Advertisement
ಪ್ರಸ್ತುತ 5.5 ಮೀ. ಅಗಲವಿರುವ ರಸ್ತೆಯನ್ನು 7 ಮೀ.ಗೆ ವಿಸ್ತರಿಸುವ ಈ ಯೋಜನೆಯಲ್ಲಿ ಒಂದೆರಡು ಅಡಿ ಆಳ, ಅದಕ್ಕೆ ಜಲ್ಲಿ ಹಾಕಿ ಆಮೇಲೆ ಡಾಮರು ಹಾಕುವ ಮತ್ತು ನಂದಾವರದಲ್ಲಿ ಕಾಂಕ್ರೀಟ್ ರಸ್ತೆ, ಆವಶ್ಯಕತೆ ಇರುವಲ್ಲಿ ಕಾಂಕ್ರೀಟ್ ಚರಂಡಿ ನಿರ್ಮಾಣ ಕಾಮಗಾರಿಯಾಗಿದೆ. 42 ಕಿ.ಮೀ. ಉದ್ದದ ಈ ರಸ್ತೆ ಅಭಿವೃದ್ಧಿಗೆ 18 ಕೋ. ರೂ. ಅನುದಾನ ಬಿಡುಗಡೆ ಗೊಂಡಿತ್ತು. ವಿಟ್ಲ ಪೇಟೆಯ ಚರಂಡಿ, ಜಂಕ್ಷನ್ ನಲ್ಲಿ ಸರ್ಕಲ್ ನಿರ್ಮಾಣದ ಚಿಂತನೆಯನ್ನೂ ಲೋಕೋಪಯೋಗಿ ಇಲಾಖೆ ಹೊಂದಿತ್ತು. ಬೆಂಗಳೂರಿನ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಅನುದಾನದಲ್ಲಿ 2017ರ ಆಗಸ್ಟ್‌ನಲ್ಲಿ ಕಾಮಗಾರಿ ಆರಂಭವಾಗಿ ಆಮೆಗತಿಯಲ್ಲಿ ಸಾಗಿತ್ತು. ಮಾರ್ನಬೈಲು, ಮಂಚಿ, ಕೊಳ್ನಾಡು ಮೊದಲಾದೆಡೆ ಕಾಮಗಾರಿ ನಡೆಸಲಾಗಿತ್ತು.
HSDPEE ಗಮನಕ್ಕೆ ರಸ್ತೆ ಕಾಮಗಾರಿ ಮಾಹಿತಿ ನೀಡಲಾಗಿದೆ. ಗುತ್ತಿಗೆದಾರರನ್ನು ಕರೆದು ಅಧಿಕಾರಿಗಳು ಮಾತನಾಡಿದ್ದಾರೆ. ಅವರಿಗೆ ಮತ್ತೂಂದು ಅವಕಾಶ ನೀಡಲಾಗಿದೆ. ಆಗಲೂ ಕಾಮಗಾರಿ ತೃಪಿಕರ ಇದ್ದಲ್ಲಿ ಅವರು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
– ಉಮೇಶ್ ಭಟ್, ಕಾರ್ಯ ನಿರ್ವಾಹಕ ಎಂಜಿನಿಯರ್, PWD, ಬಂಟ್ವಾಳ
Related Articles
ಕಾಮಗಾರಿ ಕಳಪೆಯಾಗಿರುವುದು ಹೌದು. ಪ್ರಸ್ತುತ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ತಾತ್ಕಾಲಿಕ ನಿರ್ವಹಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಸಾಮಾನ್ಯವಾಗಿ ಸೆಪ್ಟಂಬರ್ ತಿಂಗಳ ಕೊನೆಯವರೆಗೆ ಮಳೆ ಬೀಳುತ್ತದೆ. ಮತ್ತೆ ಮಳೆ ಕಡಿಮೆಯಾಗುತ್ತದೆ. ಮಳೆ ಕಡಿಮೆಯಾದ ಕೂಡಲೇ ಅಂದರೆ ಅಕ್ಟೋಬರ್ ತಿಂಗಳಲ್ಲಿ ಕಾಮಗಾರಿಯನ್ನು ಪೂರ್ತಿಗೊಳಿಸಲಾಗುವುದು.
– ಪಾಂಡುರಂಗ, ಎಕ್ಸಿಕ್ಯೂಟಿವ್ ಎಂಜಿನಿಯರ್, ಎಸ್.ಎಚ್.ಡಿ.ಪಿ.
Advertisement