Advertisement
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಶನಿವಾರ ನಡೆದ ಅಂಗವಿಕಲ ಶಿಕ್ಷಣದ ಪ್ರಚಾರ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಅಹವಾಲು ಸ್ವೀಕರಿಸಿ, ಅಂಗವಿಕಲರು ಹಾಗೂ ಅವರ ಪಾಲಕರ ಜತೆ ಸಂವಾದ ನಡೆಸಿದರು.
ಪ್ರತೀ ತಿಂಗಳ 15ರ ಒಳಗೆ ಹಿಂದಿನ ತಿಂಗಳ ಮಾಸಾಶನ ಸಿಗುತ್ತಾ ಇತ್ತು. ಈಗ ಅದು ತಿಂಗಳ ಕೊನೆಯಾದರೂ ಬರುತ್ತಿಲ್ಲ. ಫಲಾನುಭವಿಗಳು ನಮ್ಮನ್ನು ಕೇಳುತ್ತಾರೆ ಎಂದು ಪೆರಾಬೆಯ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಮುತ್ತಪ್ಪ ಅವರು ದೂರು ನೀಡಿದರು. ಈ ಬಗ್ಗೆ ಅಧಿಕಾರಿಗಳಲ್ಲಿ ವಿಚಾರಿಸಿದ ಶಾಸಕಿ, ತಂತ್ರಾಂಶ ಹೊಂದಾಣಿಕೆಯಿಂದ ಸಮಸ್ಯೆ ಎದುರಾಗಿದೆ. ಸದ್ಯದಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂದರು. ರಾಬಿಯಾ ಮಾತನಾಡಿ, ಮಗ ಎಂಡೋ ಪೀಡಿತ. ತಾನು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ. ತನ್ನ ಮಗನಿಗೆ ಪಿಂಚಣಿ ಬರುತ್ತಿಲ್ಲ ಎಂದು ದೂರಿದರು. ನಿಮ್ಮ ಮಗನ ಹೆಸರನ್ನು ನೋಂದಣಿ ಮಾಡಿಕೊಳ್ಳಿ. ಬಳಿಕ ಅವನಿಗೆ ಗುರುತಿನ ಚೀಟಿ ಸಿಗುತ್ತದೆ. ಆಮೇಲೆ ಪಿಂಚಣಿ ಸಿಗಲಿದೆ ಎಂದು ಹೇಳಿದ ಶಾಸಕರು, ನೋಂದಣಿಗೆ ಕ್ರಮ ಕೈಗೊಳ್ಳುವಂತೆ ಅಧಿ ಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.
Related Articles
ಅಂಗವಿಕಲ್ಯ ಹೊಂದಿರುವವರ ಮನೆಗಳಿಗೆ ರಸ್ತೆ ಇಲ್ಲದಿದ್ದಲ್ಲಿ ಆಯಾ ಗ್ರಾಮ ಪಂಚಾಯತ್‌ಗೆ ಮನವಿ ಸಲ್ಲಿಸಿ. ಅದೇ ರೀತಿ
ನಿವೇಶನ ಇಲ್ಲದವರು ಕೂಡ ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿ. ಪಂಚಾಯತ್ ವತಿಯಿಂದ ನಿವೇಶನ ನೀಡಿದ ಮೇಲೆ ಶಾಸಕಿಗೆ ತಿಳಿಸಿ. ಶಾಸಕರ ಅನುದಾನದಲ್ಲಿ ಮನೆ ಮಂಜೂರು ಮಾಡಿ ಸುತ್ತೇನೆ ಎಂದು ಭರವಸೆ ನೀಡಲಾಯಿತು.
