Advertisement

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಇಂಗ್ಲೆಂಡ್ ಬ್ಯಾಟರ್ ಅಲೆಕ್ಸ್ ಹೇಲ್ಸ್

06:13 PM Aug 04, 2023 | Team Udayavani |

ಲಂಡನ್: ಇಂಗ್ಲೆಂಡ್ ನ ಟಿ20 ವಿಶ್ವಕಪ್ ವಿಜೇತ ಆಟಗಾರ ಅಲೆಕ್ಸ್ ಹೇಲ್ಸ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. 12 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ನಿವೃತ್ತಿ ಘೋಷಿಸಿದ್ದಾರೆ.

Advertisement

2011ರ ಆಗಸ್ಟ್ ನಲ್ಲಿ ಅಲೆಕ್ಸ್ ಹೇಲ್ಸ್ ಅವರು ಭಾರತದ ವಿರುದ್ಧ ಟಿ20 ಕ್ರಿಕೆಟ್ ಮೂಲಕ ಪದಾರ್ಪಣೆ ಮಾಡಿದ್ದರು. ಇಂಗ್ಲೆಂಡ್ ಪರ 75 ಟಿ20 ಪಂದ್ಯಗಳು, 70 ಏಕದಿನ ಪಂದ್ಯಗಳು ಮತ್ತು 11 ಟೆಸ್ಟ್‌ ಗಳಲ್ಲಿ ಅಲೆಕ್ಸ್ ಹೇಲ್ಸ್ ಕಾಣಿಸಿಕೊಂಡಿದ್ದಾರೆ. ಆಕ್ರಮಣಕಾರಿ ಆಟದ ಶೈಲಿಯೊಂದಿಗೆ ಆಡುವ ಹೇಲ್ಸ್ ಟಿ20 ಮಾದರಿಯಲ್ಲಿ ಹೆಚ್ಚಿನ ಯಶಸ್ಸು ಕಂಡಿದ್ದಾರೆ.

ಇದನ್ನೂ ಓದಿ:ರಾಹುಲ್ ಗಾಂಧಿಗೆ ಮರಳಿದ ಸಂಸದ ಸ್ಥಾನ: ಚುನಾವಣೆಗೂ ಸ್ಪರ್ಧೆ ನಡೆಸಬಹುದು ರಾಗಾ

2022ರಲ್ಲಿ ಪಾಕಿಸ್ಥಾನದ ವಿರುದ್ಧ ಟಿ20 ಪಂದ್ಯ ಅಲೆಕ್ಸ್ ಹೇಲ್ಸ್ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಏಕದಿನ ಆರು ಮತ್ತು ಟಿ20ಯಲ್ಲಿ ಅವರು ಒಂದು ಶತಕ ಬಾರಿಸಿದ್ದಾರೆ.

2022ರ ಟಿ20 ವಿಶ್ವಕಪ್ ವಿಜೇತ ಮತ್ತು 2016ರ ಟಿ20 ವಿಶ್ವಕಪ್ ರನ್ನರ್ ಅಪ್ ತಂಡದ ಸದಸ್ಯನಾಗಿದ್ದ ಅಲೆಕ್ಸ್ ಹೇಲ್ಸ್, ಸದ್ಯ ಟಿ20 ಫ್ರಾಂಚೈಸಿ ಕ್ರಿಕೆಟ್ ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next