ಲಂಡನ್: ಕೋವಿಡ್ ಸೋಂಕಿನ ಭೀಕರ ಪರಿಣಾಮಗಳನ್ನು ಎದುರಿಸಿದ ದೇಶಗಳಲ್ಲಿ ಒಂದಾದ ಇಂಗ್ಲೆಂಡ್ ನಲ್ಲಿ ಕಡ್ಡಾಯ ಫೇಸ್ ಮಾಸ್ಕ್ ಸೇರಿದಂತೆ ಹೆಚ್ಚಿನ ಕೋವಿಡ್ ನಿರ್ಬಂಧಗಳನ್ನು ತೆಗೆದು ಹಾಕಲಾಗಿದೆ. ಕೋವಿಡ್ ಲಸಿಕೆ ಪರಿಣಾಮ ಗಂಭೀರ ಅನಾರೋಗ್ಯವನ್ನು ಕಡಿಮೆ ಮಾಡಿದೆ ಎಂದು ಬ್ರಿಟನ್ ಸರ್ಕಾರ ಹೇಳಿದೆ.
ಗುರುವಾರದಿಂದ, ಇಂಗ್ಲೆಂಡ್‌ನಲ್ಲಿ ಎಲ್ಲಿಯೂ ಕಾನೂನಿನ ಪ್ರಕಾರ ಮಾಸ್ಕ್ ಧರಿಸುವುದು ಅಗತ್ಯವಿಲ್ಲ. ಅಲ್ಲದೆ ನೈಟ್‌ಕ್ಲಬ್‌ಗಳು ಮತ್ತು ಇತರ ದೊಡ್ಡ ಸ್ಥಳಗಳಿಗೆ ಪ್ರವೇಶಕ್ಕಾಗಿ ಕೋವಿಡ್ ಪಾಸ್ ಗಳ ಕಡ್ಡಾಯವನ್ನೂ ರದ್ದುಗೊಳಿಸಲಾಗಿದೆ.
ಜನರು ಮನೆಯಿಂದಲೇ ಕೆಲಸ ಮಾಡುವ ಸಲಹೆಯನ್ನು ಮತ್ತು ತರಗತಿಗಳಲ್ಲಿ ಮಾಸ್ಕ್ ಧರಿಸುವ ಕಡ್ಡಾಯ ನಿಯಮವನ್ನು ಸರ್ಕಾರ ಕಳೆದ ವಾರವೇ ಕೈಬಿಟ್ಟಿದೆ.
ಇದನ್ನೂ ಓದಿ:ಏರ್ ಇಂಡಿಯಾ ಇಂದು ಟಾಟಾ ವಶಕ್ಕೆ?
ಬ್ರಿಟನ್ ನಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 84 ಪ್ರತಿಶತದಷ್ಟು ಜನರು ತಮ್ಮ ಎರಡನೇ ಲಸಿಕೆ ಡೋಸನ್ನು ಪಡೆದಿದ್ದಾರೆ. ಅರ್ಹರಲ್ಲಿ 81 ಪ್ರತಿಶತದಷ್ಟು ಜನರು ತಮ್ಮ ಬೂಸ್ಟರ್ ಶಾಟನ್ನು ಕೂಡಾ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮ್ಮದೇ ಆದ ಸಾರ್ವಜನಿಕ ಆರೋಗ್ಯ ನಿಯಮಗಳನ್ನು ರೂಪಿಸುವ ಸ್ಕಾಟ್ಲೆಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್ ಕೂಡಾ ತಮ್ಮ ನಿರ್ಬಂಧಗಳನ್ನು ಇದೇ ರೀತಿ ಸಡಿಲಿಸಿವೆ.