Advertisement
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
Related Articles
Advertisement
ಪೋಷಕರ ಬಗ್ಗೆ ಕಾಳಜಿ ಇರಲಿ: ಸರ್ಕಾರಿ ರೇಷ್ಮೆ ಬಿತ್ತನೆ ಕೋಠಿಯ ರೇಷ್ಮೆ ಕೃಷಿ ಉಪನಿರ್ದೇಶಕ ಲಕ್ಷ್ಮೀ ನರಸಿಂಹಯ್ಯ ಮಾತನಾಡಿ, ಪ್ರತಿಯೊಬ್ಬ ಮಕ್ಕಳಿಗೂ ತಾನು ಶಿಕ್ಷಣದ ನಂತರ ಏನು ಮಾಡಬೇಕು, ಯಾವ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಅರಿವಿರಬೇಕು. ಆಗ ಓದಿದ ವಿದ್ಯೆ ಸಾರ್ಥಕಗೊಳ್ಳುತ್ತದೆ. ಮಕ್ಕಳ ಒಳಿತಿಗೆ ಸದಾ ಶ್ರಮಿಸುವ ಪೋಷಕರ ಬಗ್ಗೆ ಕಾಳಜಿ ಇರಬೇಕಾದ್ದು ಬಹು ಮುಖ್ಯ. ಈ ಎಲ್ಲದರ ಪಾಲನೆಯಿಂದ ಒಬ್ಬ ಉತ್ತಮ ನಾಗರಿಕ ರೂಪುಗೊಳ್ಳುತ್ತಾನೆ ಎಂದು ಹೇಳಿದರು.
ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಎಂ. ಆರ್. ಸುಮತಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿದ್ದ ನಮ್ಮ ಕಾಲೇಜು ಇಂದು ಬೃಹದಾಕಾರವಾಗಿ ಬೆಳೆದಿದೆ. ಶೈಕ್ಷಣಿಕವಾಗಿ ಅಷ್ಟೇ ಅಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲೂ ನಮ್ಮ ವಿದ್ಯಾರ್ಥಿನಿಯರು ಮುಂಚೂಣಿಯಲ್ಲಿದ್ದಾರೆ. ಇದೆಲ್ಲಾ ನಮ್ಮ ಕಾಲೇಜು ತೋರಿದ ಒಗ್ಗಟ್ಟಿನಿಂದ ಸಾಧ್ಯವಾಗಿದೆ ಎಂದರು. ಕಾಲೇಜಿಗೆ ಒದಗಿಸಬೇಕಾಗಿರುವ ಸೌಕರ್ಯಗಳ ಕುರಿತು ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಸದಾಶಿವಮೂರ್ತಿ, ಸಾಂಸ್ಕೃತಿಕ ಸಂಚಾಲಕ ಟಿ. ಆರ್. ಜಯಣ್ಣ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಚಾಲಕಿ ಡಾ. ಎಂ. ಸಿ. ಪ್ರಭಾವತಿ, ಕ್ರೀಡಾ ಮತ್ತು ರೆಡ್‌ಕ್ರಾಸ್ ಸಂಚಾಲಕ ಹೆಗಡೆ ಮಂಜುನಾಥ್ ಗಣಪತಿ, ರಾಷ್ಟ್ರೀಯ ಸೇವಾ ಯೋಜನೆ ಸಂಚಾಲಕಿ ಎಂ. ಪಾರ್ವತಿ ಉಪಸ್ಥಿತರಿದ್ದರು.