ಎಚ್.ಡಿ.ಕೋಟೆ: ಕ್ರೀಡೆಯಲ್ಲಿ ಸೋಲು ಗೆಲುವು ಒಂದು ನಾಣ್ಯದ ಎರಡು ಮುಖಗಳಿದ್ದಂತೆ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶಾಸಕ ಸಿ.ಅನಿಲ್‌ಕುಮಾರ್ ಸಲಹೆ ನೀಡಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಾಲಾ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಸೋಲು ನಿಮ್ಮ ತಪ್ಪನ್ನು ತೊರಿಸಿ ಎಚ್ಚರಿಸುವ ಮೂಲಕ ಮನಪರಿವರ್ತನೆಯಾಗಿ ಮುಂದೆ ದೊಡ್ಡ ಗುರಿ ಸಾಧನೆಗೆ ಮಾರ್ಗದರ್ಶಕವಾಗಲಿದೆ ಎಂದು ತಿಳಿಸಿದರು.
ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿ ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತಂದ ಸಾಧಕರನ್ನು ಮಾದರಿಯನ್ನಾಗಿಸಿಕೊಂಡು ಆಸಕ್ತ ಕ್ರೀಡೆಯಲ್ಲಿ ಪರಿಶ್ರಮ ಪಡಬೇಕು. ಈ ಮೂಲಕ ಕಾಲೇಜು ಹಾಗೂ ಗ್ರಾಮಕ್ಕೆ ಕೀರ್ತಿ ತರಬೇಕು ಎಂದು ತಿಳಿಸಿದರು.
ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ಮಕ್ಕಳು ಶಾಲಾ ದಿನಗಳಲ್ಲಿ ಕ್ರೀಡೆಯಲ್ಲಿ ಹೆಚ್ಚು ಭಾಗವಹಿಸುವುದರಿಂದ ಆರೋಗ್ಯ ವೃದ್ಧಿಯ ಜೊತೆಗೆ ಕಲಿಕೆಗೆ ಸಹಕಾರಿಯಾಗುತ್ತದೆ. ಕ್ರೀಡೆಯಲ್ಲೂ ಅತ್ಯುತ್ತಮ ಸಾಧನೆ ತೋರಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.
ಆಕರ್ಷಕ ಪಥಸಂಚಲನ: ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ವಿವಿಧ ಶಾಲಾ ಕಾಲೇಜು ಕ್ರೀಡಾಪಟುಗಳು ಆಕರ್ಷಕ ಪಥಸಂಚಲನ ನಡೆಸಿ ಗಣ್ಯರಿಗೆ ಗೌರವ ಸಲ್ಲಿಸಿದರು. ಪಟ್ಟಣ ಠಾಣೆ ಆರಕ್ಷಕ ಉಪನಿರೀಕ್ಷಕ ವಿ.ಸಿ.ಆಶೋಕ್ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಆದಿಚುಂಚನಗಿರಿ ಚುಂಚನಕಟ್ಟೆ ಶಾಖಾ ಮಠದ ಶಿವಾನಂದ ಸ್ವಾಮೀಜಿ, ಜಿಪಂ ಮಾಜಿ ಸದಸ್ಯೆ ನಂದಿನಿ ಚಂದ್ರಶೇಖರ್, ತಾಪಂ ಸದಸ್ಯ ಗಿರಿಗೌಡ, ಪುರಸಭೆ ಸದಸ್ಯ ಎಚ್.ಸಿ.ನರಸಿಂಹಮೂರ್ತಿ,
ಒಕ್ಕಲಿಗ ಸಮಾಜದ ಮುಖಂಡ ಕಾಳೇಗೌಡ, ವಾಸುದೇವ್, ನಾಗರಾಜ್, ಎಚ್.ಡಿ.ಕೋಟೆ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಗೌರವ ಆಡಳಿತಾಧಿಕಾರಿ ಕೆ.ಪಿ.ಬಸವೇಗೌಡ, ಪ್ರಾಂಶುಪಾಲರಾದ ಎಸ್.ಪಿ.ಪ್ರಕಾಶ್, ರವಿಗೌಡ, ನಂದಿನಿ, ತಾಲೂಕು ದೈಹಿಕ ಶಿಕ್ಷಣ ಪರೀವಿಕ್ಷಕ ಪರ್ವೇಜ್ ಕರೀಂ ವುಲ್ಲಾ, ದೈಹಿಕ ಶಿಕ್ಷಕ ಸಂಘದ ಜಿ.ನಾಗೇಶ್, ಶ್ರೀನಿವಾಸ್, ಉಪನ್ಯಾಸಕರಾದ ಮಲ್ಲೇಶ್, ಭೆ„ರೇಗೌಡ, ಸೋಮಶೇಖರ್, ಸ್ವಾಮಿನಾಯ್ಕ ಇತರರಿದ್ದರು.