Advertisement

Engineer’s Day-Techno Week 2023; ಎಂಜಿನಿಯರ್ ಹೊಸತನಕ್ಕೆ ತೆರೆದುಕೊಳ್ಳಲಿ: ಜಯಕುಮಾರ್‌

12:37 AM Sep 16, 2023 | Team Udayavani |

ಮಂಗಳೂರು: ಅಸೋಸಿಯೇಶನ್‌ ಆಫ್‌ ಕನ್ಸಲ್ಟಿಂಗ್‌ ಸಿವಿಲ್‌ ಎಂಜಿನಿಯರ್ಸ್‌ (ಇಂಡಿಯಾ) ಮಂಗಳೂರು ಸೆಂಟರ್‌ ವತಿಯಿಂದ ದಿ ರ್‍ಯಾಂಮ್ಕೊ ಸಿಮೆಂಟ್ಸ್‌ ಲಿಮಿಟೆಡ್‌ ಸಹಯೋಗದಲ್ಲಿ ನಗರದಲ್ಲಿ ಶುಕ್ರವಾರ ಎಂಜಿನಿಯರ್ಸ್‌ ಡೇ ಮತ್ತು ಟೆಕ್ನೋ ವೀಕ್‌-2023 ಕಾರ್ಯಕ್ರಮ ನಡೆಯಿತು.

Advertisement

ಮುಖ್ಯ ಅತಿಥಿಗಳಾಗಿ ಭಾಗವ ಹಿಸಿದ್ದ ದಿ ರ್‍ಯಾಂಮ್ಕೊ ಸಿಮೆಂಟ್ಸ್‌ ಲಿ. ಅಧ್ಯಕ್ಷ ಜಯಕುಮಾರ್‌ ಎಂ. ಮಾತನಾಡಿ, ಎಂಜಿನಿಯರ್‌ಗಳು ತಮ್ಮ ಕೆಲಸದಲ್ಲಿ ಶ್ರದ್ಧೆ, ಮತ್ತು ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಹೊಸತನಕ್ಕೆ ಸದಾ ತೊಡಗಿಸಿಕೊಳ್ಳಬೇಕು. ಕರ್ನಾಟಕ ಪ್ರತಿಭಾವಂತ ಎಂಜಿನಿ ಯರ್‌ಗಳನ್ನು ಹೊಂದಿದ್ದು ಅನೇಕರು ಸಾಧನೆಗೈದಿದ್ದಾರೆ. ಹಲವು ಎಂಜಿನಿಯ ರ್‌ಗಳನ್ನು ಹುಟ್ಟುಹಾಕಿಸಿದ ಎಸಿಸಿಇ ಮಂಗಳೂರು ವಿಭಾಗಕ್ಕೆ 25 ವರ್ಷ ಪೂರ್ಣಗೊಳ್ಳುವ ಹೊತ್ತಲ್ಲೇ ರ್‍ಯಾಂಮ್ಕೊ ಉತ್ಪನ್ನವೂ 25 ವರ್ಷ ಪೂರ್ಣಗೊಳಿಸುತ್ತಿದೆ. ನಾವು 25 ವರ್ಷಗಳ ಹಿಂದೆ ಸಿಮೆಂಟ್‌ ಉತ್ಪಾದನೆ ವೇಳೆ ಅನೇಕ ಸವಾಲುಗಳನ್ನು ಎದುರಿಸಿದ್ದೆವು. ಆಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಹೇಳಿದರು.

ಅಸೋಸಿಯೇಶನ್‌ ಆಫ್‌ ಕನ್ಸಲ್ಟಿಂಗ್‌ ಸಿವಿಲ್‌ ಎಂಜಿನಿಯರ್ಸ್‌ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಲಾºವಿ ಮಾತನಾಡಿ, ಎಂಜಿನಿಯರ್‌ ಕ್ಷೇತ್ರದಲ್ಲಿ ಹಲವಾರು ಅವಕಾಶಗಳಿವೆ. ಸರ್‌ ಎಂ. ವಿಶ್ವೇಶ್ವರಯ್ಯ ಅವರು ನಡೆದು ಬಂದ ಹಾದಿ ನಮಗೆಲ್ಲರಿಗೂ ಮಾದರಿಯಾಗಬೇಕು ಎಂದು ತಿಳಿಸಿದರು.

ಪ್ರಶಸ್ತಿ ಪ್ರದಾನ
ಈ ಸಂದರ್ಭ ಎಮಿನೆಂಟ್‌ ಎಂಜಿನಿಯರ್‌ ಪ್ರಶಸ್ತಿಯನ್ನು ಕನ್ಸಲ್ಟಿಂಗ್‌ ಎಂಜಿನಿಯರ್‌ ಕೆ. ಬಾಲಕೃಷ್ಣ ಶೆಟ್ಟಿ, ಸ್ಟ್ರಕ್ಚರಲ್‌ ಎಂಜಿನಿಯರ್‌ಗಳಾದ ಆನಂದ ಭಟ್‌ ಮತ್ತು ಅನಿಲ್‌ ಹೆಗ್ಡೆ ಅವರಿಗೆ ಪ್ರದಾನ ಮಾಡಲಾಯಿತು. ಕನ್ಸಲ್ಟಿಂಗ್‌ ಎಂಜಿನಿಯರ್‌ ಸತ್ಯರಂಜನ್‌ ರಾವ್‌ ಅವರಿಗೆ ಅನಂತಮಿತ್ರ ಕಲಾºವಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಜೇಂದ್ರ ಕಲಾºವಿ ಅವರನ್ನು ಸಮ್ಮಾನಿಸಲಾಯಿತು. ಟೆಕ್ನೋ ವೀಕ್‌ 2023 ಮತ್ತುರ್‍ಯಾಂಮ್ಕೊ ತಂಡವನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಎಸಿಸಿಇ ಮಂಗಳೂರು ಸೆಂಟರ್‌ನ ಚೇರ್ಮನ್‌ ಉಜ್ವಲ್‌ ಡಿ’ಸೋಜಾ, ಉಪಾಧ್ಯಕ್ಷ ದೇವದಾಸ್‌ ಕಾಮತ್‌, ಕಾರ್ಯದರ್ಶಿ ವಿನೋದ್‌ ಟಿ. ಡಿ’ಸೋಜಾ, ಖಜಾಂಚಿ ಪಿ. ಏಕನಾಥ ದಂಡೆಕೇರಿ ಇದ್ದರು. ಉಜ್ವಲ್‌ ಸ್ವಾಗತಿಸಿ, ವಿಜಯವಿಷ್ಣು ಮಯ್ಯ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next