Advertisement
ಇರುವವನೇ ಮನೆಯೊಡೆಯನಿಡ್ಪಳ್ಳಿ ಗ್ರಾಮದ ಸೀತಾ ಅವರ ಮಗನಿಗೆ ಸೀಳು ತುಟಿಯ ಸಮಸ್ಯೆ. ಸೀತಾ ಅವರು ಬೇರೆಯವರ ಜಾಗದಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಸ್ವಂತ ಮನೆ, ನಿವೇಶನ ಇಲ್ಲ ಎಂಬ ದೂರನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಮುಂದಿಟ್ಟರು. ಬೇರೆಯವರ ಜಾಗ ದಲ್ಲಿ ವಾಸಿಸುತ್ತಿದ್ದರೆ ಅದು 94ಸಿಗೆ ಅನ್ವಯವಾಗುವುದಿಲ್ಲ. ಇರುವವನೇ ಮನೆಯ ಒಡೆಯ ಕಾನೂನು ಶೀಘ್ರದಲ್ಲೇ ಜಾರಿಗೆ ಬರಲಿದೆ. ಆಗ ಅವರು ವಾಸಿಸುತ್ತಿರುವ ಮನೆ ಅವರಿಗೇ ಸಿಗಲಿದೆ ಎಂದು ಶಾಸಕರು ನುಡಿದರು. ಪರವಾನಿಗೆ ನೀಡುತ್ತಿಲ್ಲ
ಬೈಕ್ ಮತ್ತು ಕಾರು ಚಾಲನ ಪರವಾನಿಗೆ ನೀಡುತ್ತಿಲ್ಲ ಎಂದು ಯುವಕನೊಬ್ಬ ದೂರು ನೀಡಿದರು. ಅವರಿಗೆ ದೃಷ್ಟಿ ದೋಷ ಇರುವುದನ್ನ ಗಮನಿಸಿದ ಶಾಸಕಿ, ಇಲಾಖೆಯ ನಿಯಮದ ಪ್ರಕಾರ ದೃಷ್ಟಿ ದೋಷ ಇರುವವರಿಗೆ ಡ್ರೈವಿಂಗ್ ಲೈಸೆನ್ಸ್ ನೀಡುವುದಿಲ್ಲ. ಇದು ನಿಯಮ. ನಾನು ಏನೂ ಮಾಡಲು ಬರುವುದಿಲ್ಲ. ಇದಕ್ಕಾಗಿ ನಾನು ಒತ್ತಡ ತರಬೇಕೆಂದು ನಿರೀಕ್ಷಿಸಬೇಡಿ ಎಂದು ಮನವಿ ಮಾಡಿದರು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಸಹಾಯಕರ ಸೇವಾ ಟ್ರಸ್ಟ್‌ನ ನಯನಾ ರೈ, ಶಿಶು ಅಭಿವೃದ್ಧಿ ಯೋಜನಧಿಕಾರಿ ಶಾಂತಿ ಹೆಗಡೆ, ಸಮನ್ವಯ ಶಿಕ್ಷಣ ಸಂಪನ್ಮೂಲ ನೋಡೆಲ್ ಅಧಿ ಕಾರಿ ತನುಜಾ ಎಂ., ಸಮನ್ವಯ ಶಿಕ್ಷಣ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಶಿವಪ್ಪ ರಾಥೋಡ್, ಪುತ್ತೂರು ತಾಲೂಕು ವಿಕಲಚೇತನರ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್ ಉಪಸ್ಥಿತರಿದ್ದರು. ಶಾರದಾ ಕೇಶವ ಪ್ರಾರ್ಥಿಸಿದರು. ಮರಿಯಮ್ಮ, ವಾಣಿಕೃಷ್ಣ, ಶಾಲಿನಿ, ತಾರಾನಾಥ ಸವಣೂರು ಸಹಕರಿಸಿದರು. ವೆಂಕಟೇಶ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರೀಯ ಮಾಧ್ಯಮಿಕ ಯೋಜನೆ ಮತ್ತು ಸರ್ವಶಿಕ್ಷಾ ಅಭಿಯಾನ, ದ.ಕ.ಜಿ.ಪಂ., ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಪುತ್ತೂರು ಕ್ಷೇತ್ರ ಸಂಪನ್ಮೂಲ ಕೇಂದ್ರ, ಸಮನ್ವಯ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು. ಶೇ. 3ರ ಪಾಲು
ಶಾಸಕರ ಅನುದಾನದಲ್ಲಿ ಶೇ. 3ರ ಪಾಲನ್ನು ಅಂಗವಿಕಲರ ಕಲ್ಯಾಣಕ್ಕಾಗಿ ನೀಡಬೇಕೆಂಬ ನಿಯಮ ಇದೆ. ಇದು ಅನುಷ್ಠಾನ ಆಗುತ್ತಿದೆಯೇ ಎಂದು ಸಭೆಯಲ್ಲಿ ಶಾಸಕರಿಗೆ ಪ್ರಶ್ನಿಸಲಾಯಿತು. ಪ್ರತಿಕ್ರಿಯಿಸಿದ ಶಾಸಕಿ, ಈ ಮಾಹಿತಿ ನನಗೂ ಸ್ಪಷ್ಟವಾಗಿ ತಿಳಿದಿಲ್ಲ. ಇದರ ಬಗ್ಗೆ ಸರಕಾರದ ಮಟ್ಟದಲ್ಲಿ ಸ್ಪಷ್ಟೀಕರಣ ಪಡೆದುಕೊಳ್ಳುವೆ. ಸಾರ್ವಜನಿಕ ನೆಲೆಯನ್ನು ಹೊರತುಪಡಿಸಿ ವೈಯಕ್ತಿಕ ನೆಲೆಯಲ್ಲಿ ಸರಕಾರದ ದುಡ್ಡನ್ನು ನೀಡಲು ಬರುವುದಿಲ್ಲ ಎಂಬುದು ಇದುವರೆಗಿನ ನಿಯಮ. ಹಾಗೊಂದು ವೇಳೆ ಹೊಸ ನಿಮಯ ಪ್ರಕಾರ ಕೊಡಬಹುದು ಎಂದಿದ್ದರೆ ಖಂಡಿತ ವಿನಿಯೋಗಿಸುವೆ ಎಂದು ಶಾಸಕರು ಉತ್ತರಿಸಿದರು.