Advertisement
“ವಿಸ್ಡನ್ ಟ್ರೋಫಿ’ಯನ್ನು ಮರಳಿ ಪಡೆಯಬೇಕಾದರೆ ಇಂಗ್ಲೆಂಡ್ ಈ ಪಂದ್ಯವನ್ನು ಗೆಲ್ಲಬೇಕಾದುದು ಅಗತ್ಯ. ಅಕಸ್ಮಾತ್ ಡ್ರಾ ಫಲಿತಾಂಶ ದಾಖಲಾದರೂ ಟ್ರೋಫಿ ಕೆರಿಬಿಯನ್ನರ ಬಳಿಯೇ ಉಳಿಯಲಿದೆ. 2018 -19ರ ತವರಿನ ಸರಣಿಯನ್ನು ವಿಂಡೀಸ್ 2-1 ಅಂತರದಿಂದ ಗೆದ್ದು ವಿಸ್ಡನ್ ಟ್ರೋಫಿ ಮೇಲೆ ಹಕ್ಕು ಚಲಾಯಿಸಿತ್ತು. ಸಮಬಲಕ್ಕೆ ಬಂದ ಸರಣಿ: 3 ದಿನಗಳ ಹಿಂದೆ ಇದೇಅಂಗಳದಲ್ಲಿ ಮುಗಿದ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ 113 ರನ್ನುಗಳಿಂದ ಗೆದ್ದು ಸರಣಿಯನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಗಿತ್ತು. ಸೌತಾಂಪ್ಟನ್ ಪಂದ್ಯ ವನ್ನು 4 ವಿಕೆಟ್‌ಗಳಿಂದ ಗೆದ್ದ ಹೋಲ್ಡರ್ ಪಡೆ, ಮ್ಯಾಂಚೆ ಸ್ಟರ್‌ನಲ್ಲಿ ಕೊನೆಯ ದಿನದ ಬ್ಯಾಟಿಂಗ್ ಒತ್ತಡವನ್ನು ತಾಳಲಾಗದೆ ಆತಿಥೇಯರಿಗೆ ಶರಣಾಗಿತ್ತು. 312 ರನ್ ಗುರಿ ಲಭಿಸಿದಾಗ ವಿಂಡೀಸಿಗೆ ಇದನ್ನು ಸಾಧಿಸ ಲೇ ಬೇಕಾದ ಜರೂರತ್ತೇನೂ ಇರಲಿಲ್ಲ. ಪಂದ್ಯವನ್ನು ಡ್ರಾ ಮಾಡುವ ಹಾದಿ ತೆರೆದೇ ಇತ್ತು. ಆದರೆ ಇಂಗ್ಲೆಂಡ್ ಬೌಲರ್ ಘಾತಕ ದಾಳಿ ಸಂಘಟಿಸಿ ವಿಂಡೀಸಿನ ಬ್ಯಾಟಿಂಗ್ ಸರದಿಯನ್ನು
ಸೀಳಿಹಾಕುವಲ್ಲಿ ಯಶಸ್ವಿಯಾದರು.
ಮ್ಯಾಂಚೆಸ್ಟರ್ ವಾತಾವರಣ ಟೆಸ್ಟ್ ಕ್ರಿಕೆಟಿಗೆ ಪ್ರಶಸ್ತವಾಗಿಲ್ಲ. ಮೊದಲ ದಿನ ಮೋಡ ಕವಿದ ವಾತಾವರಣವಿದ್ದು, ಅನಂತರದ ನಾಲ್ಕೂ ದಿನ ಪಂದ್ಯಕ್ಕೆ ಮಳೆಯಿಂದ ಅಡಚಣೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಇದರಿಂದ ಸರಣಿ ವಶಪಡಿಸಿಕೊಳ್ಳುವ ಯೋಜನೆಯಲ್ಲಿರುವ ಇಂಗ್ಲೆಂಡಿಗೆ ಹಿನ್ನಡೆಯಾದೀತು ಎಂಬ ಆತಂಕ ಎದುರಾಗಿದೆ.