್ಷಗಳ ಹಿಂದೆ ನಡೆದ ಎಂದಿಗೂ ಮರೆಯಲಾಗದ ವಿಶ್ವಕಪ್‌ ಫೈನಲ್‌ ಹೋರಾಟದ ಬಳಿಕ ಇಂಗ್ಲೆಂಡ್‌ ಮತ್ತು ನ್ಯೂಜಿಲ್ಯಾಂಡ್‌ ಏಕದಿನ ಸರಣಿಯಲ್ಲಿ ಮೊದಲ ಬಾರಿ ಕಾಣಿಸಿಕೊಳ್ಳುತ್ತಿದೆ.

ನ್ಯೂಜಿಲ್ಯಾಂಡ್‌ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯ ಇನ್ನುಳಿದ ಪಂದ್ಯಗಳು ಅನುಕ್ರಮವಾಗಿ ಸೆ. 10, 13 ಮತ್ತು ಸೆ. 15ರಂದು ನಡೆಯಲಿದೆ. ಈ ತಿಂಗಳ ಅಂತ್ಯದಲ್ಲಿ ಇಂಗ್ಲೆಂಡ್‌ ತಂಡವು ಐರ್ಲೆಂಡ್‌ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next