Advertisement
ಭಾರತದ ಸಮಸ್ಯೆ ಒಂದೆರಡಲ್ಲ. ನಾಯಕ ರೋಹಿತ್ ಶರ್ಮ ಗೈರು, ಓಪನರ್ ಯಾರೆಂಬ ಪ್ರಶ್ನೆ, ವಿರಾಟ್ ಕೊಹ್ಲಿಯ ಅನುಮಾನಾಸ್ಪದ ಫಾರ್ಮ್, ಬುಮ್ರಾಗೆ ಎದುರಾಗಿರುವ ಚೊಚ್ಚಲ ನಾಯಕತ್ವದ ಒತ್ತಡ, ಟಿ20ಯಿಂದ ಟೆಸ್ಟ್ ಕ್ರಿಕೆಟಿಗೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ… ಹೀಗೆ ಸಾಲು ಸಾಲು ಸಮಸ್ಯೆಗಳು ಭಾರತವನ್ನು ಕಾಡುತ್ತಿವೆ.
Related Articles
Advertisement
ಒಂದೇ ವರ್ಷದಲ್ಲಿ ಎರಡೂ ಟೆಸ್ಟ್ ತಂಡಗಳ ಚಿತ್ರಣ ಸಂಪೂರ್ಣ ಬದಲಾಗಿದೆ. ಅಂದಿನ ಟೀಮ್ ಇಂಡಿಯಾ ಆರಂಭಿಕರಾದ ರೋಹಿತ್, ರಾಹುಲ್ ಈ ಬಾರಿ ಇಲ್ಲ. ಮಧ್ಯಮ ಸರದಿಯಾ ಬ್ಯಾಟರ್ ಅಜಿಂಕ್ಯ ರಹಾನೆ ಗೈರು ಎದ್ದು ಕಾಣುತ್ತಿದೆ. ಬೌಲಿಂಗ್ ವಿಭಾಗದಲ್ಲಿ ಗೋಚರಿಸುತ್ತಿರುವುದು ಇಶಾಂತ್ ಶರ್ಮ ಅನುಪಸ್ಥಿತಿ ಮಾತ್ರ. ಅಂದು ವಿರಾಟ್ ಕೊಹ್ಲಿ ಕ್ಯಾಪ್ಟನ್ ಆಗಿದ್ದರು. ಈ ಬಾರಿ ಬುಮ್ರಾಗೆ ಮೊದಲ ಅನುಭವ. ಇವರಲ್ಲಿ “ಲೀಡರ್‌ಶಿಪ್’ ಗುಣವಿದೆಯೇ ಎಂಬುದನ್ನು ಇನ್ನಷ್ಟೇ ಕಾಣಬೇಕಿದೆ.
ಬಲಾಡ್ಯಗೊಂಡಿದೆ ಇಂಗ್ಲೆಂಡ್ :
ಇನ್ನೊಂದೆಡೆ ಇಂಗ್ಲೆಂಡ್ ಕಳೆದ ಸಲಕ್ಕಿಂತ ಹೆಚ್ಚು ಬಲಾಡ್ಯವಾಗಿ ಬೆಳೆದಿದೆ. ಆ್ಯಶಸ್ ಮತ್ತು ವೆಸ್ಟ್ ಇಂಡೀಸ್ ಎದುರು ಬೆನ್ನು ಬೆನ್ನಿಗೆ ಅನುಭವಿಸಿದ ಸರಣಿ ಸೋಲನ್ನೇ ಆಂಗ್ಲ ಪಡೆ ಸವಾಲಾಗಿ ಸ್ವೀಕರಿಸಿತು. ಪರಿಣಾಮ, ಮೊನ್ನೆ ಮೊನ್ನೆ ನ್ಯೂಜಿಲ್ಯಾಂಡ್ ವಿರುದ್ಧ 3-0 ಕ್ಲೀನ್‌ಸಿÌàಪ್ ಪರಾಕ್ರಮ. ಇದೇ ಲಯದಲ್ಲಿ ಸಾಗಿ ಸರಣಿಯನ್ನು ಸಮಬಲಕ್ಕೆ ತರುವುದೇ ಇಂಗ್ಲೆಂಡಿನ ಯೋಜನೆ.
