Advertisement

ಸಿದ್ಧಗೊಳ್ಳುತ್ತಿದೆ ದೇಶದ ಮೊದಲ ಕೇಬಲ್‌ ಶೈಲಿಯ ರೈಲ್ವೇ ಸೇತುವೆ

07:30 PM Feb 15, 2022 | Team Udayavani |

ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ದೇಶದ ಮೊದಲ ಕೇಬಲ್‌ ಶೈಲಿಯ ರೈಲ್ವೇ ಸೇತುವೆ ನಿರ್ಮಿಸಲಾಗುತ್ತಿದೆ. ಉಧಾಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಯೋಜನೆ ವ್ಯಾಪ್ತಿಯಲ್ಲಿ ಅದನ್ನು ನಿರ್ಮಿಸಲಾಗುತ್ತಿದೆ. ಈ ಕಾಮಗಾರಿಯನ್ನು “ದೇಶದ ಎಂಜಿನಿಯರಿಂಗ್‌ ಕ್ಷೇತ್ರದ ವೈಶಿಷ್ಟé’ ಎಂದು ಕೇಂದ್ರ ರೈಲ್ವೇ ಇಲಾಖೆ ಮಂಗಳವಾರ ಟ್ವೀಟ್‌ ಮಾಡಿದೆ

Advertisement

ಏನು ವಿಶೇಷತೆ?
331 ಮೀಟರ್‌- ನದಿಯ ಮೇಲ್ವೆ„ ಪ್ರದೇಶದಿಂದ ಎತ್ತರದಲ್ಲಿ ಸೇತುವೆ
473.25 ಮೀಟರ್‌- ಒಟ್ಟು ಉದ್ದ
96- ಸೇತುವೆಗಳಿಗೆ ಆಧಾರವಾಗಿ ಇರಲಿರುವ ಕೇಬಲ್‌ಗ‌ಳು
94.25 ಮೀಟರ್‌- ಕೇಂದ್ರ ಭಾಗದ ಒಡ್ಡು
120 ಮೀಟರ್‌- ವಯಡಕ್ಟ್‌ನ ಉದ್ದ
ಎಲ್ಲಿ ನಿರ್ಮಾಣ? ರಿಯಾಸಿ ಜಿಲ್ಲೆಯ ಅಂಜಿ ನದಿಗೆ ಅಡ್ಡಲಾಗಿ
21.653 ಕೋಟಿ ರೂ.-ಉಧಾಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಯೋಜನೆ ವೆಚ್ಚ

ಮೂಲ ಯೋಜನೆ ಹೇಗಿತ್ತು?
ಆರಂಭದಲ್ಲಿ ಚೆನಾಬ್‌ ಮಾದರಿಯ ಕಮಾನು ಸೇತುವೆ ನಿರ್ಮಾಣಕ್ಕೆ ಯೋಚಿಸಲಾಗಿತ್ತು. 2016ರ ಅಕ್ಟೋಬರ್‌ನಲ್ಲಿ ಅದನ್ನು ಕೈಬಿಟ್ಟು ಕೇಬಲ್‌ ಶೈಲಿಯ ಸೇತುವೆ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು.

ಜಗತ್ತಿನ ಎತ್ತರದ ರೈಲ್ವೇ ಸೇತುವೆ
ಫ್ರಾನ್ಸ್‌ನ ಐಫೆಲ್‌ ಟವರ್‌ಗಿಂತ 35 ಮೀಟರ್‌ ಎತ್ತರವಾಗಿರುವ ರೈಲ್ವೇ ಸೇತುವೆ ಇದೇ ಮಾರ್ಗದಲ್ಲಿಯೇ ನಿರ್ಮಾಣವಾಗುತ್ತಿದೆ. ಅದು ನದಿ ಮೇಲ್ಮೆ„ ಪ್ರದೇಶದಿಂದ 359 ಮೀಟರ್‌ ಎತ್ತರದಲ್ಲಿದೆ.

ನಾನು ಇಲ್ಲಿಗೆ ಬಂದಾಗ ಈ ಸೇತುವೆ ಕಾಮಗಾರಿ ಕೈಗೆತ್ತಿಕೊಂಡು ಪೂರ್ಣಗೊಳಿಸುವುದೇ ಸವಾಲಿನ ಕೆಲಸವಾಗಿತ್ತು. ಸದ್ಯ ಅದರ ಪೈಲಾನ್‌ಗಳ ನಿರ್ಮಾಣ ಪೂರ್ತಿಗೊಳಿಸಲಾಗಿದೆ. ಮುಂದಿನ ಒಂದು ವರ್ಷದ ಅವಧಿಯಲ್ಲಿ ಕೇಬಲ್‌ ಮಾದರಿಯ ಕೆಲಸಗಳನ್ನು ಕೈಗೆತ್ತಿಕೊಂಡು ಪೂರ್ತಿಗೊಳಿಸಲಾಗುತ್ತದೆ.
-ಅಜಯ ಕುಮಾರ್‌ ಪಶೀನ್‌, ಹಿಂದುಸ್ತಾನ್‌ ಕನ್‌ಸ್ಟ್ರಕ್ಷನ್‌ ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next