ಕಳೆದ ವರ್ಷ ಖನ್ನತೆಯಿಂದಾಗಿ ತಂಡದಿಂದ ಬೇರ್ಪಟ್ಟಿದ್ದ ಬೆನ್ ಸ್ಟೋಕ್ಸ್ ಈ ಬಾರಿ ತಂಡದ ಸಾರಥಿಯಾಗಿದ್ದಾರೆ. ನಾಯಕತ್ವ ಕಳೆದುಕೊಂಡ ಬಳಿಕ ಜೋ ರೂಟ್ ಅವರ ಬ್ಯಾಟ್ ಇನ್ನಷ್ಟು ಬಿರುಸುಗೊಂಡಿದೆ. ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಹಸೀಬ್ ಹಮೀದ್ ಅವರಂಥ ಸಾಮಾನ್ಯ ದರ್ಜೆಯ ಯಾವ ಆಟಗಾರರೂ ಇಲ್ಲ. ಮೊಯಿನ್ ಅಲಿ ಗೈರು ತಂಡಕ್ಕೊಂದು ಸಮಸ್ಯೆಯೇ ಅಲ್ಲ.
ಆ್ಯಂಡರ್ಸನ್ ಸಾರಥ್ಯದ ಬೌಲಿಂಗ್ ವಿಭಾಗವೂ ಘಾತಕವಾಗಿದೆ. ಬ್ರಾಡ್, ಪಾಟ್ಸ್, ಓವರ್ಟನ್, ಲೀಚ್ ಹೆಚ್ಚು ಪರಿಣಾಮಕಾರಿ ಆಗಿ ಗೋಚರಿಸುತ್ತಿದ್ದಾರೆ. ಇವರನ್ನು ನಿಭಾಯಿಸಿ ನಿಂತು ಆಡಬೇಕಾದುದು ಭಾರತದ ಮೊದಲ ಗೇಮ್‌ಪ್ಲ್ರಾನ್ ಆಗಬೇಕಿದೆ.
ಮೊದಲ 4 ಟೆಸ್ಟ್ಗಳ ಫಲಿತಾಂಶ :
ಟೆಸ್ಟ್ / ಸ್ಥಳ /ಫಲಿತಾಂಶ
1ನೇ ಟೆಸ್ಟ್ / ನಾಟಿಂಗ್‌ಹ್ಯಾಮ್ ಡ್ರಾ
2ನೇ ಟೆಸ್ಟ್ / ಲಾರ್ಡ್ಸ್ ಭಾರತಕ್ಕೆ 151 ರನ್ ಜಯ
3ನೇ ಟೆಸ್ಟ್ / ಲೀಡ್ಸ್ ಇಂಗ್ಲೆಂಡಿಗೆ ಇ/76 ರನ್ ಜಯ
4ನೇ ಟೆಸ್ಟ್ / ಓವಲ್ ಭಾರತಕ್ಕೆ 157 ರನ್ ಜಯ
ಬರ್ಮಿಂಗ್ಹ್ಯಾಮ್ನಲ್ಲಿ ಭಾರತ :
ವರ್ಷ/ ಫಲಿತಾಂಶ
1967 132 ರನ್ ಸೋಲು
1974 ಇ/78 ರನ್ ಸೋಲು
1979 ಇ/83 ರನ್ ಸೋಲು
1986 ಡ್ರಾ
1996 8 ವಿಕೆಟ್ ಸೋಲು
2011 ಇ/242 ರನ್ ಸೋಲು
ಸಂಭಾವ್ಯ ತಂಡಗಳು :
ಭಾರತ: ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್/ಆರ್. ಅಶ್ವಿನ್, ಜಸ್‌ಪ್ರೀತ್ ಬುಮ್ರಾ (ನಾಯಕ).
ಇಂಗ್ಲೆಂಡ್: ಅಲೆಕ್ಸ್ ಲೀಸ್, ಜಾಕ್ ಕ್ರಾಲಿ, ಓಲೀ ಪೋಪ್, ಜೋ ರೂಟ್, ಜಾನಿ ಬೇರ್‌ಸ್ಟೊ, ಬೆನ್ ಸ್ಟೋಕ್ಸ್ (ನಾಯಕ), ಸ್ಯಾಮ್ ಬಿಲ್ಲಿಂಗ್ಸ್, ಸ್ಟುವರ್ಟ್ ಬ್ರಾಡ್, ಮ್ಯಾಥ್ಯೂ ಪಾಟ್ಸ್, ಜಾಕ್ ಲೀಚ್, ಜೇಮ್ಸ್ ಆ್ಯಂಡರ್ಸನ್.
ಆರಂಭ: ಅಪರಾಹ್ನ 3.00
ಪ್ರಸಾರ: ಸೋನಿ ಸ್ಪೋರ್ಟ್ಸ್